ಹೈದರಾಬಾದ್: ಗರ್ಭಿಣಿಯಾಗುವುದಕ್ಕೆ ಪೂರ್ವಭಾವಿಯಾಗಿ ಉತ್ತಮ ಆರೋಗ್ಯವನ್ನು ಹೊಂದಿರುವುದು ತಾಯಿ ಮತ್ತು ಮಗುವಿನ ಆರೋಗ್ಯ ಬೆಳವಣಿಗೆಗೆ ಅತ್ಯಗತ್ಯವಾಗಿದೆ. ಗರ್ಭಿಣಿಯಾಗುವುದಕ್ಕೆ ಮುಂಚೆ ಉತ್ತಮ ಆರೋಗ್ಯ ಹೊಂದಿರುವ ಬಗ್ಗೆ ಹೆಚ್ಚಿನ ಜನರಿಗೆ ಅರಿವಿರುವುದಿಲ್ಲ. ಇನ್ನೇನು ಈ ತಮ್ಮ ಪ್ಲಾನಿಂಗ್ ನಡೆಸುವ ಬಗ್ಗೆ ಈ ಕುರಿತು ಹೆಚ್ಚಿನ ಗಮನ ಹರಿಸುತ್ತಾರೆ. ಧೂಮಪಾನ, ಮದ್ಯಪಾನ ಸೇವನೆ ಪರಿಣಾಮ ಮಹಿಳಾ ಮತ್ತು ಪರುಷರ ಆರೋಗ್ಯದ ಜೊತೆ ಇದು ವೀರ್ಯ ಮತ್ತು ಎಗ್ಸೆಲ್ಗಳ ಮೇಲೆ ಪರಿಣಾಮ ಬೀರುತ್ತದೆ.
ಪೂರ್ವಭಾವಿಯಾಗಿ ಆರೋಗ್ಯ ಕಾಳಜಿವಹಿಸುವುದರಿಂದ ಭವಿಷ್ಯದಲ್ಲಿ ಸುರಕ್ಷಿತ ಗರ್ಭಧಾರಣೆಗೆ ಸಹಕಾರಿಯಾಗಿದೆ. ಇದರಿಂದ ಕಡಿಮೆ ತೂಕದ ಮಗು ಜನನ, ಗರ್ಭಪಾತ, ಅವಧಿಪೂರ್ವ ಜನನದಂತಹ ಅಪಾಯವನ್ನು ತಪ್ಪಿಸುತ್ತದೆ. ಆಸ್ಪತ್ರೆ ಮತ್ತು ಸಮುದಾಯದಲ್ಲಿ ಪೂರ್ವಭಾವಿ ಕಾಳಜಿ ವಹಿಸುವಿಕೆಯಿಂದ ಪ್ರೆಗ್ನೆನ್ಸಿ ಅಪಾಯವನ್ನು ತಪ್ಪಿಸುವುದರ ಜೊತೆ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸಹಕಾರಿಯಾಗಿದೆ
ಮಹಿಳೆಯರಲ್ಲಿನ ಕಡಿಮೆ ಪ್ರಾಮುಖ್ಯತೆ:ಹಲವು ದೇಶಗಳಲ್ಲಿ ಈ ಪೂರ್ವಭಾವಿ ಕಾಳಜಿ ವಿಚಾರದಲ್ಲಿ ಅನೇಕ ಮಹಿಳೆಯರು ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ. ತಾಯಿಯಾಗುವುದಕ್ಕೆ ಮುನ್ನ ಉತ್ತಮ ಆರೋಗ್ಯ ಹೊಂದುವುದು ಅತಿ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ ಎಂದು ಸ್ಪೇರ್ ರಿಸರ್ಚ್ ತಿಳಿಸಿದೆ.
