ಕರ್ನಾಟಕ

karnataka

ಟೈಪ್​ 1, ಟೈಪ್​ 2 ಮಧುಮೇಹಕ್ಕೆ ಕೋಶಾಧಾರಿತ ಚಿಕಿತ್ಸೆ: ಹೊಸ ಸಾಧನ ಅಭಿವೃದ್ಧಿ

By ETV Bharat Karnataka Team

Published : Oct 19, 2023, 3:53 PM IST

ಟೈಪ್​ 1 ಮತ್ತು ಟೈಪ್​ 2 ಮಧುಮೇಹಕ್ಕೆ ಕೋಶಾಧಾರಿತ ಚಿಕಿತ್ಸೆಯನ್ನು ಕಂಡುಹಿಡಿಯಲಾಗಿದೆ.

eye implant can be used to treat diabetes
eye implant can be used to treat diabetes

ವಾಷಿಂಗ್ಟನ್​ ಡಿಸಿ: ಮಧುಮೇಹ ಮತ್ತು ಇತರೆ ಸಮಸ್ಯೆಗಳಿಗೆ ಹೊಸ ಕೋಶಾಧಾರಿತ ಚಿಕಿತ್ಸೆ ನೀಡಲು ಸ್ವೀಡಿಶ್​ ಸಂಶೋಧಕರು ಕಣ್ಣಿಗೆ ಅಳವಡಿಸುವ ಮೈಕ್ರೋಸ್ಕೇಲ್​ ಸಾಧನ ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನದ ಮೂಲಕ ಮೆಧೋಜಿರಕ ಗ್ರಂಥಿ ಕೋಶದ ಇನ್ಸುಲಿನ್​ ಉತ್ಪಾದನೆಯನ್ನು ಎಲೆಕ್ಟ್ರಾನಿಕ್​ ಸೆನ್ಸಾರ್​ ಮೂಲಕ ಪತ್ತೆ ಮಾಡಲಾಗುತ್ತದೆ. 3ಡಿ ಸಾಧನವನ್ನು ಕೆಟಿಎಚ್​ ರಾಯಲ್​ ಇನ್ಸುಟಿಟ್ಯೂಟ್ ಆಫ್​ ಟೆಕ್ನಾಲಜಿ ಮತ್ತು ಕರೊಲಿನ್ಸಕಾ ಇನ್ಸುಟಿಟ್ಯೂಟ್ ಸಂಶೋಧಕರ ತಂಡ ಅಭಿವೃದ್ಧಿ ಮಾಡಿದೆ. ಜರ್ನಲ್​ ಅಡ್ವಾನ್ಸ್ಡ್​​ ಮೆಟಿರಿಯಲ್ಸ್​ನಲ್ಲಿ ಈ ಕುರಿತ ವರದಿ ಪ್ರಕಟಗೊಂಡಿದೆ. ಈ ಸಾಧನವು ಟೈಪ್​ 1 ಮತ್ತು ಟೈಪ್​ 2 ಮಧುಮೇಹಕ್ಕೆ ಕೋಶಾಧಾರಿತ ಚಿಕಿತ್ಸೆ ನೀಡುತ್ತದೆ.

ಕಣ್ಣು ಈ ತಂತ್ರಜ್ಞಾನಕ್ಕೆ ಸೂಕ್ತವಾಗಿದೆ. ಇದಕ್ಕೆ ಕಾರಣ, ಇಲ್ಲಿ ಸಾಧನ ಅಳವಡಿಸಿದಾಗ ಮೊದಲ ಹಂತದಲ್ಲಿ ಯಾವುದೇ ಇಮ್ಯೂನ್​ ಕೋಶಗಳು ಪ್ರತಿಕೂಲವಾಗಿ ಪ್ರತಿಕ್ರಿಯಿಸುವುದಿಲ್ಲ. ಇದು ದೃಷ್ಟಿಯ ಪಾರದರ್ಶಕತೆಗೆ ಅವಕಾಶ ಮಾಡಿ ಕೊಡುತ್ತದೆ. ಸಾಧನದ ಅಳವಡಿಕೆಯ ಬಳಿಕ ಮೈಕ್ರೋಸ್ಕೋಪಿಕ್​ ಅಧ್ಯಯನ ನಡೆಸಲಾಗುತ್ತದೆ ಎಂದು ಕೆಟಿಎಚ್​ನ ಹಿರಿಯ ಪ್ರಾಧ್ಯಾಪಕ ಅನ್ನಾ ಹೆರಾಲ್ಡ್​​ ತಿಳಿಸಿದರು.

