ಕರ್ನಾಟಕ

karnataka

ETV Bharat / sukhibhava

Fish oil: ಒಮೆಗಾ 3 ಫ್ಯಾಟಿ ಆ್ಯಸಿಡ್​ ಪಡೆಯಲು ಮೀನು ಉತ್ತಮವಾ ಅಥವಾ ಮೀನಿನ ಎಣ್ಣೆಯಾ?.. ಏನು ಹೇಳುತ್ತೆ ಅಧ್ಯಯನ? - ಈ ಆಮ್ಲದ ಪಾತ್ರ ಮಹತ್ವದ್ದಾಗಿದೆ

Eating fish: ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನ ನೀಡುವ ಒಮೆಗಾ 3 ಫ್ಯಾಟಿ ಆಮ್ಲದ ಪ್ರಯೋಜನಕ್ಕೆ ಮೀನು ಉತ್ತಮವಾ ಅಥವಾ ಮೀನಿನ ಎಣ್ಣೆ ಉತ್ತಮವಾ ಎಂಬ ಪ್ರಶ್ನೆ ಕಾಡುವುದು ಸಹಜ.

fish-or-fish-oil-the-best-source-of-omega-3-fatty-acids
fish-or-fish-oil-the-best-source-of-omega-3-fatty-acids

By ETV Bharat Karnataka Team

Published : Oct 31, 2023, 12:18 PM IST

ಮೀನು ಮತ್ತು ಮೀನಿನ ಎಣ್ಣೆಯು ಒಮೆಗಾ 3 ಫ್ಯಾಟಿ ಆಮ್ಲದ ಅಗರವಾಗಿದೆ. ವ್ಯಕ್ತಿಯ ಒಟ್ಟಾರೆ ಆರೋಗ್ಯ ನಿರ್ವಹಣೆಯಲ್ಲಿ ಈ ಆಮ್ಲದ ಪಾತ್ರ ಮಹತ್ವದ್ದಾಗಿದೆ. ಮೀನು ಹಾಗೂ ಮೀನಿನ ಎಣ್ಣೆಗಳು ಒಮೆಗಾ 3 ಫ್ಯಾಟಿ ಆ್ಯಸಿಡ್​ ಹೊಂದಿದ್ದು, ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೇ ಮಿದುಳಿನ ಆರೋಗ್ಯವನ್ನು ಹೆಚ್ಚಿಸಿ, ಅಸ್ಥಿ ಸಂಧಿವಾತದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಇಂತಹ ಒಮೆಗಾ 3 ಫ್ಯಾಟಿ ಆಮ್ಲದ ಪ್ರಯೋಜನಕ್ಕೆ ಮೀನು ಉತ್ತಮವಾ ಅಥವಾ ಮೀನಿನ ಎಣ್ಣೆ ಉತ್ತಮವಾ ಎಂಬ ಪ್ರಶ್ನೆ ಕಾಡುವುದು ಸಹಜ. ಮೀನು ಸೇವಿಸದ ಅನೇಕರಲ್ಲಿ ಈ ಮೀನಿನ ಎಣ್ಣೆಗಳು ಅಷ್ಟೇ ರೀತಿಯ ಪ್ರಯೋಜನ ನೀಡುತ್ತದೆಯಾ ಎಂಬ ಕುರಿತು ಅನೇಕ ಅಧ್ಯಯನಗಳು ನಡೆದಿದೆ. ಈ ಹಿನ್ನೆಲೆ ಯಾವುದು ಇದರಲ್ಲಿ ಬೆಸ್ಟ್​ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಒಮೆಗಾ 3 ಫ್ಯಾಟಿ ಆಮ್ಲಗಳು ಬಹು ಅಪರ್ಯಾಪ್ತ ವಿಧದ ಕೊಬ್ಬಿನ ಆಮ್ಲಗಳಾಗಿದೆ. ಇದನ್ನು ನಮ್ಮ ದೇಹವೇ ಉತ್ಪಾದಿಸುವುದಿಲ್ಲ. ಈ ಹಿನ್ನಲೆ ಆಹಾರದಿಂದ ಇದನ್ನು ನಾವು ಪಡೆಯುವುದು ಅತ್ಯವಶ್ಯಕವಾಗಿದೆ. ಇನ್ನು ಈ ಒಮೆಗಾ 3 ಫ್ಯಾಟಿ ಆ್ಯಸಿಡ್​ನಲ್ಲಿ ಮೂರು ವಿಧ ಇದೆ. ಮೊದಲನೆಯದು ಅಲ್ಫಾ ಲಿನೊಲೆಕ್​ ಆ್ಯಸಿಡ್​ (ಎಎಲ್​ಎ). ಇದು ಹಸಿರು ಎಲೆಗಳ ತರಕಾರಿ, ವಾಲ್ನಟ್​​, ಫ್ಲೆಕ್ಸ್​ ಸೀಡ್​​ ಮತ್ತು ಚಿಯಾ ಸೀಡ್​ (ಕಾಮ ಕಸ್ತೂರಿ ಬೀಜ)ದಲ್ಲಿ ಲಭ್ಯವಿದೆ. ಎರಡನೇಯದು ಐಕೋಸಾಪೆಂಟೇನೊಯಿಕ್ ಆಮ್ಲ (ಇಪಿಎ). ಮೂರನೆಯದು ಡೊಕೊಸಾಹೆಕ್ಸೆನೊಯಿಕ್ ಆಮ್ಲ ಈ ಎರಡು ಅಮ್ಲಗಳು ಸಮುದ್ರ ಆಹಾರ, ಮೊಟ್ಟೆ ಮತ್ತು ಹಾಲಿನಲ್ಲಿ ಸಿಗುತ್ತದೆ. ಈ ಆಮ್ಲಗಳು ಕೋಶಗಳ ಸರಿಯಾದ ರಚನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೃದಯ, ಶ್ವಾಸಕೋಶ, ರಕ್ತ ನಾಳ ಮತ್ತು ಇಮ್ಯೂನ್​ ವ್ಯವಸ್ಥೆಯಲ್ಲಿ ಇದು ಅಗತ್ಯವಾಗಿದೆ.

