ಕರ್ನಾಟಕ

karnataka

ETV Bharat / sukhibhava

ಹೃದಯರಕ್ತನಾಳ ಸಂಬಂಧಿತ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣ ಏನು?.. ಸಂಶೋಧನೆಗಳು ಹೇಳುವುದೇನು?

ಅಧಿಕ ಶಾಖದಿಂದಾಗಿ ಹೃದಯರಕ್ತನಾಳ ಸಂಬಂಧಿತ ಸಾವಿನ ಸಂಖ್ಯೆ ಹೆಚ್ಚಳವಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಹೃದಯರಕ್ತನಾಳ ಸಂಬಂಧಿತ ಕಾಯಿಲೆ
ಹೃದಯರಕ್ತನಾಳ ಸಂಬಂಧಿತ ಕಾಯಿಲೆ

By ETV Bharat Karnataka Team

Published : Oct 31, 2023, 6:33 AM IST

ನ್ಯೂಯಾರ್ಕ್​ : ತೀವ್ರ ಶಾಖದಿಂದ ಹೃದಯರಕ್ತನಾಳ ಸಂಬಂಧಿತ ಸಾವುಗಳು 2036 ಮತ್ತು 2065 ರ ನಡುವೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಅಧ್ಯಯನವೊಂದು ಹೇಳಿಕೊಂಡಿದೆ.

ಪ್ರಕಟವಾದ ಅಧ್ಯಯನದಲ್ಲಿ ಕೆಲಸ ನಿರ್ವಹಿಸಿರುವ ಸಂಶೋಧಕರ ಪ್ರಕಾರ, 65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಶಾಖದ ಪರಿಣಾಮ ಬೀರಬಹುದು ಎಂದು ಊಹಿಸಿದ್ದಾರೆ. ಏಕೆಂದರೆ ಈ ವಯಸ್ಸಿನ ಅನೇಕರು ಈಗಾಗಲೇ ಆರೋಗ್ಯ ಸಮಸ್ಯೆಯ ಕಾರಣ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯುತ್ತಿದ್ದಾರೆ. ಅಲ್ಲದೇ ಸಾಕಷ್ಟು ಜನರು ತಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುವ ಸಾಮಾಜಿಕ - ಆರ್ಥಿಕ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಹವಾನಿಯಂತ್ರಣವನ್ನು( ಎಸಿಯಲ್ಲಿ) ಹೊಂದಿರದಿರುವುದು ಹಾಗೂ ಶಾಖವನ್ನು ಹೀರುವ ಪ್ರದೇಶದಲ್ಲಿ ವಾಸಿಸುವವರ ( ಉಷ್ಣದ್ವೀಪ) ಮೇಲೂ ಹೃದಯ ರಕ್ತನಾಳ ಸಮಸ್ಯೆ ಪರಿಣಾಮ ಬೀರಬಹುದು ಎಂದಿದ್ದಾರೆ.

ತೀವ್ರವಾದ ಶಾಖವು ಪ್ರಸ್ತುತ ಹೃದಯರಕ್ತನಾಳ ಸಂಬಂಧಿತ ಸಾವುಗಳಲ್ಲಿ 1 ಪ್ರತಿಶತಕ್ಕಿಂತ ಕಡಿಮೆಯಿದ್ದರೂ, ಮಾಡೆಲಿಂಗ್ ವಿಶ್ಲೇಷಣೆಯು ಬೇಸಿಗೆಯ ದಿನಗಳಲ್ಲಿ ಕನಿಷ್ಠ 90 ಡಿಗ್ರಿಗಳಷ್ಟು ನಿರೀಕ್ಷಿತ ಏರಿಕೆಯಿಂದಾಗಿ ಇದು ಬದಲಾಗುತ್ತದೆ ಎಂದು ಊಹಿಸಿದೆ. ಈ ಶಾಖ ಸೂಚ್ಯಂಕವು ಆರ್ದ್ರತೆಯೊಂದಿಗೆ ತಾಪಮಾನವು ಹೇಗೆ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ಸೂಚಿಸುತ್ತದೆ.

