ಹೈದ್ರಾಬಾದ್:ಜಗತ್ತಿನಲ್ಲಿ ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್ ಬಗ್ಗೆ ಸಮಾಜದಲ್ಲಿ ಅರಿವಿನ ಕೊರತೆ ಇದೆ. ಈ ಸಮಸ್ಯೆಯಲ್ಲಿ ನರವೈಜ್ಞಾನಿಕ ಅಸಹಜತೆಗಳಿಂದ ಮಗು ಬಳಲುತ್ತಿದ್ದು, ಸಂವಹನ ಕೊರತೆ ಎದುರಿಸುತ್ತಿರುತ್ತದೆ. ಈ ಹಿನ್ನೆಲೆ ಈ ಆಟಿಸಂ ಸ್ಥಿತಿ ಮತ್ತು ಅದರಿಂದ ಜನರು ಬಳಲುತ್ತಿರುವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದಾಗಿ ಏಪ್ರಿಲ್ 2ಅನ್ನು ವಿಶ್ವ ಅಟಿಸಂ ಜಾಗೃತಿ ದಿನವಾಗಿ ಆಚರಿಸಲಾಗುತ್ತದೆ. ಈ ವರ್ಷ ಈ ದಿನವನ್ನು "Transformation: Toward a Neuro-Inclusive World for All” ಎಂಬ ಘೋಷವಾಕ್ಯದಿಂದ ಆಚರಿಸಲಾಗುತ್ತದೆ.
ರೋಗ ಪತ್ತೆ ಕಷ್ಟ: ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್ ಹೊಂದಿರುವ ಮಗುವು ನರ ಬೆಳವಣಿಗೆ ಅಸ್ವಸ್ಥತೆಯನ್ನು ಹೊಂದಿರುತ್ತದೆ. ಆಟಿಸಂ ಅನ್ನು ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್ (ಎಡಿಎಸ್) ಎಂದು ಪರಿಚಿತವಾಗಿದೆ. ಮಗು ಜನಿಸಿದ ಮೂರು ವರ್ಷದೊಳಗೆ ಈ ಸಮಸ್ಯೆ ಬೆಳಕಿಗೆ ಬರುತ್ತದೆ. ಈ ಅಸ್ವಸ್ಥತೆಯಿಂದ ಮಗು ಜೀವನ ಪರ್ಯಂತ ಸಮಸ್ಯೆ ಅನುಭವಿಸುವಂತೆ ಆಗುತ್ತದೆ. ಪುರುಷರು ಮತ್ತು ಮಹಿಳೆ ಇಬ್ಬರಲ್ಲೂ ಈ ಸಮಸ್ಯೆ ಕಂಡು ಬರುತ್ತದೆ. ಇದು ಮಗು ಜನಿಸಿದ ವೇಳೆ ಪತ್ತೆಯಾಗುವುದಿಲ್ಲ. ಆದರೆ, ಕಾಲ ಕ್ರಮೇಣ ಈ ಸಮಸ್ಯೆಯು ಪತ್ತೆಯಾಗುತ್ತದೆ. ಈ ಸಮಸ್ಯೆಗೆ ಕಾರಣ ಪರಿಸರ ಜೊತೆಗೆ ಅನುವಂಶಿಕತೆಯಾಗಿದೆ. ಮಕ್ಕಳ ನಡವಳಿಕೆಯ ಮೌಲ್ಯಮಾಪನ, ಶ್ರವಣ ಮತ್ತು ದೃಷ್ಟಿ ಸಮಸ್ಯೆಗಳನ್ನು ಪರಿಶೀಲಿಸಲು ಆಡಿಯೋ-ದೃಶ್ಯ ಪರೀಕ್ಷೆಗಳು, ಔದ್ಯೋಗಿಕ ಚಿಕಿತ್ಸೆ, ಸ್ಕ್ರೀನಿಂಗ್ ಮತ್ತು ಅಭಿವೃದ್ಧಿ ಪ್ರಶ್ನಾವಳಿಗಳಂತಹ ವಿವಿಧ ಸ್ಕ್ರೀನಿಂಗ್‌ಗಳ ಮೂಲಕ ಆಟಿಸಂ ಅನ್ನು ಕಂಡುಹಿಡಿಯಬಹುದು.