ಕರ್ನಾಟಕ

karnataka

ETV Bharat / sukhibhava

ಶೇವಿಂಗ್​ಗಿಂತ ವ್ಯಾಕ್ಸಿಂಗ್ ಏಕೆ ಉತ್ತಮ? ಇಲ್ಲಿವೆ ನಾಲ್ಕು ಕಾರಣಗಳು! - ಮೇಲ್ನೋಟಕ್ಕೆ ಶೇವಿಂಗ್ ತುಂಬಾ ಅಹಿತಕರ

ವ್ಯಾಕ್ಸಿಂಗ್ ಡೆಡ್ ಸ್ಕಿನ್ ತೆಗೆದುಹಾಕುವುದು ಅದರ ವಿಶೇಷತೆಯಾಗಿದೆ. ಡೆಡ್ ಸ್ಕಿನ್ ತೆಗೆಯುವುದರಿಂದ ಚರ್ಮ ಬಹಳಷ್ಟು ನಯವಾಗುತ್ತದೆ. ಆದರೆ, ವ್ಯಾಕ್ಸಿಂಗ್​ಗೆ ಕೆಲದಿನಗಳ ಮುಂಚೆ ಬೇಕಾದರೆ ಎಕ್ಸ್​ಫೋಲಿಯೇಟ್ ಮಾಡಿಸಬಹುದು.

ಶೇವಿಂಗ್​ಗಿಂತ ವ್ಯಾಕ್ಸಿಂಗ್ ಏಕೆ ಉತ್ತಮ
Four reasons waxing

By

Published : Sep 13, 2022, 5:04 PM IST

ನವದೆಹಲಿ: ಮೈಮೇಲಿನ ರೋಮಗಳನ್ನು ತೆಗೆದುಹಾಕಲು ವ್ಯಾಕ್ಸಿಂಗ್ ಅಥವಾ ಶೇವಿಂಗ್ ಇವುಗಳಲ್ಲಿ ಯಾವುದು ಉತ್ತಮ ಎಂಬ ಪ್ರಶ್ನೆ ಕಾಡುವುದು ಸಹಜ. ಆದರೆ, ಈ ಒಂದು ಸಣ್ಣ ಆಯ್ಕೆಯು ಬಹುದೊಡ್ಡ ಪರಿಣಾಮಕ್ಕೆ ಕಾರಣವಾಗಬಹುದು. ಮೇಲ್ನೋಟಕ್ಕೆ ಶೇವಿಂಗ್ ತುಂಬಾ ಅಹಿತಕರ ಎನಿಸುತ್ತದೆ. ಆದರೆ, ವ್ಯಾಕ್ಸಿಂಗ್ ವಾಸ್ತವದಲ್ಲಿ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.

ನಿಮ್ಮ ಮೈಮೇಲಿನ ರೋಮಗಳನ್ನು ತೆಗೆದುಹಾಕಲು ಶೇವಿಂಗ್ ಬದಲು ವ್ಯಾಕ್ಸಿಂಗ್ ಏಕೆ ಉತ್ತಮ ಎಂಬುದಕ್ಕೆ ನಾಲ್ಕು ಕಾರಣಗಳು ಇಲ್ಲಿವೆ ನೋಡಿ.

ನಯವಾದ ಮತ್ತು ದೀರ್ಘಾವಧಿಯ ಫಲಿತಾಂಶಗಳು:ಶೇವಿಂಗ್​ ಮಾಡಿಕೊಂಡ ನಂತರ ಚರ್ಮ ಗಡುಸಾಗುತ್ತದೆ. ಇದಕ್ಕೆ ಹೋಲಿಸಿದರೆ ವ್ಯಾಕ್ಸಿಂಗ್ ಸುಮಾರು ಮೂರು ವಾರಗಳವರೆಗೆ ಮಗುವಿನ ಚರ್ಮದಷ್ಟು ಮೃದು ಮತ್ತು ನಯವಾದ ಭಾವನೆಯನ್ನು ನೀಡಬಹುದು. ಪ್ರತಿ ಕೆಲವು ದಿನಗಳಿಗೊಮ್ಮೆ ಕ್ಷೌರ ಮಾಡಲು ಬಿಡುವು ಮಾಡಿಕೊಳ್ಳುವುದು ನಮ್ಮ ಬಿಡುವಿಲ್ಲದ ಜೀವನಶೈಲಿಯಲ್ಲಿ ಸಾಧ್ಯವಾಗದಿರಬಹುದು. ಆದರೆ, ವ್ಯಾಕ್ಸಿಂಗ್ ನಂತರ, ಕೂದಲು ಸಂಪೂರ್ಣವಾಗಿ ಮೂಲದಿಂದ ಮತ್ತೆ ಬೆಳೆಯುವಂತೆ ಮಾಡಲಾಗುವುದರಿಂದ ನಿಮ್ಮ ಚರ್ಮವು ಹಲವಾರು ವಾರಗಳವರೆಗೆ ನಯವಾಗಿರುತ್ತದೆ.

