ಕರ್ನಾಟಕ

karnataka

ETV Bharat / sukhibhava

ಪುರುಷರು ಎದುರಿಸುವ ನಾಲ್ಕು ಸಾಮಾನ್ಯ ಲೈಂಗಿಕ ಆರೋಗ್ಯ ಸಮಸ್ಯೆಗಳಿವು: ಚಿಂತೆ ಬೇಡ

ಒಬ್ಬ ವ್ಯಕ್ತಿ ತನ್ನ ಲೈಂಗಿಕ ಸ್ವಾಸ್ಥ್ಯವನ್ನು ಗೆಳೆಯರ ಗುಂಪಿನಲ್ಲಿ ಅಥವಾ ಸಾಮಾಜಿಕ ನೆಲೆಯಲ್ಲಿ ಅಥವಾ ಅವನ ಪ್ರೀತಿಪಾತ್ರರ ಜೊತೆಯಲ್ಲಿ ಚರ್ಚಿಸುವುದನ್ನು ನೀವು ಕೊನೆಯ ಬಾರಿಗೆ ಯಾವಾಗ ಕೇಳಿದ್ದೀರಿ ಎಂಬ ಬಗ್ಗೆ ಏನಾದರೂ ನೆನಪಿದೆಯಾ? ನೀವು ಅಂತಹ ವಿಷಯದ ಬಗ್ಗೆ ಎಂದಿಗೂ ಕೇಳಿಲ್ಲ. ಈ ಸಂಭಾಷಣೆಗಳು, ವಿಮರ್ಶಾತ್ಮಕವಾಗಿದ್ದರೂ ಅವು ನಡೆಯುತ್ತಿಲ್ಲ. ಈ ಬಗ್ಗೆ ಕಿಂಡ್ಲ್ಯ್ ನ ಸಂಸ್ಥಾಪಕ ಮತ್ತು ಸಿಇಒ ಆದ ನಿಲಯ್​ ಮಹೋತ್ರ ಅವರು ವಿವರಣೆ ನೀಡಿದ್ದಾರೆ.

ಪುರುಷರು ಎದುರಿಸುವ ನಾಲ್ಕು ಸಾಮಾನ್ಯ ಲೈಂಗಿಕ ಆರೋಗ್ಯ ಸಮಸ್ಯೆಗಳಿವು: ಚಿಂತೆ ಬೇಡ
ಪುರುಷರು ಎದುರಿಸುವ ನಾಲ್ಕು ಸಾಮಾನ್ಯ ಲೈಂಗಿಕ ಆರೋಗ್ಯ ಸಮಸ್ಯೆಗಳಿವು: ಚಿಂತೆ ಬೇಡ

By

Published : Jul 25, 2022, 7:39 PM IST

ನಾವು ನಮ್ಮಆತ್ಮೀಯರೊಂದಿಗೆ ನಮ್ಮ ಖಾಸಗಿ ಸಮಸ್ಯೆಗಳನ್ನು ಹಂಚಿಕೊಳ್ಳಲು ಕಷ್ಟಪಡುತ್ತೇವೆ. ಕೆಲವು ಸಂಭಾಷಣೆಗಳಂತೂ ಗುಸುಗುಸು ..ಪಿಸುಪಿಸು.. ಅಂತಾನೇ ಆರಂಭವಾಗುತ್ತವೆ. ಲೈಂಗಿಕ ಸ್ವಾಸ್ಥ್ಯವು ಸಹ ಅಂತಹ ಒಂದು ವಿಷಯವಾಗಿದೆ. ಈ ರೀತಿಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡದ ಕಾರಣ ಅರಿವಿನ ಕೊರತೆಯಿಂದ ಜನರು ಚಿಕಿತ್ಸೆ ಪಡೆದುಕೊಳ್ಳುವುದನ್ನೇ ಕೈ ಬಿಡುತ್ತಾರೆ.

ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದಂತೆಯೇ ಆರೋಗ್ಯಕರ ಮತ್ತು ಸಂತೋಷದ ಜೀವನವನ್ನು ನಡೆಸಲು ಪುರುಷರು ಲೈಂಗಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕು. ಹಿಂದಿನ ವರ್ಷಕ್ಕೆ ಹೋಲಿಸಿದರೆ 2020ರಲ್ಲಿ ಲೈಂಗಿಕ ಕ್ಷೇಮ ಸಮಾಲೋಚನೆಗಳು ಶೇ 139 ರಷ್ಟು ಹೆಚ್ಚಾಗಿವೆಯಂತೆ. ಆದ್ದರಿಂದ, ಇಂದು ನಾವು ಪುರುಷರಲ್ಲಿ ಕಂಡುಬರುವ ಕೆಲವು ಸಾಮಾನ್ಯ ಲೈಂಗಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಚರ್ಚಿಸೋಣ.