ಹೆಚ್ಚುತ್ತಿರುವ ತಾಪಮಾನಕ್ಕೆ ಹೊಂದಿಕೊಳ್ಳುವ ದೇಹ:ಹೆಚ್ಚಿನ ಜನರು ತೀವ್ರವಾದ ಶಾಖಕ್ಕೆ ಹೊಂದಿಕೊಳ್ಳುತ್ತಾರೆ. ಏಕೆಂದರೆ ದೇಹವು ತನ್ನನ್ನು ತಾನೇ ತಂಪುಗೊಳಿಸುವ ಮಾರ್ಗಗಳನ್ನು ಕಂಡುಕೊಳ್ಳುತ್ತದೆ. ಉದಾಹರಣೆಗೆ ಬೆವರಿನ ಮೂಲಕ ದೇಹ ತಂಪಾಗುತ್ತದೆ. ಆದಾಗ್ಯೂ ಮಧುಮೇಹ ಮತ್ತು ಹೃದ್ರೋಗ ಸೇರಿದಂತೆ ಬೇರೆ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಜನರು ವಾತಾವರಣದ ತಾಪಮಾನಕ್ಕೆ ವಿಭಿನ್ನ ಪ್ರತಿಕ್ರಿಯೆಗಳನ್ನು ಹೊಂದಿರುತ್ತಾರೆ ಮತ್ತು ಇವರು ಹೃದಯಾಘಾತ ಅಥವಾ ಪಾರ್ಶ್ವವಾಯು ಎದುರಿಸಬೇಕಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

"ಮುಂದಿನ ಹಲವಾರು ದಶಕಗಳಲ್ಲಿ ತೀವ್ರತರವಾದ ಶಾಖದಿಂದ ಆರೋಗ್ಯದ ಸಮಸ್ಯೆಗಳು ಏರಿಕೆಯಾಗುತ್ತಲೇ ಸಾಗುತ್ತವೆ‘‘ ಎಂದು ಫಿಲಿಡೆಲ್ಫಿಯಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವೈದ್ಯಕೀಯ ಸಹಾಯಕ ಪ್ರಾಧ್ಯಾಪಕ, ಹೃದ್ರೋಗ ತಜ್ಞ ಸಮೀದ್ ಎ ಖತಾನಾ ಅವರು ಹೇಳಿದ್ದಾರೆ.

" ಜನರ ಮೇಲೆ ತೀವ್ರವಾದ ಶಾಖದ ಪ್ರಭಾವದಿಂದ ಈಗಾಗಲೇ ಅಸ್ತಿತ್ವದಲ್ಲಿರುವ ಆರೋಗ್ಯ ಸಮಸ್ಯೆಗಳು ಇನ್ನಷ್ಟು ಉಲ್ಬಣಗೊಳಿಸಬಹುದು" ಎಂದು ಖತಾನಾ ಎಚ್ಚರಿಸಿದ್ದಾರೆ. ಈ ಅಧ್ಯಯನಕ್ಕಾಗಿ ಸಂಶೋಧಕರು 2008-2019 ರ ಮೇ ಮತ್ತು ಸೆಪ್ಟೆಂಬರ್ ನಡುವೆ 48 ರಾಜ್ಯಗಳಿಂದ ಡೇಟಾ ಮೌಲ್ಯಮಾಪನ ಮಾಡಿದ್ದಾರೆ. ಆ ಸಮಯದಲ್ಲಿ ಹೃದಯರಕ್ತನಾಳದ ಕಾಯಿಲೆಗೆ ಸಂಬಂಧಿಸಿದಂತೆ ಸುಮಾರು 12 ದಶಲಕ್ಷಕ್ಕೂ ಹೆಚ್ಚು ಸಾವುಗಳು ಸಂಭವಿಸಿದವು ಎಂಬುದನ್ನು ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ.

