ಕರ್ನಾಟಕ

karnataka

ETV Bharat / sukhibhava

ಅತಿಯಾಗಿ ಕಾಡುವ ಭುಜದ ನೋವು ನಿವಾರಣೆಗೆ ಇಲ್ಲಿವೆ ಮುನ್ನೆಚ್ಚರಿಕೆ ಕ್ರಮಗಳು.. - ಈಟಿವಿ ಭಾರತ ಕನ್ನಡ

ಭುಜ ನೋವು (ಫ್ರೋಜನ್ ಶೋಲ್ಡರ್) ಬಂದರೆ ಕೆಲವೊಮ್ಮೆ ರೋಗಿಯು ಚಿಕ್ಕ ಕಾರ್ಯಗಳಿಗೂ ಇತರರ ಮೇಲೆ ಅವಲಂಬಿಸುವಂತಾಗುತ್ತದೆ. ಇದರಿಂದ ತನ್ನ ಕೆಲಸವನ್ನು ತಾನು ಮಾಡಲು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

frozen shoulder
ಫ್ರೋಜನ್ ಶೋಲ್ಡರ್

By

Published : May 3, 2023, 7:22 PM IST

ಫ್ರೋಜನ್ ಶೋಲ್ಡರ್(ಭುಜದ ನೋವು) ಸಮಸ್ಯೆಯನ್ನು ಸಾಮಾನ್ಯವಾಗಿ ಕೇಳಿಯೇ ಇರುತ್ತೇವೆ. ಫ್ರೋಜನ್ ಶೋಲ್ಡರ್ ಎಂದರೆ ಭುಜವು ಮಂಜುಗಡ್ಡೆಯಂತೆ ಹೆಪ್ಪುಗಟ್ಟಿದೆ ಎಂದು ಅರ್ಥವಲ್ಲ. ಆದರೆ, ಈ ಸಮಸ್ಯೆಯಲ್ಲಿ, ಭುಜದ ಕೀಲುಗಳು ನೋವು ಮತ್ತು ಭುಜದ ಬಿಗಿತದಿಂದ ನೋವು ಕಾಣಿಸುತ್ತದೆ. ಇದರಿಂದಾಗಿ ಅವುಗಳಲ್ಲಿನ ಚಲನೆಯು ತುಂಬಾ ಕಡಿಮೆಯಾಗಿದೆ. ಜೊತೆಗೆ ಸ್ವಲ್ಪ ಸಮಯದವರೆಗೆ ಸಂಪೂರ್ಣವಾಗಿ ಸ್ನಾಯುಗಳು ನಿಂತಂತೆ ಭಾಸವಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಭುಜಗಳ ಘನೀಕರಣದಂತಹ ಭಾಸವಾಗುತ್ತದೆ. ಅನೇಕ ಜನರು ಈ ಭುಜದ ನೋವಿನ ಸಮಸ್ಯೆಗೆ ಸಂಧಿವಾತ ಕಾರಣವೆಂದು ಪರಿಗಣಿಸುತ್ತಾರೆ. ಫ್ರೋಜನ್ ಶೋಲ್ಡರ್ ಸಮಸ್ಯೆ ಅಂದ್ರೆ ಏನು? ರೋಗಿಗಳು ಕೆಲವು ಸಮಯದವರೆಗೆ ಇತರರ ಮೇಲೆ ಯಾಕೆ ಅವಲಂಬಿತರಾಗುತ್ತಾರೆ ಎಂಬುದನ್ನು ತಿಳಿಯಲು 'ಈಟಿವಿ ಭಾರತ' ತಜ್ಞ ವೈದ್ಯರಿಂದ ಮಾಹಿತಿ ಸಂಗ್ರಹಿಸಿದೆ.

