ಹೈದರಾಬಾದ್: ತಾಯ್ತನ ಎಂಬುದು ಹೊಸ ಜೀವದ ಸೃಷ್ಟಿಯಾದರೂ ಈ ಪ್ರಯಾಣದ ಅವಧಿ ಪ್ರತಿ ಮಹಿಳೆಯರಲ್ಲೂ ವಿಭಿನ್ನ ಅನುಭವ ನೀಡುತ್ತದೆ. ಆರಂಭಿಕ ಅವಧಿಯ ಗರ್ಭಾವಸ್ಥೆಯಲ್ಲಿ ಅನೇಕ ಮಹಿಳೆಯರಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಈ ಸಮಯದಲ್ಲಿ ವಾಂತಿ, ತಲೆ ಸುತ್ತುವಿಕೆ ಅನುಭವ ಸಹಜ. ಕೆಲವರಲ್ಲಿ ಇದು ತೀವ್ರಮಟ್ಟದಲ್ಲಿ ಇರುತ್ತದೆ. ಇದನ್ನು ಹೈಪರೆಮೆಸಿಸ್ ಗ್ರಾವಿಡಾರಮ್ (ಎಚ್ಜಿ) ಎಂದು ಕರೆಯಲಾಗುವುದು.
ಈ ಸಮಯದಲ್ಲಿ ಮಹಿಳೆಯು, ತೂಕ ಮತ್ತು ದೇಹದ ನೀರಿನ ನಷ್ಟವನ್ನು ಅನುಭವಿಸುತ್ತಾಳೆ. ಕೆಲವರು ಈ ಸ್ಥಿತಿಯಿಂದ ಆಸ್ಪತ್ರೆಗೂ ದಾಖಲಾಗುತ್ತಾರೆ. ಗರ್ಭಾವಸ್ಥೆ ವೇಳೆಯಲ್ಲಿ ಮಹಿಳೆಯರಲ್ಲಿ ಈ ರೀತಿ ಆರೋಗ್ಯ ವ್ಯತ್ಯಾಯವಾಗುವುದು ಯಾಕೆ? ಎಂಬ ಕುರಿತು ಅದರಲ್ಲೂ ವಿಶೇಷವಾಗಿ ಈ ಸಮಯದಲ್ಲಿ ಈ ಪರಿಸ್ಥಿತಿಗೆ ಕಾರಣವಾಗುವ ಜಿಡಿಎಫ್ 15 ಹಾರ್ಮೋನ್ಗಳ ಅಧ್ಯಯನವನ್ನು ವಿವಿಧ ದೇಶದಲ್ಲಿ ಸಂಶೋಧಕರು ನಡೆಸಿದ್ದಾರೆ
ಜಿಡಿಎಫ್ 15 ಹಾರ್ಮೋನ್ ದೇಹದಲ್ಲಿ ಕಡಿಮೆ ಮಟ್ಟದಲ್ಲಿ ಇರುತ್ತದೆ. ಇದರ ಮಟ್ಟ ಗರ್ಭಾವಸ್ಥೆಯಲ್ಲಿ ಪ್ಲೆಸೆಂಟಾದಲ್ಲಿ ಹೆಚ್ಚಾಗುತ್ತದೆ. ಇದು ಗರ್ಭಿಣಿಯರಲ್ಲಿ ಮಾರ್ನಿಂಗ್ ಸಿಕ್ನೆಸ್ ಅಂದರೆ, ಬೆಳಗಿನ ಸಮಯದಲ್ಲಿ ತಲೆ ಸುತ್ತುವಿಕೆ, ವಾಂತಿಯಂತಹ ಸಮಸ್ಯೆಗೆ ಕಾರಣವಾಗುತ್ತದೆ. ಇದು ಪ್ರತಿ ಮಹಿಳೆಯರಲ್ಲಿ ಒಂದೇ ರೀತಿಯಾಗಿ ಕಾಣುವುದಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಜಿಡಿಎಫ್ ಹೆಚ್ಚಿನ ಮಟ್ಟದಲ್ಲಿರುವ ಮಹಿಳೆಯರಲ್ಲಿ ಮಾರ್ನಿಂಗ್ ಸಿಕ್ನೆಸ್ ಹೆಚ್ಚಿರುತ್ತದೆ. ಇದರ ಆಧಾರದ ಮೇಲೆ ಸಂಶೋಧಕರು ಚಿಕಿತ್ಸೆಯನ್ನು ಕಂಡು ಹಿಂದಿದ್ದಾರೆ. ಇಲಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಗರ್ಭಧಾರಣೆಗೆ ಮುನ್ನ ನೀಡಿದ ಜಿಡಿಎಫ್15 ಜೊತೆಗಿನ ಔಷಧಗಳು ಉತ್ತಮ ಫಲಿತಾಂಶ ನೀಡಿದೆ. ಆ್ಯಂಟಿಬಾಡಿ ಥೆರಪಿ ಈ ಹಾರ್ಮೋನ್ ಅಡ್ಡಗಟ್ಟುತ್ತದೆ.