ಪರಿಸರ ಮಾದರಿಯ ಅಂದಾಜುಗಳನ್ನು ಬಳಸಿಕೊಂಡು, ಪ್ರತಿ ಬೇಸಿಗೆಯಲ್ಲಿ ಶಾಖದ ಸೂಚ್ಯಂಕವು ಸುಮಾರು 54 ಬಾರಿ ಏರಿದೆ ಎಂದು ಅವರು ಕಂಡುಕೊಂಡಿದ್ದಾರೆ. ಸಂಶೋಧಕರು ಪ್ರತಿ ಬೇಸಿಗೆಯ ಅವಧಿಯಲ್ಲಿ ಸಂಭವಿಸುವ ತೀವ್ರ ತಾಪಮಾನದಿಂದ ರಾಷ್ಟ್ರೀಯವಾಗಿ ಸರಾಸರಿ 1,651( ವಾರ್ಷಿಕ) ಹೃದಯರಕ್ತನಾಳದ ಸಾವುಗಳು ಸಂಭವಿಸಿವೆ ಎಂದು ತಿಳಿಸಿದ್ದಾರೆ. ಇದಲ್ಲದೇ ಪರಿಸರ ಮತ್ತು ಜನಸಂಖ್ಯೆಯ ಬದಲಾವಣೆಗಳನ್ನು ಮುನ್ಸೂಚಿಸಲು ಮಾಡೆಲಿಂಗ್ ವಿಶ್ಲೇಷಣೆಗಳನ್ನು ಬಳಸಿಕೊಂಡ ಸಂಶೋಧಕರು, 2036-2065ಕ್ಕೆ ಪ್ರತಿ ಬೇಸಿಗೆಯಲ್ಲಿ ಸುಮಾರು 71 ರಿಂದ 80 ದಿನಗಳು ತೀವ್ರ ತಾಪಮಾನ ಅಥವಾ ಅದಕ್ಕಿಂತಲೂ ಹೆಚ್ಚು ಬಿಸಿಯಾಗುತ್ತವೆ ಎಂದು ಅಂದಾಜಿಸಿದ್ದಾರೆ.

ಈ ಬದಲಾವಣೆಗಳ ಆಧಾರದ ಮೇಲೆ ವಾರ್ಷಿಕ ಶಾಖ-ಸಂಬಂಧಿತ ಹೃದಯರಕ್ತನಾಳದ ಸಾವಿನ ಸಂಖ್ಯೆಯು ಸಾಮಾನ್ಯ ಜನಸಂಖ್ಯೆಗಿಂತ 2.6 ಪಟ್ಟು (1,651 ರಿಂದ 4,320 ಕ್ಕೆ) ಹೆಚ್ಚಾಗುತ್ತದೆ. ಈ ಅಂದಾಜು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಆಧರಿಸಿದೆ ಎಂದಿದ್ದಾರೆ. ಇದು ಸೂರ್ಯನ ಶಾಖವನ್ನು ಹಿಡಿದಿಟ್ಟುಕೊಳ್ಳುತ್ತದೆ. ಅಲ್ಲದೇ, ಶಾಖದ ಹೊರಸೂಸುವಿಕೆಯು ವಾತಾವರಣದಲ್ಲಿ ಗಣನೀಯವಾಗಿ ಏರಿದರೆ, ಸಾವುಗಳು ಮೂರು ಪಟ್ಟು (5,491) ಹೆಚ್ಚಳವಾಗಬಹುದು ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ :ಧೂಮಪಾನ, ಹೆಚ್ಚಿನ ಒತ್ತಡ, ಬಿಡುವಿಲ್ಲದ ನಿರಂತರ ಕೆಲಸವೇ ಪಾರ್ಶ್ವವಾಯುವಿಗೆ ಕಾರಣವಂತೆ.. ಇದಕ್ಕಿಲ್ಲವೇ ಪರಿಹಾರ?

ABOUT THE AUTHOR

...view details