ಹೈದರಾಬಾದ್: ಋತುಚಕ್ರ ಎಂಬುದು ಪ್ರತಿ ಯುವತಿ, ಮಹಿಳೆಯರ ಜೀವನದಲ್ಲಿ ತಡೆಗಟ್ಟಲಾಗದ ಭಾಗವಾಗಿದೆ. ಅಷ್ಟೇ ಅಲ್ಲದೆ, ಇದು ಅವರಲ್ಲಿ ಒತ್ತಡ, ಹಾರ್ಮೋನ್ ಬದಲಾವಣೆ, ಪೋಷಕಾಂಶದ ಕೊರತೆ, ಅಧಿಕ ಸ್ರಾವ ಮತ್ತು ತೀವ್ರತರದ ಭಾವನೆ ಅನುಭವಗಳು ಕೂಡ ಈ ಸಮಯದಲ್ಲಿ ಭಾದಿಸುವುದು ಸುಳ್ಳಲ್ಲ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಾಣಲು ಈ ಸಂದರ್ಭದಲ್ಲಿ ಮಹಿಳೆಯರ ಸಮತೋಲಿತ ಆಹಾರ ಸೇವನೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಈ ಸಮಯದಲ್ಲಿ ನಿಮ್ಮ ಡಯಟ್ನಲ್ಲಿ ಈ ಆಹಾರ ಸೇವಿಸುವುದನ್ನು ಮರೆಯಬೇಡಿ.
ಹಸಿರು ತರಕಾರಿಗಳು: ಇದರಲ್ಲಿ ಸಮೃದ್ದವಾದ ಮಿನರಲ್ಸ್, ಐರನ್, ಮೆಗ್ನಿಶಿಯಂ, ಪೊಟ್ಯಾಷಿಯಂ ಮತ್ತು ಜಿಂಕ್ ಅಂಶವನ್ನು ಹೊಂದಿದೆ. ಇದು ಋತುಚಕ್ರದ ನೋವನ್ನು ಕಡಿಮೆ ಮಾಡಲಿದ್ದು, ರಕ್ತ ಹೀನತೆ ನಿರ್ವಹಣೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಆಹಾರದಲ್ಲಿನ ಹಸಿರು ತರಕಾರಿಗಳು ಮಿದುಳನ್ನು ಶಾಂತಗೊಳಿಸಿ ಈ ಅವಧಿಯಲ್ಲಿ ವಿಶ್ರಾಂತಿ ನೀಡುತ್ತದೆ.
ಬಾಳೆಹಣ್ಣು: ಆಲಸ್ಯ ದೇಹಕ್ಕೆ ತಕ್ಷಣಕ್ಕೆ ಶಕ್ತಿ ಒದಗಿಸುವಲ್ಲಿ ಶಕ್ತಿ ನೀಡುತ್ತದೆ. ಇದರಲ್ಲಿ ಪೋಟಾಶಿಯಂ ಅಂಶ ಇದ್ದು, ಇದು ಹೊಟ್ಟೆಯಲ್ಲಿನ ನೀರಿನ ಸಂಗ್ರಹಣಾ ಅಂಶವನ್ನು ನಿರ್ವಹಣೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ದೇಹ ನಿರ್ಜಲೀಕರಣಗೊಳ್ಳುವುದನ್ನು ತಡೆಯುತ್ತದೆ. ಹೆಚ್ಚುವರಿಯಾಗಿ ಇದರಲ್ಲಿನ ಟ್ರೈಪ್ಟೊಫೊನ್ ಸೆರೊಟೊನಿನ್ ಅನ್ನು ಉತ್ತೇಜಿಸುತ್ತದೆ.