ಕರ್ನಾಟಕ

karnataka

ETV Bharat / sukhibhava

ಪಾಕಿಸ್ತಾನದಲ್ಲಿ ಐದನೇ ಪೊಲೀಯೋ ಪ್ರಕರಣ ದಾಖಲು - ಕಳೆದ ಐದು ವರ್ಷಗಳ ಬಳಿಕ

ಕರಾಚಿಯ ಗಡಪ್​​ ಟೌನ್​ನಲ್ಲಿ 31 ತಿಂಗಳ ಮಗುವಿನಲ್ಲಿ ಈ ಪೋಲಿಯೋ ವೈರಸ್​ ಪ್ರಕರಣಗಳು ಕಂಡು ಬಂದಿದೆ ಎಂದು ಪಾಕಿಸ್ತಾನ ಆರೋಗ್ಯ ಸಚಿವರು ತಿಳಿಸಿದ್ದಾರೆ.

Fifth polio case registered in Pakistan
Fifth polio case registered in Pakistan

By ETV Bharat Karnataka Team

Published : Nov 13, 2023, 4:00 PM IST

ಇಸ್ಲಾಮಾಬಾದ್​:ಪಾಕಿಸ್ತಾನದಲ್ಲಿ ಈ ವರ್ಷದ ಐದನೇ ಪೋಲಿಯೋ ಪ್ರಕರಣ ದಾಖಲಾಗಿದೆ. ಕಳೆದ ಐದು ವರ್ಷಗಳ ಬಳಿಕ ಈ ವರ್ಷ ಪೋಲಿಯೋ ಪ್ರಕರಣಗಳ ಸಂಖ್ಯೆ ಅಧಿಕ ಮಟ್ಟದಲ್ಲಿ ದಾಖಲಾಗಿದೆ. ಇದೀಗ ಹೊಸ ಪ್ರಕರಣ ಸಿಂದ್​​ ಪ್ರಾಂತ್ಯದಲ್ಲಿ ಕಂಡು ಬಂದಿದೆ.

ಕರಾಚಿಯ ಗಡಪ್​​ ಟೌನ್​ನಲ್ಲಿ 31 ತಿಂಗಳ ಮಗುವಿನಲ್ಲಿ ಈ ಪೋಲಿಯೋ ವೈರಸ್​ ಪ್ರಕರಣಗಳು ಕಂಡು ಬಂದಿದೆ ಎಂದು ಪಾಕಿಸ್ತಾನ ಆರೋಗ್ಯ ಸಚಿವರು ತಿಳಿಸಿದ್ದಾರೆ.

ಕಳೆದ ತಿಂಗಳು ಅಕ್ಟೋಬರ್​ನಲ್ಲಿ ಕರಾಚಿಯಲ್ಲಿ 24 ತಿಂಗಳ ಮಗುವಿನಲ್ಲಿ ಪೋಲಿಯೋ ವೈರಸ್​ ಪ್ರಕರಣ ಪತ್ತೆಯಾಗಿತ್ತು. ಇನ್ನುಳಿದ ಮೂರು ಪ್ರಕರಣಗಳು ಖೈಬರ್​ ಪಖ್ತುಂಖ್ವಾ ದಲ್ಲಿ ಕಂಡು ಬಂದಿದೆ. ಕರಾಚಿಯಲ್ಲಿ ಪೋಲಿಯೊ ವೈರಸ್‌ ಮತ್ತೆ ಉಲ್ಬಣಿಸಿರುವ ಸಂಬಂಧ ಆರೋಗ್ಯ ಇಲಾಖೆ ಗಂಭೀರವಾದ ತನಿಖೆಗೆ ಮುಂದಾಗಿದೆ.

