ಹೈದರಾಬಾದ್: ಕಣ್ಣಿನ ಸಮಸ್ಯೆಯಲ್ಲಿ ಗ್ಲುಕೋಮ ಪ್ರಮುಖವಾಗಿದೆ. ಇದನ್ನು ಸರಿಯಾದ ಸಮಯಕ್ಕೆ ಚಿಕಿತ್ಸೆ ಮಾಡದಿದ್ದರೆ, ರೋಗಿಗಳು ದೃಷ್ಟಿಯನ್ನೇ ಕಳೆದುಕೊಳ್ಳು ಅಪಾಯವನ್ನು ಹೊಂದಿರುತ್ತಾರೆ. ಪ್ರತಿ ವರ್ಷ ಮಾರ್ಚ್ 12ರಂದು ವಿಶ್ವ ಗ್ಲುಕೋಮ ದಿನವನ್ನಾಗಿ ಆಚರಿಸಲಾಗುತ್ತದೆ. ಗ್ಲುಕೋಮ ಕುರಿತು ಜಾಗತಿಕವಾಗಿ ಅರಿವು ಮೂಡಿಸುವ ಉದ್ದೇಶದಿಂದ ವರ್ಲ್ಡ್ ಗ್ಲುಕೋಮಾ ಅಸೋಸಿಯೇಷನ್ ಮತ್ತು ವರ್ಲ್ಡ್ ಗ್ಲುಕೋಮಾ ಪೇಷಂಟ್ ಅಸೋಸಿಯೇಷನ್ ಜಂಟಿಯಾಗಿ ಈ ದಿನದ ಆಚರಣೆಗೆ ಮುಂದಾಯಿತು. ಇದರ ಜೊತೆಗೆ ಈ ವರ್ಷ ಅಂದರೆ 2023ರಲ್ಲಿ ಜಾಗತಿಕ ಗ್ಲುಕೋಮಾ ಸಪ್ತಾಹಿಕವನ್ನು ಮಾರ್ಚ್ 12ರಿಂದ 18ರವರೆಗೆ ಆಚರಿಸಲಾಗುತ್ತಿದೆ. ಈ ಬಾರಿಯೂ ಈ ದಿನದ ಘೋಷ ವಾಕ್ಯ. ದ ವರ್ಲ್ಡ್ ಇಸ್ ಬ್ರೈಟ್, ಸೇವ್ ಯೂವರ್ ಸೈಟ್.
ಗ್ಲುಕೋಮಾ ಸಾಮಾನ್ಯವಾಗಿ ಕಪ್ಪು ಕ್ಯಾಟ್ರಕ್ಟ್ನಿಂದಲೇ ಪರಿಚಿತ. ಆದರೆ, ಇದು ತಪ್ಪು ಕಲ್ಪನೆ. ಗ್ಲಕೋಮಾ ಎಂಬುದು ಒಂದು ರೋಗ ಅಥವಾ ಕಣ್ಣಿನ ಅಪ್ಟಿಕ್ ನರಕ್ಕೆ ಹಾನಿಯೊಂದಿಗೆ ಸಂಬಂಧ ಹೊಂದಿದೆ. ಸರಿಯಾದ ಸಮಯಕ್ಕೆ ಇದನ್ನು ಪತ್ತೆ ಮಾತುಡುವುದು, ಚಿಕಿತ್ಸೆ ನೀಡುವುದು ಅವಶ್ಯವಾಗಿದೆ. ಅನೇಕ ಬಾರಿ ಈ ಸಮಸ್ಯೆ ದೃಷ್ಟಿ ಕಳೆದುಕೊಳ್ಳುವುದಕ್ಕೆ ಕಾರಣವಾಗುತ್ತದೆ. ಇದರಲ್ಲಿ ಮೂರು ರೀತಿಯ ಗ್ಲುಕೋಮ ಕಾಣಬಹುದು. ಒಪಲ್ ಆ್ಯಂಗಲ್ ಗ್ಲುಕೋಮ, ಆ್ಯಂಗಲ್ ಕ್ಲೋಸರ್ ಗ್ಲುಕೋಮ ಮತ್ತು ನಾರ್ಮಲ್ ಟೆನ್ಷನ್ ಗ್ಲುಕೋಮ.