  • ಕಾರ್ಯಕ್ಷಮತೆಯ ಒತ್ತಡ:ಲೈಂಗಿಕ ಆರೋಗ್ಯ ಮತ್ತು ಅನಾರೋಗ್ಯದ ವಿಷಯಯಕ್ಕೆ ಸಂಬಂಧಿಸಿದಂತೆ ಸಮಾಜದಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ಪುರುಷರಿಗೆ ವಿವಿಧ ಕಾರಣಗಳಿಗಾಗಿ ನಿಷೇಧವಾಗಿದೆ. ಲೈಂಗಿಕ ಚಟುವಟಿಕೆಯು ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚು ಸ್ವಾಭಾವಿಕವಾಗಿ ಬರುತ್ತದೆ ಎಂದು ಸಾಮಾನ್ಯವಾಗಿ ಊಹಿಸಲಾಗಿದೆ. ಅದು ನಿಜವಲ್ಲ. ಕೆಲವು ಪುರುಷರು ಹಾಸಿಗೆಯಲ್ಲಿ ಸಂಗಾತಿ ತೃಪ್ತಿಪಡಿಸಲು ಸಾಧ್ಯವಾಗದಿದ್ದಾಗ ಈ ರೀತಿಯ ಕಲ್ಪನೆ ಪುರುಷರನ್ನು ಸಂಕಷ್ಟಕ್ಕೆ ತಳ್ಳುತ್ತದೆ. ಮಹಿಳೆಯರಿಗಿಂತ ಪುರುಷರು ಈ ವಿಷಯದಲ್ಲಿ ಆತಂಕದಿಂದ ಬಳಲುತ್ತಿದ್ದಾರೆ, ಇದು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಪ್ರಮುಖ ಕಾರಣ ಎನ್ನಲಾಗಿದೆ.
  • ನಿಮಿರುವಿಕೆ ಸಮಸ್ಯೆ: ಇದನ್ನು ಸಾಮಾನ್ಯವಾಗಿ ನರ ದೌರ್ಬಲ್ಯ ಎಂದು ಕರೆಯಲಾಗುತ್ತದೆ. ಈ ಪದ ಸಾಮಾಜಿಕ ವಲಯಗಳಲ್ಲಿ ಪುರುಷರಿಗೆ ಹೆಚ್ಚಿನ ನೋವುಂಟು ಮಾಡುತ್ತದೆ. ಆದರೆ, ಈ ಸಮಸ್ಯೆ ಅಪರೂಪವೇನಲ್ಲ. ಅಧ್ಯಯನದ ಪ್ರಕಾರ 40 ರಿಂದ 70 ರ ವಯೋಮಾನದ ಸುಮಾರು ಅರ್ಧದಷ್ಟು ಪುರುಷರು ಅಪಧಮನಿಯ ಅಸಮರ್ಪಕ ಕ್ರಿಯೆ ಅಥವಾ ಇತರ ಅಸಹಜತೆಗಳ ವಿಭಿನ್ನ ಕಾರಣಗಳಿಂದ ಈ ಸಮಸ್ಯೆ ಎದುರಿಸುತ್ತಾರೆ. ಪ್ರಾಸ್ಟೇಟ್ ಅಸಮರ್ಪಕ ಕ್ರಿಯೆ(ಪುರುಷನ ಜನನೇಂದ್ರಿಯಕ್ಕೆ ಸಂಬಂಧಿಸಿದ ಒಂದು ಗ್ರಂಥಿ), ಹೈಪೋಗೊನಾಡಿಸಮ್ ಅಥವಾ ಮಧುಮೇಹದಂತಹ ಅಂತಃಸ್ರಾವಕ ಕಾಯಿಲೆಗಳಿಂದ ಈ ಸಮಸ್ಯೆ ಉಂಟಾಗಬಹುದು. ಮದ್ಯಪಾನ ಹಾಗೂ ಧೂಮಪಾನದಂತಹ ಪ್ರಕ್ರಿಯೆಗಳಿಂದಲೂ ಈ ಸಮಸ್ಯೆ ಕಾಡುತ್ತದೆ. ಪುರುಷರ ಲೈಂಗಿಕ ಆರೋಗ್ಯದ ಮತ್ತೊಂದು ಸಮಸ್ಯೆಯೆಂದರೆ ಮಾನಸಿಕ ಅಸ್ವಸ್ಥತೆ.
  • ಕಡಿಮೆ ಲೈಂಗಿಕಾಸಕ್ತಿ:ಲೈಂಗಿಕಾಸಕ್ತಿ ಅಥವಾ ಸೆಕ್ಸ್ ಡ್ರೈವ್ ಸ್ವಾಭಾವಿಕವಾಗಿ ಗಂಡು ಹಾಗೂ ಹೆಣ್ಣಿಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆ. ಲೈಂಗಿಕ ಆನಂದವು ಮನರಂಜನಾ ಚಟುವಟಿಕೆಯಾಗಿದ್ದು, ಇದರ ಬಗ್ಗೆ ಕೆಟ್ಟ ಆಲೋಚನೆಗಳು ನಮ್ಮ ತಲೆಯಲ್ಲಿ ಸುಳಿಯಬಾರದು. ಅದು ಅಗತ್ಯವೂ ಇಲ್ಲ ಮತ್ತು ಆದರ್ಶಪ್ರಾಯವಾಗಿ ಯಾರ ಮೇಲೂ ಅದನ್ನು ಹೇರಬಾರದು. ಇದರಿಂದ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆ ಉಂಟಾಗಿ ಒತ್ತಡ ಅಥವಾ ಆತಂಕವನ್ನು ಅನುಭವಿಸುವುದಕ್ಕೆ ಕಡಿವಾಣ ಹಾಕಬಹುದು. ಇಲ್ಲವಾದರೆ ಲೈಂಗಿಕಾಸಕ್ತಿ ಕಡಿಮೆಯಾಗುತ್ತದೆ. ಈ ಸಮಸ್ಯೆ ಹೆಚ್ಚಾದರೆ ತಜ್ಞರಿಂದ ಪರೀಕ್ಷಿಸಿಕೊಳ್ಳಬಹುದು.
  • ಅಕಾಲಿಕ ಸ್ಖಲನ: ಸಾಮಾನ್ಯವಾಗಿ ಮೂರು ಪುರುಷರಲ್ಲಿ ಒಬ್ಬರು ಅಕಾಲಿಕ ಪರಾಕಾಷ್ಠೆಯ ಬಗ್ಗೆ ದೂರು ನೀಡುತ್ತಲೇ ಇರುತ್ತಾರೆ. ಇದು ಪುರುಷರ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಏಕೆಂದರೆ, ಅವರು ತಮ್ಮ ಸಂಗಾತಿಯನ್ನು ಮೆಚ್ಚಿಸಲು ಅಸಮರ್ಥ ಎಂದು ಭಾವಿಸಿಕೊಳ್ಳುತ್ತಾರೆ. ಇದು ಮತ್ತಷ್ಟು ಆತ್ಮವಿಶ್ವಾಸವನ್ನು ಕುಗ್ಗಿಸಿಬಿಡುತ್ತದೆ. ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಹಾಗೆ ತೀವ್ರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಜೈವಿಕ ಪ್ರಕ್ರಿಯೆಗಳಿಗೆ ಯಾವುದೇ ವೈಜ್ಞಾನಿಕ ವಿವರಣೆಯಿಲ್ಲ ಎಂದು ಹೇಳುವ ಹಾಗೇಯೇ ಇಲ್ಲ. ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಅನೇಕ ಸಮಸ್ಯೆಗೆ ಕಾರಣಗಳಿವೆ ಎಂದು ಖಚಿತವಾಗಿ ತಿಳಿದುಕೊಳ್ಳಲು ಸಮಾಜವು ಸಾಕಷ್ಟು ಮುಂದುವರೆದಿದೆ. ಸಮುದಾಯವು ಒಟ್ಟಾಗಿ ಮಾಡಬೇಕಾಗಿರುವುದು ಲೈಂಗಿಕ ಕಾಯಿಲೆಗ ಬಗ್ಗೆ ಇತರ ಕಾಯಿಲೆಗಳಂತೆ ಮುಕ್ತವಾಗಿ ಮಾತನಾಡುವುದು.