ಮೊನಶ್ ಯುನಿವರ್ಸಿಟಿ ನಡೆಸಿದ ಈ ಸಂಶೋಧನೆಯಲ್ಲಿ ತಾಯಿಯಾಗುವುದಕ್ಕೆ ಪೂರ್ವಭಾವಿಯಾಗಿ ಶಿಕ್ಷಣ, ಪೂರಕ ಔಷಧಗಳು ಮತ್ತು ಆಹಾರದ ಮಾರ್ಪಾಡು ಸೇರಿದಂತೆ ಪ್ರಾಥಮಿಕ ಆರೈಕೆ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಆರೋಗ್ಯವನ್ನು ಸುಧಾರಿಸುವಲ್ಲಿ ಎಷ್ಟು ಪರಿಣಾಮಕಾರಿ ಎಂಬುದರ ಬಗ್ಗೆ ಅಧ್ಯಯನಕ್ಕೆ ಒಳಪಡಿಸಿ ಕಂಡುಕೊಳ್ಳಲಾಗಿದೆ. ಈ ಸಂಬಂದ 28 ಜನರ ಅಧ್ಯಯನ ನಡೆಸಿದ್ದು, ಇದರಲ್ಲಿ ಒಬ್ಬರು ಪುರುಷರನ್ನು ಸಂಶೋಧನೆಗೆ ಬಳಸಿಕೊಳ್ಳಲಾಗಿದೆ.
ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ: ಪಿಸಿಸಿ ಮಧ್ಯಸ್ಥಿತಿಯ ಎಲ್ಲ ಪ್ರಾಥಮಿಕ ಕಾಳಜಿ ಮಹಿಳೆಗೆ ನಿರ್ದೇಶಿತವಾಗಿದ್ದು, ಧೂಮಪಾನ ಮತ್ತು ಮಧ್ಯಪಾನಗಳು ಪುರುಷರ ಆರೋಗ್ಯ ಮತ್ತು ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಸಂತಾನೋತ್ಪತ್ತಿ ವಯಸ್ಸಿನ ಪುರುಷರ ಕಡೆಗೆ ನಿರ್ದೇಶಿತ ಪಿಸಿಸಿ ಗರ್ಭಧಾರಣೆಯ ಫಲಿತಾಂಶಗಳನ್ನು ಸುಧಾರಿಸಬಹುದು
ಅರಿವಿನ ಜಾಗ್ರತೆ: ಪೂರ್ವಭಾವಿ ಆರೋಗ್ಯ ಕಾಳಜಿ ವಹಿಸುವ ಬಗ್ಗೆ ಶಿಕ್ಷಣ, ವೈದ್ಯಕೀಯ ಪುರಕಗಳು, ಆರೋಗ್ಯದ ಶಿಕ್ಷಣದ ಕುರಿತ ಮಾಹಿತಿ ನೀಡುವುದು ಕೂಡ ಮುಂದಿನ ಅಪಾಯ ತಡೆಗಟ್ಟಲು ಸಹಾಯ ಮಾಡುತ್ತದೆ. ತರಬೇತಿ ಹೊಂದಿರುವ ಆರೋಗ್ಯೇತರ ವ್ಯಕ್ತಿಗಳು ಈ ಬಗ್ಗೆ ಅರಿವು ಮೂಡಿಸಿದರೂ ಪ್ರೆಗ್ನೆನ್ಸಿ ಪೂರ್ವಭಾವಿಯಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಕಂಡು ಬಂದಿದೆ.
