ಕರ್ನಾಟಕ

karnataka

ETV Bharat / sukhibhava

ಇದೇ ಕಾರಣಕ್ಕೆ ಬೆಳಗ್ಗೆ ಎದ್ದಾಕ್ಷಣ ಟೀ ಸೇವನೆ ಒಳ್ಳೆಯದಲ್ಲ ಎನ್ನುವುದು! ಹಾಗಾದರೆ? - ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ

ಟೀ ಆರೋಗ್ಯಕರ ಗುಣ ಹೊಂದಿದ್ದು, ಚಯಾಪಚಯಕ್ಕೆ ಸಹಾಯ ಮಾಡಿದರೂ ಬೆಳಗ್ಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದು ಉತ್ತಮ ಅಲ್ಲ ಎಂದು ತಜ್ಞರು ಸಲಹೆ ನೀಡಿದ್ದಾರೆ.

For this reason, drinking tea right away in the morning is not good
For this reason, drinking tea right away in the morning is not good

By

Published : Apr 26, 2023, 2:21 PM IST

ನವದೆಹಲಿ: ಸ್ನೇಹಿತರೊಂದಿಗೆ, ಮನೆಗೆ ಆಗಮಸಿದ ಬಂಧುಗಳೊಂದಿಗೆ ಸೇವಿಸಲು ಚಹಾಗಿಂತ ಅತ್ಯುತ್ತಮ ಪಾನೀಯ ಇಲ್ಲ. ಅಷ್ಟೇ ಅಲ್ಲದೇ, ಏಕಾಂತದಲ್ಲಿನ ನಿಮ್ಮ ಯೋಚನಾ ಲಹರಿಗೆ ಜೊತೆಯಾಗುವುದು ಕೂಡ ಇದೇ ಚಹಾ. ಅನೇಕ ಆರೋಗ್ಯಕರ ಗುಣ ಹೊಂದಿರುವ ಚಹಾದಲ್ಲಿ ಕ್ಯಾತೆಚಿನ್ಸ್​ ಮತ್ತು ಆ್ಯಂಟಿ ಆಕ್ಸಿಡೆಂಟ್​ ಇದ್ದು, ಇದು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ಚಯಾಪಚಯಕ್ಕೆ ಸಹಾಯ ಮಾಡುತ್ತದೆ.

ಭಾರತದ ಅನೇಕ ಮನೆಗಳಲ್ಲಿ ಈ ಚಹಾದ ಅಭ್ಯಾಸ ಬೆಳಗ್ಗೆ ಏಳುತ್ತಿದ್ದಂತೆ ಶುರುವಾಗುತ್ತದೆ. ರುಚಿಕರವಾದ, ಆರಾಮದಾಯವಾದ ಚಹಾ ಇಲ್ಲದೇ ಅನೇಕರ ದಿನ ಆರಂಭವೂ ಆಗುವುದಿಲ್ಲ. ಚಹಾದಲ್ಲಿ ಕೆಫಿನ್​ ಅಂಶ ಇಲ್ಲದಿರುವುದರಿಂದ ಇದು ದೇಹದ ಚುರುಕುತನಕ್ಕೆ ಕಾರಣವಾಗುತ್ತದೆ. ಆದರೆ, ಇಂತಹ ಚಹಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಉತ್ತಮವಲ್ಲ ಎನ್ನುತ್ತಾರೆ ತಜ್ಞರು. ಚಹಾ ಮತ್ತು ಯಾವುದೇ ಕೆಫಿನ್​ ಅಂಶ ಹೊಂದಿರುವ ಪಾನೀಯವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಇದರಿಂದ ಆ್ಯಸಿಡಿಟಿ ಮತ್ತು ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ. ಈ ಕೆಫಿನ್​ ಹೊಟ್ಟೆಯಲ್ಲಿ ಆ್ಯಡಿಡ್​ ಬಿಡುಗಡೆ ಮಾಡಿ, ಕಿರಿಕಿರಿ ಜೊತೆಗೆ ಊರಿಯುತಕ್ಕೆ ಕಾರಣವಾಗುತ್ತದೆ.

ಬೆಳಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿ ಚಹಾದ ಸೇವನೆ ಮಾಡುವುದರಿಂದಾಗಿ ಇದು ದೇಹದಲ್ಲಿನ ನೈಸರ್ಗಿಕ ಕಾರ್ಟಿಸೊಲ್​ ಉತ್ಪಾದನೆಗೆ ಅಡ್ಡಿ ಮಾಡುತ್ತದೆ. ಡಯಾಟಿಷಿಯನ್​ ವಿಧಿ ಚಾವ್ಲಾ ಪ್ರಕಾರ, ಕಾರ್ಟಿಸೊಲ್​​​ ಹಾರ್ಮೋನ್​ ನಿದ್ರೆಯ ಚಕ್ರವನ್ನು ನಿಯಂತ್ರಿಸುತ್ತದೆ. ಹಾಗೇ ಇಡೀ ದಿನ ದೇಹಕ್ಕೆ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಯಾವಾಗ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಫಿನ್​ ಸೇವನೆ ಮಾಡುತ್ತೀರಾ ಆಗ ಅದು ದೇಹದ ಕಾರ್ಟಿಸೋಲ್​​, ಉತ್ಪಾದನೆ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತದೆ, ಅಲ್ಲದೇ ಇದು ಆಯಾಸ ಮತ್ತ ಆಲಸ್ಯಕ್ಕೆ ಕಾರಣವಾಗುತ್ತದೆ.

