ನ್ಯೂಯಾರ್ಕ್: ಹೊಸ ಅಧ್ಯಯನವೊಂದರ ಪ್ರಕಾರ, ಕನಿಷ್ಠ ಒಂದು ಫ್ಲೂ(ರೋಗಾಣು) ಲಸಿಕೆ ಪಡೆದ ಜನರು ನಾಲ್ಕು ವರ್ಷಗಳ ಅವಧಿಯಲ್ಲಿ ಅಲ್ಜೆಮೈರ್ಸ್(ಮರೆವಿನ ಕಾಯಿಲೆ) ಕಾಯಿಲೆಗೆ ಒಳಗಾಗುವ ಸಾಧ್ಯತೆ ಶೇ 40ರಷ್ಟು ಕಡಿಮೆ ಎಂದು ತಿಳಿಸಿದೆ. ಯೂನಿವರ್ಸಿಟಿ ಆಫ್ ಟೆಕ್ಸಾಸ್ ಹೆಲ್ತ್ ಸೈನ್ಸ್ ಸೆಂಟರ್, ಹ್ಯೂಸ್ಟನ್ ನಡೆಸಿದ ಅಧ್ಯಯನ ಈ ಸಂಗತಿಯನ್ನು ಪತ್ತೆ ಹಚ್ಚಿದೆ.
ಲಸಿಕೆ ಪಡೆದ ಜನರಿಗೆ ಶೇ.40ರಷ್ಟು ಮರೆವಿನ ಕಾಯಿಲೆಯ ಬಾಧೆ ಕಡಿಮೆ - ಆಲ್ಝೈಮರ್ ಕಾಯಿಲೆ ಸುದ್ದಿ
ಕನಿಷ್ಠ ಒಂದು ಲಸಿಕೆಯನ್ನು ಪಡೆದ ಜನರು ನಾಲ್ಕು ವರ್ಷಗಳ ಅವಧಿಯಲ್ಲಿ ಅಲ್ಜೆಮೈರ್ಸ್ ಕಾಯಿಲೆಗೆ ಒಳಗಾಗುವ ಸಾಧ್ಯತೆ ಶೇ.40ರಷ್ಟು ಕಡಿಮೆ ಎಂದು ತಜ್ಞರು ಕಂಡುಕೊಂಡಿದ್ದಾರೆ.
ಆಲ್ಝೈಮರ್ ಕಾಯಿಲೆ
ಇದನ್ನೂ ಓದಿ:ಮೂತ್ರನಾಳ ಸೋಂಕು: ಮಹಿಳೆಯರೇ ಈ ನಿಯಮಗಳನ್ನು ಪಾಲಿಸಿ ಸೋಂಕಿನಿಂದ ದೂರವಿರಿ
ಫ್ಲೂ ವ್ಯಾಕ್ಸಿನೇಷನ್ ವಯಸ್ಕರಲ್ಲಿ ಹಲವು ವರ್ಷಗಳಿಂದ ಅಲ್ಜೆಮೈರ್ಸ್ ಕಾಯಿಲೆಯನ್ನು ಹೆಚ್ಚಿಸುವ ಅಪಾಯ ಕಡಿಮೆ ಮಾಡುತ್ತದೆ. ಈ ರಕ್ಷಣಾತ್ಮಕ ಪರಿಣಾಮದ ಬಲವು ವ್ಯಕ್ತಿಯು ವಾರ್ಷಿಕವಾಗಿ ಲಸಿಕೆ ಪಡೆದ ವರ್ಷಗಳ ಸಂಖ್ಯೆಯೊಂದಿಗೆ ಹೆಚ್ಚಾಗುತ್ತದೆ. ಪ್ರತಿ ವರ್ಷ ಸತತವಾಗಿ ಫ್ಲೂ ಲಸಿಕೆ ಪಡೆದವರಲ್ಲಿ ಮರೆವಿನ ಕಾಯಿಲೆಯ ಬೆಳವಣಿಗೆ ದರ ಕಡಿಮೆ ಎಂದು ವಿಶ್ವವಿದ್ಯಾಲಯದ ಪ್ರೊ|ಅವ್ರಾಮ್ ಎಸ್. ಬುಕ್ಬಿಂದರ್ ವಿವರಿಸಿದರು.