ಆದಾಗ್ಯೂ, ಪ್ರಾಥಮಿಕ ಅಧ್ಯಯನ ಸಲಹೆ ಮಾಡುವಂತೆ ಮೀನಿನ ಎಣ್ಣೆ ಅಂಶವೂ ಮೀನಿನ ಎಣ್ಣೆಯನ್ನು ಸೇವಿಸುವುದಲ್ಲಿ ಮೀನನ್ನು ಸೇವಿಸದ ಜನರಿಗೆ ಹೆಚ್ಚಿನ ಜನರಲ್ಲಿ ಕಾಣಬಹುದಾಗಿದೆ. ಅದೇ ರೀತಿ ಮತ್ತೊಂದು ಅಧ್ಯಯನದಲ್ಲಿ ಮೀನಿನ ಎಣ್ಣೆ ಮಾತ್ರೆಗಳು ಮೀನು ಸೇವಿಸಿದಷ್ಟೇ ಪ್ರಯೋಜನಕಾರಿ ಫಲಿತಾಂಶವನ್ನು ನೀಡುತ್ತದೆ. ಮೀನು ಕೇವಲ ಒಮೆಗಾ ಫ್ಯಾಟಿ ಆ್ಯಸಿಡ್​ ಮಾತ್ರ ಹೊಂದಿರುವುದಿಲ್ಲ. ಇದರಲ್ಲಿ ಪ್ರೊಟೀನ್​, ವಿಟಮಿನ್​ ಎ, ವಿಟಮಿನ್​ ಡಿ, ಐಯೋಡಿನ್​ ಮತ್ತು ಸೆಲೆನಿಯಂ ಕೂಡ ಇರುತ್ತದೆ. ಈ ಎಲ್ಲಾ ಅಂಶಗಳು ಒಟ್ಟಾರೆ ದೇಹಕ್ಕೆ ಕೊಡುಗೆಯನ್ನು ನೀಡುತ್ತದೆ.

ಇದನ್ನೂ ಓದಿ:ಬ್ರೊಕೊಲಿಯಲ್ಲಿರುವ ಈ ಅಂಶಗಳು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ

ABOUT THE AUTHOR

...view details