ಫ್ರೋಜನ್ ಶೋಲ್ಡರ್ ಸಮಸ್ಯೆ ಎಂದರೇನು?:ಜೈಪುರದ ಮುಸ್ಕಾನ್ ಕ್ಲಿನಿಕ್ ಮೂಳೆಚಿಕಿತ್ಸಕ ಸಲಹೆಗಾರ ಡಾ.ಸಂಜಯ್ ರಾಠಿ ಮಾತನಾಡಿ, ಫ್ರೋಜನ್ ಶೋಲ್ಡರ್ ಅಥವಾ ಅಂಟಿಕೊಳ್ಳುವ ಕ್ಯಾಪ್ಸುಲೈಟಿಸ್ ಎಂದು ಕರೆಯಲಾಗುವುದನ್ನು, ವಾಸ್ತವವಾಗಿ ಗಟ್ಟಿಯಾದ ಭುಜದ ಕೀಲುಗಳ ಸಮಸ್ಯೆಯಾಗಿದೆ. ನಮ್ಮ ಭುಜದಲ್ಲಿ ಮೂರು ಮೂಳೆಗಳ ಜಂಟಿಯಾಗಿವೆ ಎಂದು ಅವರು ವಿವರಿಸುತ್ತಾರೆ. ಹ್ಯೂಮರಸ್ ಅಂದರೆ, ಮೇಲಿನ ತೋಳಿನ ಮೂಳೆ, ಸ್ಕ್ಯಾಪುಲಾ ಅಂದರೆ, ಭುಜದ ಬ್ಲೇಡ್ ಮತ್ತು ಕಾಲರ್ಬೋನ್, ಇದನ್ನು "ಬಾಲ್-ಅಂಡ್-ಸಾಕೆಟ್" ಜಂಟಿ ಎಂದು ಕರೆಯಲಾಗುತ್ತದೆ. ಭುಜದ ಸುತ್ತಲಿನ ಅಂಗಾಂಶಗಳನ್ನು ಭುಜದ ಕ್ಯಾಪ್ಸುಲ್ ಎಂದು ಹೇಳುತ್ತಾರೆ. ಫ್ರೋಜನ್ ಶೋಲ್ಡರ್​ನಲ್ಲಿ, ಭುಜದ ಕ್ಯಾಪ್ಸುಲ್ ಕ್ರಮೇಣ ದಪ್ಪವಾಗುತ್ತದೆ. ಉರಿಯೂತದಿಂದಾಗಿ ಗಟ್ಟಿಯಾದಂತೆ ಭಾಸವಾಗುತ್ತದೆ. ಇದು ಭುಜದ ಸ್ನಾಯುಗಳ ಚಲನೆಯನ್ನು ನಿರ್ಬಂಧಿಸುತ್ತದೆ ಅಥವಾ ಕಡಿಮೆ ಮಾಡುತ್ತದೆ. ಈ ಸ್ಥಿತಿಯಿಂದ ಕೆಲವೊಮ್ಮೆ ತುಂಬಾ ನೋವು ಕಾಣಿಸಿಕೊಳ್ಳುತ್ತದೆ.

ಭುಜದ ನೋವಿಗೆ ಮುನ್ನೆಚ್ಚರಿಕೆ ಕ್ರಮಗಳೇನು?:ಭುಜ ನೋವಿನ ಸಮಸ್ಯೆ ಉತ್ತುಂಗದಲ್ಲಿದ್ದಾಗ, ಬಳಲುತ್ತಿರುವವರಿಗೆ ಭುಜಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಲು ಕಷ್ಟವಾಗುತ್ತದೆ. ತಲೆ ಬಾಚಿಕೊಳ್ಳಲು, ತಲೆ ತೊಳೆದುಕೊಳ್ಳಲು, ಹಲ್ಲುಜ್ಜಲು ಹಾಗೂ ಬಟ್ಟೆ ಧರಿಸುಲು ಹಾಗೂ ಇತರ ಕಾರ್ಯಗಳನ್ನು ಕೈಗೊಳ್ಳು ತುಂಬಾ ಸಮಸ್ಯೆಯಾಗುತ್ತದೆ. ರೋಗಿಯು ಸಹ ಕೈ ಎತ್ತಲು ಕೂಡಾ ಬಹಳಷ್ಟು ತೊಂದರೆಯಾಗುತ್ತದೆ. ಕೆಲವೊಮ್ಮೆ ರೋಗಿಗಳಿಗೆ ಭುಜ ನೋವು ಕೆಲವು ತಿಂಗಳುಗಳವರೆಗೆ ಕಾಡುತ್ತದೆ. ಇದರಿಂದ ತಾತ್ಕಾಲಿಕವಾಗಿ ಕೆಲವು ಕೆಲಸಗಳಿಗಾಗಿ ಇತರರ ಮೇಲೆ ಅವಲಂಬಿಸಬೇಕಾಗುತ್ತದೆ. ಸಾಮಾನ್ಯವಾಗಿ ಈ ಭುಜದ ಸಮಸ್ಯೆಯು ಒಂದು ಸಮಯದಲ್ಲಿ ಒಂದು ಭುಜದಲ್ಲಿ ಕಂಡುಬರುತ್ತದೆ. ಆದರೆ, ಇದು ಏಕಕಾಲದಲ್ಲಿ ಎರಡೂ ಭುಜಗಳಲ್ಲಿಯೂ ಸಹ ಸಂಭವಿಸಬಹುದು ಎಂದು ಜೈಪುರ ಮುಸ್ಕಾನ್ ಕ್ಲಿನಿಕ್ ಆರ್ಥೋಪೆಡಿಕ್ ಕನ್ಸಲ್ಟೆಂಟ್ ಡಾ.ಸಂಜಯ್ ರಾಥಿ ವಿವರಿಸಿದರು. ಈ ಸಮಸ್ಯೆಯ ಪ್ರಾರಂಭದಿಂದ ಅದು ಚೇತರಿಸಿಕೊಳ್ಳಲು ವೈದ್ಯರು ಮೂರು ಹಂತಗಳನ್ನು ಗುರುತಿಸಿದ್ದಾರೆ.