ಪಿಸಿಕೊ ಡಯಟ್​​ ಕ್ಲಿನಿಕ್ ಸಂಸ್ಥಾಪಕರಾದ​ ವಿಧಿ ಚಾವ್ಲಾ ಹೇಳುವಂತೆ, ಬೆಳಗ್ಗೆ ಎದ್ದಾಕ್ಷಣ ಟೀ ಕುಡಿಯುವುದರಿಂದ ಅನೇಕ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಇದರಿಂದ ಆಗುವ ಸಮಸ್ಯೆಗಳು ಈ ರೀತಿ ಇದೆ.

ಹೊಟ್ಟೆ ಕಿರಿಕಿರಿ:ಖಾಲಿ ಹೊಟ್ಟೆಯಲ್ಲಿ ಟೀ ಸೇವನೆ ಮಾಡುವುದು ಊರಿಯೂತಕ್ಕೆ ಕಾರಣವಾಗುತ್ತದೆ. ಇದರಿಂದ ಹೊಟ್ಟೆಯಲ್ಲಿ ಅನಾನುಕೂಲತೆ, ಹುಳಿತೇಗು, ವಾಂತಿ ಆಗುತ್ತದೆ.

ನಿರ್ಜಲೀಕರಣ: ಟೀ ಸೇವನೆಯಿಂದ ಹೆಚ್ಚು ಮೂತ್ರ ಸೇವನೆ ಮಾಡುವಂತೆ ಆಗಿದೆ. ಇದರಿಂದ ದೇಹದಲ್ಲಿ ನಿರ್ಜಲೀಕರಣವಾಗುತ್ತದೆ. ಅದರಲ್ಲೂ ರಾತ್ರಿಯೆಲ್ಲಾ ಯಾವುದೇ ನೀರಿಲ್ಲದ ದೇಹ ಇರುವಾಗ ಬೆಳಗ್ಗಿನ ಹೊತ್ತು ಟೀ ಸೇವನೆ ಮಾಡುವುದುರಿಂದ ಹೆಚ್ಚಿನ ನಿರ್ಜಲೀಕರಣ ಆಗುತ್ತದೆ.

ಪೋಷಕಾಂಶ ಹೀರಿಕೊಳ್ಳುತ್ತದೆ: ಟೀ ಅಲ್ಲಿ ಟ್ಯಾನ್ನಿನ್ಸ್​ ಇರುತ್ತದೆ ಕಬ್ಬಿಣ, ಕ್ಯಾಲ್ಸಿಯಂನತಹ ಮಿನರಲ್ಸ್​ ಅನ್ನು ದೇಹ ಹೀರಿಕೊಳ್ಳುವುದನ್ನು ಇದು ತಡೆಹಿಡಿಯುತ್ತದೆ.

ಹಲ್ಲಿನ ಸಮಸ್ಯೆ: ಹಲ್ಲಿನಲ್ಲಿ ನೈಸರ್ಗಿಕ ಆ್ಯಸಿಡ್​ ಇದ್ದು, ಇದು ಎನೋಮಲ್​ನಿಂದ ಕೂಡಿರುತ್ತದೆ. ದೀರ್ಘಾಕಾಲ ಟೀ ಅಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ಇದು ನಾಶವಾಗುತ್ತದೆ.

ಈ ಹಿನ್ನಲೆ ಟೀ ಅನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬದಲಾಗಿ, ಬೆಳಗಿನ ತಿಂಡಿ ಅಥವಾ ಮಧ್ಯಂತರದಲ್ಲಿ ಸೇವಿಸುವುದರಿಂದ ಇದು ದೇಹದ ಚಯಾಪಚಯ ಕ್ರಿಯೆಗೆ ಸಹಾಯವಾಗುತ್ತದೆ ಎಂದು ಸೆಲೆಬ್ರಿಟಿ ಪೌಷ್ಟಿಕತಜ್ಞರಾದ ಪೂಜಾ ಮಖಿಜಾ ತಿಳಿಸಿದ್ದಾರೆ.

ಇದನ್ನೂ ಓದಿ: ಅನಾರೋಗ್ಯಕರ ಆಹಾರದ ಜಾಹೀರಾತು ನಿಷೇಧಿಸಿ; ತಜ್ಞರ ಕರೆ

ABOUT THE AUTHOR

...view details