ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು ಆಗುತ್ತಿವೆ. ಈಗ ಅಚ್ಚರಿಯಾಗುವಂತಹ ಸಂಶೋಧನೆಯೊಂದು ಬಹಿರಂಗವಾಗಿದೆ. ನಿಮಗೆ ಹಲ್ಲುಗಳ ಸಮಸ್ಯೆ ಇದೆಯೇ?, ಹಲ್ಲು ಹುಳುಕು ಇದೆಯೇ?.. ಯೋಚನೆ ಮಾಡಿ.. ಏನು ಕಾರಣವಿರಬಹುದು.? ನೀವೇನಾದರೂ ಯೋಚನೆ ಮಾಡಿದರೆ, ಜೀವನ ಶೈಲಿ, ಕೆಟ್ಟ ಆಹಾರ ಪದ್ಧತಿಯಿಂದ ಹಲ್ಲಿನ ತೊಂದರೆ ಕಾಣಿಸಿದೆ ಎಂದು ನಿಮಗೆ ಅನ್ನಿಸುತ್ತದೆ. ಆದರೆ, ಇಲ್ಲೊಂದು ಸಂಶೋಧನೆ ಹಲ್ಲುಗಳ ಅನಾರೋಗ್ಯಕ್ಕೆ ಜೀನ್ಗಳು ಅಥವಾ ವಂಶವಾಹಿಗಳು ಕಾರಣವಾಗಬಹುದು ಎಂದಿದೆ.
ತಂದೆ-ತಾಯಿಯ ನಡವಳಿಕೆಗಳು ಮಕ್ಕಳಿಗೆ ರವಾನೆಯಾಗಲು ಜೀನ್ಗಳು ಕಾರಣ ಎಂದು ಮೊದಲು ಸಂಶೋಧನೆ ಮಾಡಲಾಗಿತ್ತು. ಅದಾದ ಕೆಲವು ದಿನಗಳ ನಂತರ ಕೆಲ ರೋಗಗಳೂ ಜೀನ್ಗಳಿಂದ ಬರುತ್ತವೆ ಎಂದು ಸಂಶೋಧನೆಗಳು ಹೇಳಿವೆ. ಇವುಗಳನ್ನು ಅನುವಂಶಿಕ ರೋಗಗಳು ಎಂದು ಗುರ್ತಿಸಲಾಗಿದೆ. ಆದರೀಗ ಹಲ್ಲಿಗೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ಬಾಯಿಗೆ ಬರುವ ರೋಗಗಳೂ ಜೀನ್ ಕಾರಣದಿಂದ ಬರುತ್ತವೆ ಎಂದು ಸಂಶೋಧನೆಯೊಂದು ಹೇಳಿದೆ.
ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳು : ಬಾಯಿಯ ಕುರಿತು ಮತ್ತೊಂದು ಸಂಶೋಧನೆ ನಡೆದಿದೆ. ಆ ಸಂಶೋಧನೆ ಹೇಳುವಂತೆ ನಾವು ಬಾಯಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದರೆ, ಬಾಯಿಯೊಳಗೆ ಗಮ್-ಡಿಸೀಸ್ ಬ್ಯಾಕ್ಟೀರಿಯಾ ಉತ್ಪಾದನೆಯಾಗುತ್ತದೆ ಇದು ಹಲ್ಲುಗಳನ್ನು ಕೊಳೆಯುವಂತೆ ಮಾಡುತ್ತದೆ. ಗಮ್ ಡಿಸೀಸ್ ಬ್ಯಾಕ್ಟೀರಿಯಾ ನಮ್ಮ ಬಾಯಿಗೆ ಅತ್ಯಂತ ಕೆಟ್ಟದು. ನಮ್ಮ ಬಾಯಿಯೊಳಗೆ ಒಳ್ಳೆಯ ಬ್ಯಾಕ್ಟೀರಿಯಾ ಕೂಡ ಇರುತ್ತದೆ.
ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ ಪ್ರಕಾರ, 24 ಗಂಟೆಯಿಂದ 72 ಗಂಟೆಗಳವರೆಗೆ ನಾವು ಬಾಯಿಯ ನೈರ್ಮಲ್ಯದ ಕಡೆಗೆ ಗಮನ ನೀಡದಿದ್ದರೆ, ಒಳ್ಳೆಯ ಬ್ಯಾಕ್ಟೀರಿಯಾಗಳ ಸಂಖ್ಯೆ ಕಡಿಮೆಯಾಗುತ್ತದೆ. ಒಳ್ಳೆಯ ಬ್ಯಾಕ್ಟೀರಿಯಾಗಳ ಸಂಖ್ಯೆ ಕಡಿಮೆಯಾಗುವ ಕಾರಣದಿಂದ ಬಾಯಿಯ ಆರೋಗ್ಯ ಅಥವಾ ಹಲ್ಲುಗಳ ಆರೋಗ್ಯ ಹಾಳಾಗುತ್ತದೆ.
ಪೆರಿಯೊಡಾಂಟಿಟಿಸ್ ಎಂಬ ಹೆಸರಿನ ರೋಗವೊಂದಿದೆ. ಇದೂ ಗಮ್ ಡಿಸೀಸ್ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಈ ರೋಗ ಬಂದರೆ ಹಲ್ಲುಗಳಿಗೆ ಸಾಕಷ್ಟು ಹಾನಿಯಾಗುತ್ತದೆ. ಆದರೆ, ಈ ರೀತಿಯ ರೋಗವನ್ನು ತಡೆಯಬಹುದು. ಹಲ್ಲುಗಳ ನೈರ್ಮಲ್ಯ ಮತ್ತು ಆರೋಗ್ಯಕರ ಆಹಾರದ ಮೂಲಕ ಇದನ್ನು ತಡೆಯಬಹುದಾಗಿದೆ.
ವಸಡುಗಳಲ್ಲಿ ಉರಿ, ನೋವು ಕಾಣಿಸಲು ಕಾರಣವಾಗುವ ರೋಗವೊಂದಿದೆ. ಅದನ್ನು ಜಿಗ್ನಿವೈಟೀಸ್ ಎಂದು ಕರೆಯಲಾಗುತ್ತದೆ. ಇದೂ ಗಮ್ ಡಿಸೀಸ್ ಬ್ಯಾಕ್ಟೀರಿಯಾದಿಂದ ಉಂಟಾಗುವ ರೋಗವಾಗಿದೆ. ವಂಶವಾಹಿಗಳ ಮೂಲಕ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೂ ವರ್ಗಾವಣೆಯಾಗುವ ಸಾಧ್ಯತೆ ಇದೆ ಎಂದು ಮೈ ಡೆಂಟಲ್ ಪ್ಲ್ಯಾನ್ ಹೆಲ್ತ್ಕೇರ್ನ ದಂತ ತಜ್ಞ ಮತ್ತು ಸಹಸಂಸ್ಥಾಪಕ ಡಾ. ಮೊಹೆಂದರ್ ನರುಲಾ ಹೇಳುವ ಮಾತು.