ಘನೀಕರಿಸುವ ಹಂತ:ಇದು ಈ ಸಮಸ್ಯೆಯ ಆರಂಭಿಕ ಹಂತವಾಗಿದೆ, ಇದರಲ್ಲಿ ಭುಜದ ಕ್ಯಾಪ್ಸುಲ್ ಕ್ರಮೇಣ ಗಟ್ಟಿಯಾಗಲು ಪ್ರಾರಂಭಿಸುತ್ತದೆ. ಈ ಸ್ಥಿತಿಯಲ್ಲಿ, ಭುಜದಲ್ಲಿ ನೋವು ಇರುತ್ತದೆ ಮತ್ತು ಕ್ರಮೇಣ ಭುಜವನ್ನು ಅಲುಗಾಡಿಸಿದರೂ ತುಂಬಾ ಸಮಸ್ಯೆ ಉಂಟಾಗುತ್ತದೆ. ಈ ಸ್ಥಿತಿಯಲ್ಲಿ, ರೋಗಿಗೆ ಸಾಮಾನ್ಯವಾಗಿ ರಾತ್ರಿ ವೇಳೆಯಲ್ಲಿ ಭುಜದಲ್ಲಿ ಹೆಚ್ಚು ನೋವನ್ನು ಕಾಣಿಸುತ್ತದೆ.

ಘನೀಕೃತ ಹಂತ:ಈ ಹಂತದಲ್ಲಿ ನೋವು ಸ್ವಲ್ಪಮಟ್ಟಿಗೆ ಕಡಿಮೆಯಾಗಲು ಪ್ರಾರಂಭಿಸಿದರೂ, ಭುಜಗಳು ಹೆಚ್ಚು ಗಟ್ಟಿಯಾಗುತ್ತವೆ. ಭುಜದ ಚಲನೆಯು ತುಂಬಾ ಕಷ್ಟಕರವಾಗಿರುತ್ತದೆ. ಅಂದರೆ, ಭುಜಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡುವಾಗ ಸಮಸ್ಯೆ ಇರುತ್ತದೆ.

ಚೇತರಿಕೆಯ ಹಂತ:ಚೇತರಿಕೆಯ ಹಂತದಲ್ಲಿ ಮೊದಲಿಗೆ ಕ್ರಮೇಣ ನೋವು ನಿವಾರಣೆ ಪ್ರಾರಂಭವಾಗುತ್ತದೆ. ಇದರೊಂದಿಗೆ, ಭುಜಗಳಲ್ಲಿನ ಚಲನೆಯು ನಿಧಾನವಾಗಿ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ, ರೋಗಿಯ ಸಮಸ್ಯೆ ಮತ್ತು ಅದರ ಕಾರಣ ಅವಲಂಬಿಸಿ, ಚೇತರಿಕೆಯ ಈ ಹಂತವು 5ರಿಂದ 24 ತಿಂಗಳುಗಳವರೆಗೆ ಇರುತ್ತದೆ.

