ಕರ್ನಾಟಕ

karnataka

ಒಂಟಿ ಪ್ರವಾಸದ ಮೋಜು ಅನುಭವಿಸಬೇಕೇ? ಯುವತಿಯರು ಈ ಮುನ್ನೆಚ್ಚರಿಕೆ ಪಾಲಿಸಿ

By ETV Bharat Karnataka Team

Published : Nov 17, 2023, 1:56 PM IST

ಗೊತ್ತಿಲ್ಲದ ಸ್ಥಳದಲ್ಲಿ ಕೆಲವು ಅಗತ್ಯ ಮುನ್ನೆಚ್ಚರಿಕೆ ವಹಿಸುವ ಮತ್ತು ಪ್ರವಾಸದ ಯೋಜನೆಯನ್ನು ಸರಿಯಾಗಿ ರೂಪಿಸುವುದರೊಂದಿಗೆ ಸಂಭಾವ್ಯ ಅನಾಹುತಗಳನ್ನು ತಪ್ಪಿಸಬಹುದು.

girls-should-take-these-steps-before-enjoying-solo-trips
girls-should-take-these-steps-before-enjoying-solo-trips

ಇಂದಿನ ಪೀಳಿಗೆಯ ಯುವತಿಯರಲ್ಲಿ ಧೈರ್ಯ ಕೊಂಚ ಹೆಚ್ಚೇ ಇದೆ. ತಮ್ಮ ಕಾಲ ಮೇಲೆ ನಿಲ್ಲಬೇಕು, ತಾವೇ ಸಂಪಾದಿಸಿ, ಆರ್ಥಿಕ ಸ್ವಾತಂತ್ರ್ಯ ಹೊಂದಬೇಕು ಎಂಬ ಹಂಬಲ ಹೊಂದಿರುವಂತೆ, ಒಬ್ಬರೇ ಜಗತ್ತನ್ನು ಅನ್ವೇಷಿಸಬೇಕು ಎಂಬ ಹಂಬಲವೂ ಇದೆ. ಇಂದು ಒಬ್ಬಂಟಿಯಾಗಿ ಪ್ರಯಾಣ ಮಾಡುವ ಯುವತಿಯರು, ಮಹಿಳೆಯರ ಸಂಖ್ಯೆ ಹೆಚ್ಚಿದೆ. ಇದು ಒಳ್ಳೆಯ ವಿಚಾರವಾದರೂ ಇದರಲ್ಲಿ ಕೆಲವು ಸುರಕ್ಷತಾ ಕ್ರಮಗಳನ್ನು ಹೊಂದುವುದು ಅವಶ್ಯಕ. ಈ ನಿಟ್ಟಿನಲ್ಲಿ ಕೆಲವು ಸಲಹೆಗಳು ಇಲ್ಲಿವೆ.

