ಬೆಂಗಳೂರು: ಜಗತ್ತಿನಲ್ಲಿ ಹಲವು ರಾಷ್ಟ್ರಗಳಲ್ಲಿ ಇದೀಗ ಮಂಕಿ ಪಾಕ್ಸ್ ಪ್ರಕರಣಗಳು ವರದಿಯಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಕಳೆದ ನವೆಂಬರ್ನಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ ಎಂದು ನ್ಯೂ ಸೌತ್ ವೇಲ್ಸ್ ಆರೋಗ್ಯ ಸಚಿವಾಲಯ ವರದಿ ಮಾಡಿದೆ. ಇದನ್ನು ಎನ್ಎಸ್ಡಬ್ಲ್ಯೂ ಹೆಲ್ತ್ ಕೂಡ ದೃಢಪಡಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ, ಈ ಪ್ರಕರಣವೂ ವಿದೇಶಿ ಪ್ರಯಾಣದ ಹಿನ್ನೆಲೆ ಹೊಂದಿಲ್ಲ ಬದಲಾಗಿ ಸ್ಥಳೀಯ ಪ್ರಸರಣ ಹೊಂದಿದೆ ಎಂದು ತಿಳಿಸಿದೆ.
ಈ ಕುರಿತು ತಿಳಿಸಿರುವ ಆಗ್ನೇಯ ಸಿಡ್ನಿ ಸಾರ್ವಜನಿಕ ಆರೋಗ್ಯ ಘಟಕ ನಿರ್ದೇಶಕ ವಿಕ್ಕಿ ಶೆಪರ್ಡ್, ಮೇ ಮತ್ತು ನವೆಂಬರ್ 2022ರ ನಡುವೆ ಎನ್ಎಸ್ಡಬ್ಲ್ಯೂನಲ್ಲಿ 56 ಮಂಕಿಪಾಕ್ಸ್ ಪ್ರಕರಣಗಳು ತಿಳಿಸಿದ್ದಾರೆ. ಮಂಕಿಪಾಕ್ಸ್ ಹೆಚ್ಚಿನ ಲಸಿಕೆ ನೀಡುವ ಮೂಲಕ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಬಹುದು ಎಂದು ತಿಳಿಸುತ್ತೇವೆ. ಮಂಗನ ಕಾಯಿಲೆ ತಡೆಗೆ ದೇಶದಲ್ಲಿ ಉಚಿತವಾಗಿ ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೂ ಈ ಲಸಿಕೆಗಳು ಪರಿಣಾಮಕಾರಿಯಾಗಿಲ್ಲ ಎಂದು ಎನ್ಎಸ್ಡಬ್ಲ್ಯೂ ತಿಳಿಸಿದೆ. ಈ ರೋಗ ಲಕ್ಷಣ ಹೊಂದಿರುವ ಜನರು ತಕ್ಷಣಕ್ಕೆ ವೈದ್ಯರಿಗೆ ಕರೆ ಮಾಡಿ ವೈದ್ಯರ ಸಂಪರ್ಕಕ್ಕೆ ಒಳಗಾಗುವುದು ಉತ್ತಮ ಎಂದು ಕೂಡ ಸಲಹೆ ನೀಡಿದೆ.
ಪಾಕಿಸ್ತಾನದಲ್ಲೂ ಮಂಕಿಪಾಕ್ಸ್ ಪ್ರಕರಣ: ಆಸ್ಟ್ರೇಲಿಯದ ಬಳಿಕ ನೆರೆಯ ಪಾಕಿಸ್ತಾನದಲ್ಲೂ ಕೂಡ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಈ ಕುರಿತು ಪಾಕಿಸ್ತಾನದ ಆರೋಗ್ಯ ಸಚಿವಾಲಯ ಕೂಡ ಸ್ಪಷ್ಟಪಡಿಸಿತು.