ಡಯಟ್ನಲ್ಲಿ ಬದಲಾವಣೆ: ಡಯಟ್ ವಿಚಾರದಲ್ಲಿ ಈ ವಿಷಯವನ್ನು ಬದಲಾಯಿಸುವುದು ಕೂಡ ಇದು ಹೆಚ್ಚು ಪರಿಣಾಮಕಾರಿಯಾಗಿದೆ. ಆರೋಗ್ಯ ಕಾರ್ಯಕರ್ತರ ಸಲಹೆಯಂತೆ ಗರ್ಭಧಾರಣೆಗೆ ಮೂರು ತಿಂಗಳ ಮುಂದೆ ಹಸಿರು, ತರಕಾರಿ, ಹಣ್ಣ ಮತ್ತು ಹಾಲು ಸೇವಿಸಲು ಶುರುಮಾಡಿದಾಗ ಇದು ಮಗುವಿನ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ನಿಯಂತ್ರಣ ಗುಂಪಿಗೆ ಹೋಲಿಕೆ ಮಾಡಿದಾಗ ಈ ಡಯಟ್ನಲ್ಲಿ ಹಸ್ತಕ್ಷೇಪ ಮಾಡಿದ ಗುಂಪಿನ ಜನರಲ್ಲಿ ಅತಿಹೆಚ್ಚಿನ ಪೋಷಕಾಂಶ, ಶಕ್ತಿ ಮತ್ತು ಪ್ರೋಟಿನ್ ಮಟ್ಟ ಇರುವುದು ಕಂಡು ಬಂದಿದೆ
ಈ ಡಯಟ್ನಲ್ಲಿ ಗರ್ಭಾವಸ್ಥೆಯಲ್ಲಿ ನಿತ್ಯ 100ಗ್ರಾಂ ಮಶ್ರೂಮ್ ಅನ್ನು 20 ವಾರ ಸೇವಿಸುವುದರಿಂದ ಗರ್ಭಾವಸ್ಥೆ ಹೈಪರ್ಟೆಶ್ನನ್, ಗರ್ಭಾವಸ್ಥೆ ತೂಕ ಹೆಚ್ಚಳ, ಡಯಬೀಟಿಸ್ ಅನ್ನು ಕೂಡ ಕಡಿಮೆ ಮಾಡುತ್ತದೆ. ಮತ್ತೊಂದು ಆರ್ಟಿಕಲ್ ಅನುಸಾರ ಆರೋಗ್ಯೇತರ, ಪ್ರೋಫೆಷನಲ್ ತರಬೇತಿದಾರರು ಪೂರ್ಭಭಾವಿ ಅವಧಿಯವರೆಗೆ ಮ್ಯಾಕ್ರೋನ್ಯೂಟ್ರಿಯೆಂಟ್ ಪೂರಕ ಅಂಶ, ಐರನ್ಮ ಜಿಂಕ್, ವಿಟಮಿನ್ ಎ ಮತ್ತು ಬಿ12 ಅನ್ನು ನೀಡಿದರೂ ಇದು ಜನನದ ವೇಳೆ ಮಗುವಿನ ತೂಕ ಹೆಚ್ಚಳಕ್ಕೆ ಸಹಾಕಾರಿಯಾಗಿರುವುದಿಲ್ಲ
ಮಹಿಳೆಯರು ಮತ್ತು ಪರುಷರಿಗೆ ಅಗತ್ಯವಾಗಿರುವುದೇನು?: ಪೂರ್ವಭಾವಿ ಆರೋಗ್ಯ ವಿಚಾರ ಎಂಬುದು ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಅಗತ್ಯವಾಗಿದೆ. ಪೂರ್ವಭಾವಿಯಾಗಿ ಕಾಳಜಿ ನಿಮ್ಮ ಗರ್ಭಧಾರಣೆ ಮತ್ತೆ ಮುಂದು ಉತ್ತಮ ಆರೋಗ್ಯವನ್ನು ಹೊಂದಲು ಹೆಚ್ಚಿ ಸಹಕಾರಿಯಾಗುತ್ತದೆ ಎಂಬುದು ಅನೇಕ ಸಂಶೋಧನೆಯಿಂದ ಹೊರ ಬಂದಿದೆ. ಅದರಲ್ಲೂ ಪುರುಷರಿಗೆ ಹೆಚ್ಚು ಲಾಭಕಾರವಾಗಿದೆ. ಗರ್ಭಧಾರಣೆಯನ್ನು ಯೋಜಿಸುತ್ತಿರುವವರು ಪೂರ್ವಭಾವಿ ಆರೋಗ್ಯದ ಬಗ್ಗೆ ಪ್ರಾಮುಖ್ಯತೆಯ ನೀಡುವ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತದೆ.
ಇದನ್ನೂ ಓದಿ: ಮಗುವಿನ ಜೊತೆ ಪ್ರಯಾಣ ಮಾಡುವಿರಾ? ಈ 10 ವಸ್ತುಗಳನ್ನು ಮರೆಯದಿರಿ..