ರಾಷ್ಟ್ರೀಯ ಆರೋಗ್ಯ ಸೇವೆಯ (ಎನ್​ಎಚ್​ಎಸ್​​)ನ ವಕ್ತಾರರಾದ ಸಜೀದ್​ ಶಾ ಪ್ರಕರಣ ಕುರಿತು ಮಾತನಾಡಿದ್ದು, ತಡೆಗಟ್ಟಬಹುದಾದ ರೋಗವಾದ ಪೋಲಿಯೋ ವೈರಸ್​​ಗೆ ಮತ್ತೊಂದು ಮಗು ತುತ್ತಾಗಿರುವುದು ನಿಜಕ್ಕೂ ದುರದೃಷ್ಟಕರವಾಗಿದೆ. ಎಲ್ಲ ಮಕ್ಕಳು ಪೋಲಿಯೋ ವೈರಸ್​ ಬೆದರಿಕೆಯಿಲ್ಲದೇ ಮುಕ್ತವಾಗಿ ಜೀವಿಸುವ ಹಕ್ಕನ್ನು ಹೊಂದಿದ್ದಾರೆ. ಈ ತಡೆಗಟ್ಟಬಹುದಾದ ರೋಗಕ್ಕೆ ತುತ್ತಾಗಿರುವುದು ಆಘಾತಕಾರಿಯಾಗಿದೆ ಎಂದಿದ್ದಾರೆ.

ಪೋಲಿಯೋ ವೈರಸ್​ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಇದನ್ನು ಪೋಷಕರು ಅರಿಯಬೇಕಾಗಿದೆ. ಮಕ್ಕಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಲಸಿಕೆಗಳನ್ನು ಕಾಲ ಕಾಲಕ್ಕೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದಿದ್ದಾರೆ.

ಪೋಲಿಯೋ ಮುಕ್ತ ಜಗತ್ತಿಗೆ ಇಡೀ ಜಗತ್ತು ಕಾರ್ಯ ನಿರ್ವಹಿಸುತ್ತಿದೆ. ಮಕ್ಕಳ ಭವಿಷ್ಯಕ್ಕೆ ಮಾರಕವಾಗುವ ಪೋಲಿಯೋ ವೈರಸ್​ ನಿರ್ಮೂಲನೆಗೆ ವಿಶ್ವಸಂಸ್ಥೆ ನಿರಂತರ ಕಾರ್ಯ ನಡೆಸಿದೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪಾಕಿಸ್ತಾನ ಮತ್ತು ನೆರೆಯ ಅಫ್ಘಾನಿಸ್ತಾನಗಳು ಇನ್ನೂ ಪೋಲಿಯೋ ಮುಕ್ತ ದೇಶವಾಗಿ ಉಳಿದಿಲ್ಲ. ಈ ಎರಡು ದೇಶದಲ್ಲಿ ಪೋಲಿಯೋ ಪ್ರಕರಣಗಳು ವರದಿಯಾಗುತ್ತಲೇ ಇವೆ.

ಕೊಳಚೆ ನೀರಲ್ಲಿ ಪತ್ತೆಯಾಗಿದ್ದ ಸೋಂಕು: ಸೆಪ್ಟೆಂಬರ್​ 5 ರಂದು ಕರಾಚಿಯ ದಕ್ಷಿಣ ಬಂದರು ನಗರದಲ್ಲಿ ಕೊಳಚೆ ನೀರಿನಲ್ಲಿ ಈ ಮಾದರಿಯನ್ನು ಸಂಗ್ರಹಿಸಲಾಗಿತು. ಈ ವೇಳೆ, ವೈಲ್ಡ್​​ ಪೋಲಿಯೋ ವೈರಸ್​​ ಪತ್ತೆಯಾಗಿತ್ತು. ಮತ್ತೊಂದನ್ನು ಹಂಗು ಜಿಲ್ಲೆಯಲ್ಲಿ ಪತ್ತೆ ಮಾಡಲಾಗಿದ್ದು, ಎರಡರ ಪರೀಕ್ಷೆ ನಡೆಸಿದಾಗ ಪಾಸಿಟಿವ್​​ ವರದಿ ಬಂದಿದೆ ಎಂದು ಪಾಕಿಸ್ತಾನದ ಆರೋಗ್ಯ ಸಚಿವಾಲಯ ದೃಢಪಡಿಸಿತು.

ಇದನ್ನೂ ಓದಿ:ವಿಶ್ವದ ಮೊದಲ ಚಿಕೂನ್​ಗುನ್ಯಾ ಲಸಿಕೆಗೆ ಅಮೆರಿಕದ ಎಫ್​ಡಿಎ ಅನುಮೋದನೆ

ABOUT THE AUTHOR

...view details