ಬೆಂಗಳೂರು: ವಿಶ್ವ ಅಸ್ಪಿಯೊಪೊರೋಸಿಸ್ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 20ರಂದು ಆಚರಿಸಲಾಗುವುದು. ಈ ಮೂಲಕ ಗೊತ್ತಿಲ್ಲದೇ ಹೆಚ್ಚಿನ ಭಾದೆ ಉಂಟು ಮಾಡುವ ಈ ಅಸ್ಟಿಯೊಪೊರೋಸಿಸ್ ಕುರಿತು ಅರಿವು ಮೂಡಿಸಲಾಗುವುದು. ಅಸ್ಟಿಯೊಪೊರೋಸಿಸ್ ಅಂದರೆ, ಅಸ್ಥಿರಂದ್ರತೆಯಾಗಿದ್ದು, ಇದು ಮೂಳೆಗಳಿಗೆ ಸಂಬಂಧಿಸಿದ ರೋಗವಾಗಿದೆ. ಈ ದಿನದಂದು ಈ ರೋಗದ ಅರಿವು, ಇದರ ಪತ್ತೆ, ತಡೆ ಮತ್ತು ಮೂಳೆಗಳ ಆರೋಗ್ಯ ಬಲಗೊಳಿಸುವ ಕುರಿತು ಜಾಗೃತಿ ಮೂಡಿಸಲಾಗುವುದು.
ಏನಿದು ಅಸ್ಟಿಯೊಪೊರೋಸಿಸ್: ಗ್ರೀಕ್ ಪದ ಅಸ್ಟಿಯೋ (ಮೂಳೆ) ಪೊರೋಸಿಸ್ (ರಂಧ್ರ) ಎಂಬ ಪದದಿಂದ ಈ ಪದ ಉಗಮನವಾಗಿದ್ದು, ಇದರ ಅರ್ಧ ರಂಧ್ರವಿರುವ ಮೂಳೆಯಾಗಿದೆ. ಈ ಪರಿಸ್ಥಿತಿಯಲ್ಲಿ ಮೂಳೆ ತಮ್ಮ ಶಕ್ತಿ ಮತ್ತು ಸಾಂಧ್ರತೆ ಕಳೆದುಕೊಂಡು ದುರ್ಬಲಗೊಳ್ಳುತ್ತದೆ. ದುರದೃಷ್ಟಕರ ಎಂದರೆ, ಅಸ್ಟಿಯೊಪೊರೀಸಿಸ್ ಎಂಬುದು ಸಣ್ಣ ಅಪಘಾತದಿಂದ ಸಂಭವಿಸಲಿದ್ದು, ಹೆಚ್ಚಿನ ಬಾರಿ ಗಮನಕ್ಕೆ ಬರುವುದಿಲ್ಲ.
ಧ್ಯೇಯ ವಾಕ್ಯ:ವಿಶ್ವ ಅಸ್ಟಿಯೊಪೊರೋಸಿಸ್ ದಿನದ ಈ ಬಾರಿಯ ಧ್ಯೇಯ ವಾಕ್ಯ ಉತ್ತಮ ಮೂಳೆಗಳ ನಿರ್ಮಾಣವಾಗಿದೆ. ಈ ಮೂಲಕ ಮೂಳೆಗಳ ಆರೋಗ್ಯಕ್ಕೆ ಒತ್ತು ನೀಡುವ ಕಾಳಜಿಯನ್ನು ವಹಿಸಲು ಸೂಚಿಸಲಾಗಿದೆ
ಇತಿಹಾಸ: ವಿಶ್ವ ಆಸ್ಟಿಯೊಪೊರೋಸಿಸ್ ದಿನವನ್ನು 1996ರಲ್ಲಿ ಅಕ್ಟೋಬರ್ 20ರಂದು ಯುನೈಟೆಡ್ ಕಿಂಗ್ಡಮ್ನ ರಾಷ್ಟ್ರೀಯ ಆಸ್ಟಿಯೊಪೊರೋಸಿಸ್ ಸಮಾಜ ಯುರೋಪಿಯನ್ ಕಮಿಷನ್‌ನ ಸಹಭಾಗಿತ್ವದಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಗುರುತಿಸಲಾಯಿತು.1997ರಲ್ಲಿ ಅಂತಾರಾಷ್ಟ್ರೀಯ ಆಸ್ಟಿಯೊಪಿರೀಸಿಸ್ ಫೌಂಡೇಶನ್ (ಐಒಎಫ್) ಇದರ ನಿಯಂತ್ರಣ ವಹಿಸಿ, ಈ ಕುರಿತು ಜಾಗತಿಕವಾಗಿ ಪ್ರಚಾರ ಮಾಡಲು ಮುಂದಾಯಿತು.
1998-99ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದಕ್ಕೆ ಕೈ ಜೋಡಿಸಿತು 1999ರಲ್ಲಿ ಆರಂಭಿಕ ಪತ್ತೆ ಎಂಬ ಧ್ಯೇಯವಾಕ್ಯದಲ್ಲಿ ಆಸ್ಟಿಯೊಪೊರೋಸಿಸ್ ಅನ್ನು ಅದರ ಆರಂಭಿಕ ಹಂತದಲ್ಲಿ ಗುರುತಿಸುವ ಮಹತ್ವವನ್ನು ಎತ್ತಿ ತೋರಿಸುತ್ತದೆ.
ಮಹತ್ವ:ಆಸ್ಟಿಯೊಪೊರೋಸಿಸ್ ಎನ್ನುವುದು ಮೂಳೆಗಳ ದುರ್ಬಲಗೊಳ್ಳುವಿಕೆಯ ಸ್ಥಿತಿಯಾಗಿದೆ. ಮೂಳೆ ಮುರಿತದವರೆ ಇದರ ಯಾವುದೇ ಲಕ್ಷಣ ಕಾಣಿಸುವುದಿಲ್ಲ. ಈ ಮೂಳೆ ಮುರಿತವೂ ಸಣ್ಣ ಅಪಘಾತದಿಂದಲೂ ಸಂಭವಿಸಬಹುದಾಗಿದೆ. ಆಸ್ಟಿಯೊಪೊರೋಸಿಸ್ ಹೆಚ್ಚಾಗಿ ವಯಸ್ಕರನ್ನು ಭಾದಿಸುತ್ತದೆ. ಲಕ್ಷಣರಹಿತದ ಈ ರೋಗವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಮೂಳೆ ಮುರಿತ ತಪ್ಪಿಸಲು ಇರುವ ಐದು ಸಲಹೆ
ನಿಯಮಿತ ವ್ಯಾಯಾಮ: ಸ್ನಾಯುಗಳನ್ನು ಬಲಗೊಳಿಸುವಿಕೆ, ಸಮತೋಲಿತ ತರಬೇತಿ ವ್ಯಾಯಾಮ, ದೈನಂದಿನ ಚಟುವಟಿಕೆಗಳು ಮೂಳೆ ಮತ್ತು ಸ್ನಾಯುವನ್ನು ಬಲಗೊಳಿಸುವಲ್ಲಿ ಮುಖ್ಯವಾಗುತ್ತದೆ.