  • ನಿಮ್ಮ ರಜೆಯಲ್ಲಿ ಎಲ್ಲಿಗೆ ಹೋಗುತ್ತೀರಿ ಎಂಬುದಕ್ಕಿಂತ ಹೇಗೆ ಯೋಜನೆ ರೂಪಿಸುತ್ತೀರಿ ಎಂಬುದು ಕೂಡ ಮುಖ್ಯ. ತಾವು ಎಲ್ಲಿಗೆ ಹೋಗಬೇಕು ಎಂದು ನಿರ್ಧರಿಸಿಕೊಂಡ ಸ್ಥಳದ ಬಗ್ಗೆ ಮಾಹಿತಿ ಸಂಗ್ರಹಿಸುವುದು, ಆನ್​ಲೈನ್​ ರಿವ್ಯೂ ಪಡೆಯುವುದು. ಪ್ರಯಾಣದ ಗುಂಪಿನ ವಿವರ ಪಡೆಯುವುದು ಅವಶ್ಯಕ. ಇದಕ್ಕೆ ಆನ್​ಲೈನ್​ ಮ್ಯಾಪ್​​ಗಳು ಸಹಾಯ ಮಾಡುತ್ತವೆ. ಆದರೆ, ಅಲ್ಲಿ ಇಂಟರ್​ನೆಟ್​ ಸೌಲಭ್ಯ ಇಲ್ಲ ಎಂದರೆ ನಿಮಗೆ ತೊಂದರೆಯಾಗುವುದು ಖಚಿತ. ಈ ಹಿನ್ನೆಲೆಯಲ್ಲಿ ಈ ಕುರಿತು ವಿವರ ಮತ್ತು ಅಲ್ಲಿನ ಸ್ಥಳದ ರೂಟ್​ ಮಾಹಿತಿಯನ್ನು ಅರ್ಥೈಸಿಕೊಂಡು ಅದರ ಪ್ರಿಂಟ್​ ಪಡೆಯಿರಿ. ಇದರ ಜೊತೆಗೆ ಅಲ್ಲಿನ ಸ್ಥಳೀಯ ಪೊಲೀಸ್​ ಠಾಣೆ ಮತ್ತು ಆಸ್ಪತ್ರೆ ಹಾಗೂ ಎನ್​ಜಿಒಗಳ ನಂಬರ್​ ಅನ್ನು ನಿಮ್ಮ ಫೋನ್​ನಲ್ಲಿ ಹೊಂದಿ.
  • ಹೊಸ ಸ್ಥಳಗಳಿಗೆ ಪ್ರವಾಸ ಹೋಗುವಾಗ ಕತ್ತಲಾಗುವ ಮುನ್ನ ಉಳಿದುಕೊಳ್ಳುವ ವ್ಯವಸ್ಥೆ ಮಾಡುವುದೊಳಿತು. ರಾತ್ರಿ ಸಮಯದಲ್ಲಿ ಎದುರಾಗುವ ಅಪಾಯಗಳ ಬಗ್ಗೆ ಮುನ್ನೆಚ್ಚರಿಕೆಯಿಂದ ಇರಬೇಕು. ರಾತ್ರಿ ಇಡೀ ನೀವು ವಾಸ್ತವ್ಯ ಹೂಡಬೇಕು ಎಂದು ನಿರ್ಧರಿಸಿದರೆ, ಹಾಸ್ಟೆಲ್​​ಗಳನ್ನು ಆರಿಸಿಕೊಳ್ಳಿ. ಇದು ಕಡಿಮೆ ವೆಚ್ಚ ಮತ್ತು ಸುರಕ್ಷಿತ ತಾಣವಾಗಿರುತ್ತದೆ.
  • ನೀವು ಯಾವಾಗಲೇ ಹೋಗಬೇಕು ಎಂದಾಗ ಯಾವ ಸ್ಥಳಕ್ಕೆ ಹೋಗುತ್ತೀರಾ. ಎಲ್ಲಿಗೆ ಉಳಿಯುತ್ತೀರಾ. ಅಲ್ಲಿನ ಕ್ಯಾಬ್​ ಡ್ರೈವರ್​ ನಂಬರ್​, ಫೋಟೋ, ಲೈವ್​ ಲೊಕೇಷನ್​ ಮಂತಾದ ವಿವರಗಳನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ನೀಡುವುದನ್ನು ಮರೆಯದಿರಿ.
  • ಒಂದು ವೇಳೆ ಸೋಲೋ ಟ್ರಾವೆಲ್​ (ಒಂಟಿ ಪ್ರವಾಸ) ಮಾಡಲು ಮುಂದಾದರೆ, ಬಸ್​, ಟ್ರೈನ್​ ಮುಂತಾದ ಸಾರ್ವಜನಿಕ ಸಾರಿಗೆ ಆಯ್ಕೆ ಮಾಡಿ. ಸ್ಯಾನಿಟರಿ ಪ್ಯಾಡ್​, ಪವರ್​ ಬ್ಯಾಂಕ್​, ವಾಟರ್​ ಬಾಟಲ್​, ಪೆಪ್ಪರ್​ ಸ್ಪ್ರೇ, ಅಗತ್ಯ ಔಷಧಿಗಳು ಮತ್ತು ಹಗುರ ಬಟ್ಟೆಗಳೊಂದಿಗೆ ಪ್ರಯಾಣ ಬೆಳೆಸಿ. ಸಂಪೂರ್ಣವಾಗಿ ಆನ್​ಲೈನ್​, ಕಾರ್ಡ್​​ ವಹಿವಾಟಿನ ಜೊತೆಗೆ ಕೈಯಲ್ಲಿ ಹಣವನ್ನೂ ಹೊಂದಿರಿ. ಈ ಮೂಲಕ ನಿಮ್ಮ ಪ್ರವಾಸದ ಮೋಜು ಅನುಭವಿಸಿ.

ABOUT THE AUTHOR

...view details