ಹಬ್ಬ ಹರಿದಿನ ಎಂದರೆ ಅಲ್ಲಿ ಸಿಹಿ ಇರಲೇಬೇಕು. ತುಪ್ಪ ಇಲ್ಲದೇ ಯಾವುದೇ ಸಿಹಿಯನ್ನು ಮಾಡುವುದು ಅಸಾಧ್ಯ. ಇದೇ ಕಾರಣಕ್ಕೆ ಕೆಲವರು ಈ ಸಿಹಿ ಪದಾರ್ಥಗಳನ್ನು ತಿನ್ನಲು ಹಿಂದೇಟು ಹಾಕುತ್ತಾರೆ. ಕಾರಣ ಅನಗತ್ಯ ಬೊಜ್ಜಿಗೆ ಕಾಣವಾಗುತ್ತದೆ ಎಂಬುದು. ಆದರೆ, ಕೆಲವರು ತುಪ್ಪ ಹೃದಯದ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ. ಆದರೆ, ವೈದ್ಯಕೀಯ ತಜ್ಞರು ಈ ಬಗ್ಗೆ ಹೇಳುವುದೇನು ಗೊತ್ತಾ? ತುಪ್ಪ ಹಲವು ಪೋಷಕಾಂಶಗಳ ಸಮ್ಮಿಳತವಾಗಿದ್ದು, ಅನೇಕ ಆರೋಗ್ಯಕರ ಲಾಭವನ್ನು ಹೊಂದಿದೆ. ಇದೇ ಕಾರಣಕ್ಕೆ ಹಬ್ಬ ಹರಿದಿನದಲ್ಲಿ ಮಾತ್ರವಲ್ಲದೇ, ಯಾವುದೇ ಮುಜುಗರವಿಲ್ಲದೇ ದಿನನಿತ್ಯದ ಆಹಾರದಲ್ಲಿ ತುಪ್ಪವನ್ನು ಬೆರಸಿ ಸೇವಿಸಿ ಎಂದು ಸಲಹೆ ನೀಡುತ್ತಾರೆ.
ಹಲವು ಪೋಷಕಾಂಶ: ತುಪ್ಪದಲ್ಲಿ ಅನೇಕ ಪೋಷಕಾಂಶಗಳಿವೆ. ಇದರಲ್ಲಿ ಫ್ಯಾಟ್ ಕರಗಿಸುವ ಎ, ಇ, ಡಿ ಮತ್ತು ಕೆ ವಿಟಮಿನ್ ಇದ್ದು, ಒಮೆಗಾ-3, ಒಮೆಗಾ-6, ಲಿನೊಲೆಕ್ ನಂತಹ ಫ್ಯಾಟಿ ಆ್ಯಸಿಡ್, ಬ್ಯುಟೈರಿಕ್ ಆ್ಯಸಿಡ್ ಸೇರಿದಂತೆ ಹಲವಾಬರು ಉತ್ಕರ್ಷಣ ನಿರೋಧಕ ಅಂಶ ಇದ್ದು, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ನರ ಕಾರ್ಯಾಚರಣೆ:ದೇಹದಲ್ಲಿ ಒಮೆಗಾ-3 ಮತ್ತು ಒಮೆಗಾ-6 ಪ್ಯಾಟಿ ಆಸಿಡ್ ಮಟ್ಟ ಕಡಿಮೆಯಾದರೆ ಇದು ಡೆಮೆಟಿಯಾ ಮತ್ತು ಅಲ್ಜೈಮೆರಾದಂತಹ ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದ ನಿಮ್ಮನ್ನು ನೀವು ರಕ್ಷಣೆ ಮಾಡಬೇಕು ಎಂದು ಕೊಂಡರೆ, ನಿಮ್ಮ ಡಯಟ್ನಲ್ಲಿ ಈ ತುಪ್ಪವನ್ನು ಸೇರಿಸಿ. ತುಪ್ಪದಲ್ಲಿ ಫ್ಯಾಟಿ ಆಸಿಡ್ ದೊಡ್ಡ ಮಟ್ಟದಲ್ಲಿದ್ದು, ಇದು ದೇಹದ ನರ ವ್ಯವಸ್ಥೆ ಸೇರಿದಂತೆ ಇತರ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಮಿದುಳು ಕ್ರಿಯಾಶೀಲವಾಗಿ ಕೆಲಸ ಮಾಡುವಂತೆ ಮಾಡುತ್ತದೆ. ಈ ಹಿನ್ನೆಲೆ ನಿತ್ಯದ ಆಹಾರದಲ್ಲಿ ತುಪ್ಪ ಅತ್ಯಗತ್ಯವಾಗಿದೆ.