60 ವರ್ಷ ಮೇಲ್ಪಟ್ಟವರಲ್ಲಿ ಈ ಗ್ಲುಕೋಮದ ಅಪಾಯ ಹೆಚ್ಚು. ಆದರೆ, ಯುವ ಜನರಲ್ಲೂ ಈ ಸಮಸ್ಯೆ ಕಾಡದೇ ಇರಲಾರದು. ಆದಾಗ್ಯೈ, ಯುವ ಜನರಲ್ಲಿ ಈ ಸಮಸ್ಯೆ ಕಡಿಮೆ. ಡಯಾಬೀಟಿಸ್, ಹೆಚ್ಚಿನ ರಕ್ತದೊತ್ತಡ ಕೂಡ ಈ ಗ್ಲುಕೋಮಗೆ ಕಾರಣವಾಗಬಹುದು. ಇದರ ಹೊರತಾಗಿ, ವಂಶವಾಹಿನಿ ಅಥವಾ ಕುಟುಂಬದ ಇತಿಹಾಸ, ಕಣ್ಣಿನ ಅಪಘಾತ ಅಥವಾ ಸಮಸ್ಯೆ, ದೀರ್ಘವಾಧಿ ಸ್ಟಿರಿಯಡ್ ಅಥವಾ ಔಷಧವೂ ಈ ಗ್ಲುಕೋಮಕ್ಕೆ ಕಾರಣವಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರಣ, ಜಗತ್ತಿನಲ್ಲಿ ಅಂಧತ್ವಕ್ಕೆ ಕಾರಣವಾಗುತ್ತಿರುವ ಎರಡನೇ ಪ್ರಮುಖ ಕಾರಣ ಈ ಗ್ಲುಕೋಮವಾಗಿದೆ. ಭಾರತದಲ್ಲಿ 12 ಮಿಲಿಯನ್ ಜನರು ಈ ಗ್ಲುಕೋಮದಿಂದ ಬಳಲುತ್ತಿದ್ದು, 1.2 ಮಿಲಿಯನ್ ಮಂದಿ ಇದರಿಂದ ದೃಷ್ಟಿ ಕಳೆದುಕೊಂಡಿದ್ದಾರೆ. ಜಾಗತಿಕವಾಗಿ 4.5 ಮಿಲಿಯನ್ ಜನರು ಇದರಿಂದಾಗಿ ಅಂಧತ್ವಕ್ಕೆ ಗುರಿಯಾಗಿದ್ದಾರೆ.
ಶೇ 50ರಷ್ಟು ಜನರಿಗೆ ಗ್ಲುಕೋಮ ಸಮಸ್ಯೆಯಿಂದ ಬಳಲುತ್ತಿದ್ದರೂ ಅದು ಅವರ ಮೇಲೆ ಪರಿಣಾಮ ಬೀರುವವರೆಗೂ ಅರಿವಿಗೆ ಬರುವುದಿಲ್ಲ. ಅವರು ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದೇ, ಕ್ರಮೇಣ ದೃಷ್ಟಿ ಕಳೆದಯಕೊಳ್ಳುತ್ತಾರೆ. ವೈದ್ಯರ ಪ್ರಕಾರ ಕಳೆದ 10 ವರ್ಷದಲ್ಲಿ ಈ ಪ್ರಕರಣದಲ್ಲಿ ಗಮನಾರ್ಹ ಏರಿಕೆ ಕಂಡಿದೆ. ಈ ಪ್ರಕರಣ ಏರಿಕೆಯಲ್ಲಿ ಮೊದಲ ಕಾರಣ ಜೀವನ ಶೈಲಿ. ಡಯಾಬೀಟಿಸ್ ಮತ್ತು ಅಧಿಕ ರಕ್ತದೊತ್ತಡ ಕೂರ ಗ್ಲುಕೋಮದ ಅಪಾಯ ಹೊಂದಿದೆ. ಇದರ ಹೊರತಾಗಿ, ಎಲ್ಲಾ ವಯೋಮಾನದವರು ಮೊಬೈಲ್, ಟಿವಿ ಮತ್ತು ಲ್ಯಾಪ್ಟಾಪ್ ಬಳಕೆ ಹೆಚ್ಚು ಮಾಡಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಮಾರ್ಚ್ 12ರಿಂದ ಜಾಗತಿಕ ಗ್ಲುಕೋಮ ಸಪ್ತಾಹಿಕ ಆರಂಭವಾಗಿದೆ. ಈ ಮೂಲಕ ಸಾರ್ವಜನಿಕರಿಗೆ ಇದರ ಕುರಿತು ಅರಿವು ಮೂಡಿಸುವ ಪ್ರಯತ್ನಕ್ಕೆ ಮುಂದಾಗಲಾಗಿದೆ. ಅನೇಕ ಸರ್ಕಾರ, ಸರ್ಕಾರೇತರ, ಸ್ವಯಂ ಸಂಘಟನೆಗಳು, ಆಸ್ಪತ್ರೆಗಳು ಅನೇಕ ಚೆಕ್ ಅಪ್, ಟ್ರಿಟ್ಮೆಂಟ್ ಹೆಲ್ತ್ ಕ್ಯಾಂಪ್, ಜಾಗೃತಿ ಕಾರ್ಯಕ್ರಮ, ಪ್ರಚಾರ, ರ್ಯಾಲಿ ಮತ್ತು ಸೆಮಿನಾರ್ ನಡೆಸಲಿದೆ.
ಆರಂಭಿಕ ಹಂತದಕಲ್ಲಿ ಗ್ಲುಕೋಮ ಸಮಸ್ಯೆ ಪತ್ತೆಯಾಗುವುದಿಲ್ಲ. ಈ ಹಿನ್ನೆಲೆ ಜನರಿಗೆ ಚಿಕಿತ್ಸೆ ಕೂಡ ವಿಳಂಬವಾಗುತ್ತದೆ. ವೈದ್ಯರು ಮತ್ತು ತಜ್ಞರು ಸಲಹೆಯಂತೆ ಕುಟುಂಬದ ಇತಿಹಾಸ ಹೊಂದಿರುವುವರು ರೆಗ್ಯೂಲರ್ ಚೆಕ್ಅಪ್ಗಳಿಗೆ ಒಳಗಾಗಬೇಕು. ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವ ಮೂಲಕ ಈ ಗ್ಲುಕೋಮವನ್ನು ತಡೆಯಬಹುದು ಆಗಿದೆ.