ನಮ್ಮ ದೇಹದ ಏಕೈಕ ಕಿಟಕಿ ಎಂದರೆ ಅದು ಕಣ್ಣು. ಇದು ರೋಗ ನಿರೋಧಕ ವ್ಯವಸ್ಥೆ ಹೊಂದಿದೆ. ಈ ಸಾಧನವನ್ನು ವೆಡ್ಜ್​ ವಿನ್ಯಾಸ ಮಾಡಿದೆ. 240 ಮೈಕ್ರೋಮೀಟರ್​ ಉದ್ದವಿದೆ. ಐರಿಸ್​ ಮತ್ತು ಕಾರ್ನಿಯಾದ ಮುಂಭಾಗದ ಪ್ರದೇಶದ ನಡುವೆ ಯಾಂತ್ರೀಕೃತವಾಗಿ ಅಳವಡಿಕೆ ಮಾಡಲಾಗುತ್ತದೆ.

ಈ ವೈದ್ಯಕೀಯ ಸಾಧನವನ್ನು ಜೀವಂತ ಸಣ್ಣ ಅಂಗಾಂಶವಾಗಿ ವಿನ್ಯಾಸ ಮಾಡಲಾಗಿದ್ದು, ಪ್ಲಾಪ್​ ಡೋರ್​ ತಂತ್ರದ ಮೂಲಕ ಬಳಕೆಗೆ ಪರಿಚಯಿಸಲಾಗಿದೆ ಎಂದು ಕೆಟಿಎಚ್​ನ ಡಿವೈಸ್​ ಆಫ್​​ ಮೈಕ್ರೋ ಆ್ಯಂಡ್​ ನ್ಯಾನೋಸಿಸ್ಟಂನ ಪ್ರೊ.ವಔಟರ್​ ವಾನ್​ ಡೆಲ್​ ವಿವರಿಸಿದರು.

ಅಭಿವೃದ್ಧಿ ಹೊಂದಿದ ವೈದ್ಯಕೀಯ ಮೈಕ್ರೋ ಸಾಧನದತ್ತ ನಮ್ಮ ಮೊದಲ ಹೆಜ್ಜೆ. ಇದು ಸ್ಥಳೀಯವಾಗಿದ್ದು, ಕೋಶಾಧಾರಿತವಾಗಿ ನಿರ್ವಹಣೆ ಮಾಡಲಿದೆ. ಅರ್ಗನಾಯ್ಡ್​​ ರೀತಿಯಲ್ಲಿಯೇ ಸಣ್ಣ ಅರ್ಗನ್​ ಆಗಿ ಇದರ ಸ್ಥಳವನ್ನು ಗುರುತಿಸಿ ವಿನ್ಯಾಸ ಮಾಡಲಾಗಿದೆ. ಐಸ್ಲೆಟ್​ ಯಾವುದೇ ಮಿತಿ ಇಲ್ಲದೇ ಕೋಶಗಳಿಗೆ ಪೋಷಕಾಂಶ ಪೂರೈಕೆ ಮಾಡುತ್ತದೆ. ನಮ್ಮ ವಿನ್ಯಾಸವು ಭವಿಷ್ಯದ ಏಕೀಕರಣ ಮತ್ತು ಇಂಟಿಗ್ರೇಟೆಡ್ ಎಲೆಕ್ಟ್ರಾನಿಕ್ಸ್ ಅಥವಾ ಡ್ರಗ್ ಬಿಡುಗಡೆಯಂತಹ ಹೆಚ್ಚು ಸುಧಾರಿತ ಸಾಧನ ಕಾರ್ಯಗಳ ಬಳಕೆಯನ್ನು ಸಕ್ರಿಯಗೊಳಿಸುತ್ತದೆ. (ಎಎನ್​ಐ)

ಇದನ್ನೂ ಓದಿ: Cervical cancer: ಗರ್ಭಕಂಠ ಕ್ಯಾನ್ಸರ್​​ಗೆ ತುತ್ತಾದ ಮಿಸ್​ ವರ್ಲ್ಡ್​​ ಅಭ್ಯರ್ಥಿ.. ಮಹಿಳೆಯರನ್ನು ಕಾಡುವ ಈ ಕ್ಯಾನ್ಸರ್​ ಬಗ್ಗೆ ಅರಿವು ಅಗತ್ಯ

ABOUT THE AUTHOR

...view details