ಜಾಗತಿಕವಾಗಿ 10 ಮಿಲಿಯನ್ಗಿಂತ ಹೆಚ್ಚಿನ ಜನರು ಮಿದುಳಿನ ಅಸ್ವಸ್ಥತೆಯಾದ ಪಾರ್ಕಿನ್ಸನ್‌ನಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಮತ್ತು ಅದರ ಲಕ್ಷಣಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವಿನ ಕೊರತೆ ಇದೆ. ಇಂದಿಗೂ ಕೂಡ ಅನೇಕರಿಗೆ ಪಾರ್ಕಿನ್ಸನ್ ಕಾಯಿಲೆ ಎಂದಾಗ ಅದರ ಕುರಿತ ಮಾಹಿತಿ ಬದಲಾಗಿ ಸಮಸ್ಯೆಗೆ ತುತ್ತಾದ ಮೊಹಮ್ಮದ್ ಅಲಿ ಅಥವಾ ರಾಬಿನ್ ವಿಲಿಯಂ ಹೆಸರು ನೆನಪಿಗೆ ಬರುತ್ತದೆ.
ಇದು ರೋಗದ ಸಂಕ್ಷಿಪ್ತ ವ್ಯಾಪ್ತಿ ಒದಗಿಸುತ್ತದೆ. ಜಾಗೃತಿ ಉಂಟುಮಾಡುತ್ತದೆ. ಈ ಸಮಸ್ಯೆ ಕುರಿತು ಸಾರ್ವಜನಿಕವಾಗಿ ಚರ್ಚಿಸಿದಾಗ ಇಂತಹ ಸಮಸ್ಯೆ ಅನುಭವಿಸುತ್ತಿರುವ ವ್ಯಕ್ತಿ ಇದನ್ನು ನಿಭಾಯಿಸಲು ಸಹಾಯ ಆಗುತ್ತದೆ. ಪಾರ್ಕಿನ್ಸನ್ ಕಾಯಿಲೆಯ ಸುತ್ತ ಜಗತ್ತನ್ನು ಸೆಳೆದು, ಈ ಕುರಿತು ಚರ್ಚೆಗೆ ಕಾರಣವಾದ ಕೆಲವು ವ್ಯಕ್ತಿಗಳು ಇದ್ದಾರೆ.
ಮೊಹಮ್ಮದ್ ಅಲಿ: ಬಾಕ್ಸಿಂಗ್ನಲ್ಲಿ ಚಾಂಪಿಯನ್ ಆಗಿ ಸಾಧನೆ ಮಾಡಿ ನಿವೃತ್ತಿ ಹೊಂದಬೇಕಿದ್ದ ಮೊಹಮ್ಮದ್ ಅಲಿ ನಿವೃತ್ತಿಗೆ ಮೂರು ವರ್ಷ ಇರುವ ಮುಂಚೆ ಪಾರ್ಕಿಸನ್ಗೆ ತುತ್ತಾದರು. ಈ ಸಮಸ್ಯೆಗೆ ತುತ್ತಾದ ಬಳಿಕ ತಮ್ಮ ಉಳಿದ ಜೀವನವನ್ನು ಅವರು 2012ರಲ್ಲಿ ಒಲಿಂಪಿಕ್ ಧ್ವಜ ಹಿಡಿದು ಪಾರ್ಕಿನ್ಸನ್ ಸಂಶೋಧನೆಗೆ ಹಣ ಸಂಗ್ರಹಿಸಲು ಮುಂದಾದರು. ಜಾಗತಿಕವಾಗಿ ಪಾರ್ಕಿನ್ಸನ್ ಕುರಿತು ಅರಿವು ಮೂಡಿಸಲು ಮುಂದಾದರು. ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲೆಂದು ಅಮೆರಿಕದ ಅರಿಜೋನಾದಲ್ಲಿ ದಿ ಮೊಹಮ್ಮದ್ ಅಲಿ ಪಾರ್ಕಿನ್ಸನ್ ಸೆಂಟರ್ ಸ್ಥಾಪಿಸಿದರು.
ರಾಬಿನ್ ವಿಲಿಯಂ: ನಟ ಮತ್ತು ಹಾಸ್ಯ ಕಲಾವಿದರಾಗಿದ್ದ ರಾಬಿನ್ 2013 ಆಗಸ್ಟ್ನಲ್ಲಿ ಅವರ ಸಾವಿಗೆ ಮೂರು ತಿಂಗಳ ಮುಂಚೆ ಈ ಸಮಸ್ಯೆಗೆ ಗುರಿಯಾದರು. ಅಕಾಡೆಮಿ ವಿಜೇತ ನಟನಿಗೆ ಕಾಣಿಸಿಕೊಂಡ ಈ ಸಮಸ್ಯೆ ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆ ಹುಟ್ಟು ಹಾಕಿತು.
ಜಾರ್ಜ್ ಡಬ್ಲ್ಯೂ ಬುಷ್: ಪಾರ್ಕಿನ್ಸನ್ ಸಮಸ್ಯೆಗೆ ಗುರಿಯಾಗಿ ದೀರ್ಘ ಕಾಲ ಬದುಕಿದ ಅಮೆರಿಕನ್ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್. 94ನೇ ವಯಸ್ಸಿನಲ್ಲಿ ಮೃತಪಟ್ಟ ಬುಷ್ ಎರಡು ಬಾರಿ ಉಪಾಧ್ಯಕ್ಷರಾಗಿ ಮತ್ತು ಅಮೆರಿಕದ 41ನೇ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಪಾರ್ಕಿಸನ್ ಸಮಸ್ಯೆಗೆ ಗುರಿಯಾದ ಬಳಿಕವೂ ಹೆಚ್ಚು ಕಾಲ ಭರವಸೆಯಲ್ಲಿ ಹೋರಾಟ ನಡೆಸಿದರು.