ಗಾಯ ಮತ್ತು ತುರಿಕೆ ಇಲ್ಲ: ಕ್ಷೌರದ ನಂತರ ಚರ್ಮಕ್ಕೆ ಗಾಯಗಳಾಗಬಹುದು. ನಿಮ್ಮ ಚರ್ಮದ ಮೇಲೆ ನೀವು ಆಗಾಗ್ಗೆ ರೇಜರ್ ಅನ್ನು ಬಳಸಿದರೆ, ನೀವು ಸೋಂಕಿಗೆ ಒಳಗಾಗುವ ಅಪಾಯ ಎದುರಿಸುವಿರಿ. ಇದಕ್ಕೆ ವಿರುದ್ಧವಾಗಿ ವ್ಯಾಕ್ಸಿಂಗ್ ಚರ್ಮವನ್ನು ಎಕ್ಸ್​​ಫೋಲಿಯೇಟ್ ಮಾಡುತ್ತದೆ.

ಹೈಪರ್ ಪಿಗ್ಮೆಂಟೇಶನ್ ಇಲ್ಲ ಮತ್ತು ಎಕ್ಸ್​​ಫೋಲಿಯೇಶನ್ ಖಾತರಿ: ವ್ಯಾಕ್ಸಿಂಗ್ ಡೆಡ್ ಸ್ಕಿನ್ ತೆಗೆದು ಹಾಕುವುದು ಅದರ ವಿಶೇಷತೆಯಾಗಿದೆ. ಡೆಡ್ ಸ್ಕಿನ್ ತೆಗೆಯುವುದರಿಂದ ಚರ್ಮ ಬಹಳಷ್ಟು ನಯವಾಗುತ್ತದೆ. ಆದರೆ, ವ್ಯಾಕ್ಸಿಂಗ್​ಗೆ ಕೆಲದಿನಗಳ ಮುಂಚೆ ಬೇಕಾದರೆ ಎಕ್ಸ್​ಫೋಲಿಯೇಟ್ ಮಾಡಿಸಬಹುದು. ಒಳ ಕೂದಲುಗಳನ್ನು ತಡೆಗಟ್ಟಲು, ವ್ಯಾಕ್ಸಿಂಗ್ ಮಾಡುವ ಹಲವಾರು ದಿನಗಳ ಮೊದಲು ನಿಮ್ಮ ಚರ್ಮವನ್ನು ಎಕ್ಸ್​ಫೋಲಿಯೇಟ್ ಮಾಡಿ.

ತೆಳ್ಳಗಿನ ಕೂದಲು ಮರು-ಬೆಳವಣಿಗೆ: ನೀವು ನಿಯಮಿತ ವ್ಯಾಕ್ಸಿಂಗ್ ವೇಳಾಪಟ್ಟಿಯನ್ನು ನಿರ್ವಹಿಸುವುದನ್ನು ಮುಂದುವರಿಸಿದರೆ, ನಿಮ್ಮ ಕೂದಲ ಬೆಳವಣಿಗೆಯ ವೇಗ ನಿಧಾನವಾಗುತ್ತದೆ. ನೀವು ಆಗಾಗ್ಗೆ ವ್ಯಾಕ್ಸ್ ಮಾಡುತ್ತಿದ್ದರೆ ನಿಮ್ಮ ಕೂದಲು ಮತ್ತೆ ಬೆಳೆದಾಗ ಅದು ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ.

ಇದನ್ನು ಓದಿ:ಹೋಂ ಗಾರ್ಡನಿಂಗ್: ಸ್ವತಃ ಬೆಳೆದು ಅಡುಗೆ ಮಾಡುವ ಆತ್ಮಸಂತೋಷದ ದಾರಿ

ABOUT THE AUTHOR

...view details