ಪ್ರಸ್ತುತ ಸಮಾಜದಲ್ಲಿ ಬಹು ಲಿಂಗಿಗಳು ಇರುವ ಸಮಯವನ್ನು ನಾವು ನೋಡುತ್ತಿದ್ದೇವೆ. ಹಿಂದೆಂದಿಗಿಂತಲೂ ಹೆಚ್ಚು ಈಗ ಈ ವಿಷಯ ಮುಕ್ತವಗಬೇಕಿದೆ. ಜೀವನದಲ್ಲಿ ಯಾವುದೇ ಇತರ ಅಗತ್ಯಗಳಂತೆ ಲೈಂಗಿಕ ಸಂತೋಷವು ವ್ಯಕ್ತಿಯ ಪ್ರಮುಖ ಕಾರ್ಯವಾಗಿದೆ. ಸಂಬಂಧಗಳಲ್ಲಿ ಇದು ಸ್ವಲ್ಪ ಸಾಂಪ್ರದಾಯಿಕವಾಗಿದ್ದು, ಅದನ್ನು ಬಿಟ್ಟು ಮುಕ್ತ ಮನಸ್ಸಿನಿಂದ ಈ ಬಗ್ಗೆ ಆಲೋಚನೆ ಮಾಡಿದರೆ ಮಹತ್ವದ ಪಾತ್ರವನ್ನು ನಿರ್ವಹಿಸಿದಂತೆ. ಇದು ಸಂಬಂಧಗಳು ಮತ್ತು ಭಾವನಾತ್ಮಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಜೀವನದ ಎಲ್ಲಾ ಅಂಶಗಳಲ್ಲಿ ವರ್ಧಿತ ಆತ್ಮವಿಶ್ವಾಸ ಮತ್ತು ದೃಷ್ಟಿಕೋನಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ:ದಂಪತಿ ಭಾವನಾತ್ಮಕವಾಗಿ ದೂರವಾಗಲು ಕಾರಣ ಮತ್ತು ವೈದ್ಯರ ಸಲಹೆ ಏನ್​ ಗೊತ್ತಾ?

ABOUT THE AUTHOR

...view details