ಈ ಭುಜದ ನೋವಿಗೆ ಕಾರಣವೇನು?:ಯಾವುದೇ ಗಾಯ, ಮಧುಮೇಹ, ಹಾರ್ಮೋನ್ ಅಸಮತೋಲನ, ಪಾರ್ಶ್ವವಾಯು, ಹೃದ್ರೋಗ, ಹೈಪೋಥೈರಾಯ್ಡಿಸಮ್ ಮತ್ತು ಪಾರ್ಕಿನ್ಸನ್ ಕಾಯಿಲೆಯಂತಹ ಕೆಲವು ರೀತಿಯ ಕಾಯಿಲೆಗಳಿಂದ ಫ್ರೋಜನ್ ಶೋಲ್ಡರ್ ಸಮಸ್ಯೆಗೆ ಕಾರಣವಾಗಲಿದೆ ಎಂದು ಡಾ ಸಂಜಯ್ ರಾಠಿ ಹೇಳುತ್ತಾರೆ. ಇದಲ್ಲದೇ ಅಪಘಾತ ಅಥವಾ ಇನ್ನಾವುದೇ ಕಾರಣದಿಂದ ವ್ಯಕ್ತಿ ಹೆಚ್ಚು ಕ್ರಿಯಾಶೀಲರಾಗಿ ಬದುಕದೇ ಇದ್ದರೆ, ಅಂದರೆ, ಕೈ ಮತ್ತು ಭುಜಕ್ಕೆ ಸಂಬಂಧಿಸಿದ ಕೆಲಸಗಳನ್ನು ದೀರ್ಘಕಾಲದಿಂದ ಮಾಡದೇ ಇದ್ದರೆ ಈ ಸಮಸ್ಯೆ ಎದುರಾಗುತ್ತದೆ ಎಂದು ಮುಸ್ಕಾನ್ ಕ್ಲಿನಿಕ್ ಜೈಪುರ ಡಾ.ಸಂಜಯ್ ರಾಠಿ ವಿವರಿಸಿದರು.

ಸಾಮಾನ್ಯವಾಗಿ ಈ ಸಮಸ್ಯೆ 40 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮತ್ತೊಂದೆಡೆ, ಈ ಭುಜದ ನೋವು ಪ್ರಕರಣಗಳು ಪುರುಷರಿಗಿಂತ ಮಹಿಳೆಯರಲ್ಲಿ ಕಂಡು ಬರುತ್ತವೆ. ಸಂಧಿವಾತದ ಸಮಸ್ಯೆಯು ದೇಹದ ಎಲ್ಲ ಕೀಲುಗಳಲ್ಲಿ ಕಂಡು ಬರುತ್ತದೆ. ಆದರೆ ಭುಜದ ನೋವಿನ ಸಮಸ್ಯೆ ಭುಜಗಳಲ್ಲಿ ಮಾತ್ರ ಕಂಡುಬರುತ್ತದೆ. ಈ ಸಮಸ್ಯೆಯನ್ನು ಗುಣಪಡಿಸಬಹುದು.

ಭುಜದ ನೋವಿಗೆ ಬೇಕು ಸೂಕ್ತ ಚಿಕಿತ್ಸೆ:ಘನೀಕೃತ ಭುಜದ ರೋಗ ಪತ್ತೆ ಹಚ್ಚಲು ಎಂಆರ್​ಐ, ಏಕ್ಸ್​-ರೇ ಮತ್ತು ಮೂಳೆ ಸಂಬಂಧಿತ ಪರೀಕ್ಷೆಗಳಂತಹ ದೈಹಿಕ ಪರೀಕ್ಷೆಗಳನ್ನು ಮಾಡಲಾಗುತ್ತದೆ. ನಂತರ ಅದನ್ನು ಔಷಧಗಳು ಮತ್ತು ಭೌತಚಿಕಿತ್ಸೆಯ ಸಹಾಯದಿಂದ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಕೆಲವು ವಿಶೇಷ ಸಂದರ್ಭಗಳಲ್ಲಿ, ರೋಗಿ ಸ್ಥಿತಿಗೆ ಅನುಗುಣವಾಗಿ, ಆರ್ತ್ರೋಸ್ಕೊಪಿಕ್ ಶಸ್ತ್ರಚಿಕಿತ್ಸೆಯನ್ನು ಸಹ ಮಾಡಬೇಕಾಗಬಹುದು. ಅದರ ಚಿಕಿತ್ಸೆಯಲ್ಲಿ, ಫಿಸಿಯೋಥೆರಪಿ ಮತ್ತು ವೈದ್ಯರು ಸೂಚಿಸಿದ ವಿಧಾನಗಳೊಂದಿಗೆ ಮನೆಯಲ್ಲಿ ಭುಜದ ಆರೈಕೆ, ವ್ಯಾಯಾಮ ಇತ್ಯಾದಿಗಳು ಬಹಳ ಮುಖ್ಯ.

ಇದನ್ನೂ ಓದಿ:ಹೃದಯ ಬಡಿತ ನಿಂತರೂ ಪ್ರಜ್ಞೆ ಜಾಗೃತಿ ಕುರಿತು ಹೀಗೊಂದು ಅಧ್ಯಯನ

ABOUT THE AUTHOR

...view details