ಕರ್ನಾಟಕ

karnataka

ETV Bharat / sukhibhava

ಭವಿಷ್ಯದ ಸಾಂಕ್ರಾಮಿಕತೆಗೆ ಜಾಗತಿಕ ಸಿದ್ಧತೆ ಅವಶ್ಯ; ವಿಶ್ವಸಂಸ್ಥೆ ಮುಖ್ಯಸ್ಥರ ಕರೆ

ಕೋವಿಡ್​ ಸೋಂಕಿನ ತಳಿಗಳು ಬೆದರಿಕೆ ಒಡ್ಡುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ನಾವು ಸಿದ್ಧರಾಗಬೇಕಿದೆ.

global preparedness against future pandemics
global preparedness against future pandemics

By ETV Bharat Karnataka Team

Published : Dec 28, 2023, 10:35 AM IST

ಜಿನೀವಾ: ಈಗಾಗಲೇ ಕೋವಿಡ್​ 19 ಸಾಂಕ್ರಾಮಿಕತೆಯಿಂದ ಪಾಠ ಕಲಿತಿರುವ ಜಗತ್ತು ಭವಿಷ್ಯದಲ್ಲಿ ಎದುರಾಗುವ ಸಾಂಕ್ರಾಮಿಕತೆಯ ಬಗ್ಗೆ ಸಿದ್ಧತೆ ನಡೆಸಬೇಕಿದೆ ಎಂದು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್​​ ಕರೆ ನೀಡಿದ್ದಾರೆ. ಸಾಂಕ್ರಾಮಿಕ ಸಿದ್ಧತೆಯ ಅಂತಾರಾಷ್ಟ್ರೀಯ ದಿನದಲ್ಲಿ ಈ ಕುರಿತು ಅವರು ಮಾತನಾಡಿದ್ದಾರೆ.

ಮತ್ತೊಂದು ಸಾಂಕ್ರಾಮಿಕತೆ ಬರುವ ಹೊತ್ತಿಗೆ ನಾವು ಇನ್ನೂ ಉತ್ತಮವಾಗಬೇಕು. ಆದರೆ, ನಾವು ಇನ್ನೂ ಸಿದ್ಧರಾಗಿಲ್ಲ. ಈಗಾಗಲೇ ಕೋವಿಡ್​ 19ನಿಂದ ಪಾಠದ ಅನುಸಾರ ಸನ್ನದ್ಧತೆ ಅವಶ್ಯವಾಗಿದೆ ಎಂದು ತಿಳಿಸಿದರು.

ಶ್ರೀಮಂತ ರಾಷ್ಟ್ರಗಳು ಹೊಂಸಿರುವ ಸಾಂಕ್ರಾಮಿಕ ಆರೋಗ್ಯ ಪೂರೈಕೆ ಸಂಗ್ರಹಿಸುವ ಮತ್ತು ನಿಯಂತ್ರಿಸುವುದನ್ನು ನಾವು ತ್ಯಜಿಸಬೇಕು. ಇದರ ಬದಲಿಗೆ ಪ್ರತಿ ರಾಷ್ಟ್ರಗಳು ತಮ್ಮದೇ ಆದ ರೋಗ ಪತ್ತೆ, ಚಿಕಿತ್ಸೆ ಮತ್ತು ಲಸಿಕೆಗಳನ್ನು ಹೊಂದಬೇಕು ಎಂದರು.

ಇದೇ ವೇಳೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅದರ ಆರ್ಥಿಕ ಅಧಿಕಾರವನ್ನು ಬಲಪಡಿಸಬೇಕಿದೆ ಎಂದು ಒತ್ತಿ ಹೇಳಿದರು. ನಮ್ಮ ಮುಂದಿನ ದಾರಿ ಜಾಗತಿಕ ಸಹಕಾರದೊಂದಿಗೆ ಇದೆ. ಜಾಗತಿಕವಾಗಿ ವೈರಸ್​ನ ಕಣ್ಗಾವಲನ್ನು ಸುಧಾರಿಸಬೇಕಿದೆ. ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು. ಜಾಗತಿಕ ಆರೋಗ್ಯ ಪೂರೈಕೆಯ ಭರವಸೆಗಳನ್ನು ನೀಡಬೇಕಿದೆ ಎಂದು ತಿಳಿಸಿದರು.

ಈ ಎಲ್ಲಾ ಪ್ರಯತ್ನಗಳು ಪ್ರಗತಿಯಲ್ಲಿದೆ. ಸೆಪ್ಟೆಂಬರ್​ನಲ್ಲಿ ಸಾಂಕ್ರಾಮಿಕ ತಡೆಗಟ್ಟುವಿಕೆ, ಸಿದ್ಧತೆ ಮತ್ತು ಪ್ರತಿಕ್ರಿಯೆ ಕುರಿತು ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಇದು ದೃಢವಾದ ರಾಜಕೀಯ ಘೋಷಣೆಯೊಂದಿಗೆ ಮುಕ್ತಾಯಗೊಂಡಿದೆ. ಇದು ಸಾಂಕ್ರಾಮಿಕ ಒಪ್ಪಂದದ ಕುರಿತು ನಡೆಯುತ್ತಿರುವ ಮಾತುಕತೆಗಳಿಗೆ ಪೂರಕವಾಗಿದೆ.

ಒಟ್ಟಾಗಿ ಕೋವಿಡ್​ 19 ಪಾಠಗಳ ಮೇಲೆ ಕಾರ್ಯ ನಿರ್ವಹಣೆ ಮಾಡಿ ಆರೋಗ್ಯಯುತ ಉತ್ತಮ ಜಗತ್ತನ್ನು ನಿರ್ಮಾಣಕ್ಕೆ ಸಿದ್ಧತೆ ಮಾಡೋಣ ಎಂದರು. ವ

2020 ಡಿಸೆಂಬರ್​ 7ರಂದು ಕೋವಿಡ್​​ 19 ಸಾಂಕ್ರಾಮಿಕತೆ ಜಾಗತಿಕವಾಗಿ ಕಂಡ ಬಳಿಕ ಡಿಸೆಂಬರ್ 27 ಅನ್ನು ಸಾಂಕ್ರಾಮಿಕ ಸನ್ನದ್ಧತೆಯ ಅಂತರರಾಷ್ಟ್ರೀಯ ದಿನವೆಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.

ಮಿಲಿಯಂತರ ಜನರ ಜೀವನದ ಮೇಲೆ ಕೋವಿಡ್​ 19 ಪರಿಣಾಮ ಬೀರಿತು. ಮೂರು ವರ್ಷಗಳ ಜಾಗತಿಕ ಪ್ರಯತ್ನದ ನಂತರ ಮೇ 5ರಂದು ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್​ 19 ಇನ್ಮು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಾಗಿ ಉಳಿದಿಲ್ಲ ಎಂದು ಘೋಷಿಸಿತು. ಹಾಗೆಂದ ಮಾತ್ರಕ್ಕೆ ಸೋಂಕು ಜಾಗತಿಕ ಬೆದರಿಕೆ ಆಗಿರುವುದಿಲ್ಲ ಎಂದು ಅಲ್ಲ. ಇದರ ತಳಿಗಳು ಬೆದರಿಕೆ ಒಡ್ಡುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ನಾವು ಸಿದ್ಧರಾಗಬೇಕಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಜೀವಿಗಳ ಪ್ರತಿರಕ್ಷಣಾ ವ್ಯವಸ್ಥೆ ತಡೆ ಹಿಡಿಯುವ ಕೋವಿಡ್​ ಪ್ರೋಟಿನ್​ ಪತ್ತೆ

ABOUT THE AUTHOR

...view details