ಕರ್ನಾಟಕ

karnataka

ETV Bharat / sukhibhava

ಹವಾಮಾನ ಬದಲಾವಣೆ.. ಸೊಳ್ಳೆಗಳಿಂದ ಹರಡುವ ರೋಗಗಳ ಅಪಾಯದ ಬಗ್ಗೆ ತಜ್ಞರ ಎಚ್ಚರಿಕೆ

ಬೀಸಿಗೆಕಾಲ ಸೊಳ್ಳೆಗಳಿಂದ ಹರಡುವ ರೋಗಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಬಹಿರಂಗಪಡಿಸಿದ್ದಾರೆ.

mosquito borne disease
ಸೊಳ್ಳೆಗಳಿಂದ ಹರಡುವ ರೋಗ

By

Published : May 1, 2023, 9:16 PM IST

ನವದೆಹಲಿ : ಬೀಸಿಗೆ ಕಾಲದ ಪರಿಣಾಮವನ್ನು ಈಗಾಗಲೇ ದೇಶದ ಎದರಿಸುತ್ತಿದ್ದು, ಬಿಸಿಲು ಹೆಚ್ಚುತ್ತಿರುವ ಹಿನ್ನೆಲೆ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಇದರಿಂದ ಸೊಳ್ಳೆ ಸಂತಾನೋತ್ಪತ್ತಿ ಹೆಚ್ಚುತ್ತಿದ್ದು, ಇವುಗಳಿಂದ ಹರಡುವ ಸಾಂಕ್ರಾಮಿಕ ಕಾಯಿಲೆಗಳು ಅಪಾಯ ಎಂದು ಎಂದು ತಜ್ಞರು ಎಚ್ಚರಿಸಿದ್ದಾರೆ. ಈಗಾಗಲೇ ಸೊಳ್ಳೆಗಳಿಂದ ಹರಡುವ ರೋಗಗಳು ಆಫ್ರಿಕಾ, ಆಗ್ನೇಯ ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಪ್ರಭಾವ ಬೀರಿವೆ ಎಂದು ಎಂದು ರೆಕಿಟ್ ಬೆನ್ಕಿಸರ್‌ನಲ್ಲಿನ ಗ್ಲೋಬಲ್ ಪೆಸ್ಟ್ ಕಂಟ್ರೋಲ್ ಇನ್ನೋವೇಶನ್ ಆರ್​ಡಿ ನಿರ್ದೇಶಕ ಅವಿಜಿತ್ ದಾಸ್ ಹೇಳಿದ್ದಾರೆ.

ಇದನ್ನೂ ಓದಿ :ಬೇಸಿಗೆಯಲ್ಲಿ ತಂಪು ಮಾತ್ರವಲ್ಲ, ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ ಈ ಬಗೆ ಬಗೆಯ ಲಸ್ಸಿಗಳು

ಈ ಹಿಂದೆ ಯುರೋಪಿನಲ್ಲಿ ಇಲ್ಲದ ಸೊಳ್ಳೆಗಳ ಸಂಖ್ಯೆ ಇದೀಗ ಹೆಚ್ಚಾಗಿದ್ದು, ಇದರಂತೆಯೇ ಭಾರತದಲ್ಲಿಯೂ ಈ ಹಿಂದೆ ಸೊಳ್ಳೆಗಳು ಹೆಚ್ಚಾಗುವ ಅವಧಿ ಐದು ತಿಂಗಳ ಕಾಲ ಇದ್ದರೆ, ಮುಂದಿನ ಹತ್ತು ವರ್ಷಗಳಲ್ಲಿ ಈ ಅವಧಿ ಆರು ತಿಂಗಳಿಗೆ ಅಥವಾ ಏಳು ತಿಂಗಳಿಗೆ ಹೆಚ್ಚಾಗಬಹುದು ಎಂದು ದಾಸ್ ತಿಳಿಸಿದ್ದಾರೆ. ಪ್ರಸ್ತುತ ಪುರಾವೆಗಳ ಆಧಾರದ ಮೇಲೆ ಸೊಳ್ಳೆಗಳು ತಮ್ಮ ಜೀವಿತಾವಧಿಯನ್ನು ವಿಸ್ತರಿಸುವುದನ್ನು ಮುಂದುವರೆಸುವುದರ ಬಗ್ಗೆ ಸಾಕಷ್ಟು ಸಂಶೋಧನೆಗಳಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ :ಕ್ಲಿಷ್ಟಕರ ಆಸನಗಳ ಬದಲಾಗಿ ಈ ಸರಳ ಅಭ್ಯಾಸ ರೂಢಿಸಿಕೊಳ್ಳಿ: ಈ ವ್ಯಾಯಾಮಗಳಿಂದ ಇದೇ ಹೆಚ್ಚಿನ ಲಾಭ

ಕಳೆದ ವರ್ಷ ಎಕ್ಸ್‌ಫ್ಲೋರೇಶನ್ ಇನ್ ಲ್ಯಾಬೋರೇಟರಿ ಅನಿಮಲ್ ಸೈನ್ಸಸ್ ನಿಯತಕಾಲಿಕದಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧದಲ್ಲಿ, ಜಾಗತಿಕ ಮಟ್ಟದಲ್ಲಿ ತಾಪಮಾನದಲ್ಲಿನ ಹೆಚ್ಚಳ, ಮಳೆಯ ಪ್ರಮಾಣ, ಸಮುದ್ರ ಮಟ್ಟದ ಎತ್ತರ, ಮಳೆ, ಗಾಳಿ ಮತ್ತು ಸೂರ್ಯನ ಬೆಳಕಿನಂತಹ ಎಲ್ಲ ಹವಾಮಾನ ಅಂಶಗಳು ಮುಖ್ಯವೆಂದು ಗಮನಿಸಲಾಗಿದೆ. ವಿಶ್ವ ಸೊಳ್ಳೆ ಕಾರ್ಯಕ್ರಮದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಮೌಲ್ಯಮಾಪನದ ನಿರ್ದೇಶಕರಾದ ಡಾ ಕೇಟಿ ಆಂಡರ್ಸ್ ಪ್ರಕಾರ, ಹವಾಮಾನ ಬದಲಾವಣೆಯು ಸೊಳ್ಳೆಯಿಂದ ಹರಡುವ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವಿವರಿಸಿದ್ದಾರೆ.

ಉದಾಹರಣೆಗೆ : ಬರಗಾಲದಲ್ಲಿ ನೀರಿನ ಅಭಾವ ಎದರಿಸುವ ಸಂದರ್ಭಗಳಲ್ಲಿ ನೀರನ್ನು ಹೆಚ್ಚು ಹೆಚ್ಚು ಮನೆಯಲ್ಲಿ ಸಂಗ್ರಹಿಸುತ್ತೇವೆ. ಈ ಒಂದು ಮೂಲ ಕೂಡ ಸೊಳ್ಳೆ ಸಂತಾನೋತ್ಪತ್ತಿ ತಾಣವಾಗಿ ಸೊಳ್ಳೆಗಳ ಸಂಖ್ಯೆ ಮತ್ತು ರೋಗದ ಅಪಾಯ ಹೆಚ್ಚಾಗಲು ಕಾರಣವಾಗುತ್ತದೆ.

ಇನ್ನು, ಯುರೋಪ್‌ನಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳಾದ ಮಲೇರಿಯಾ ಪ್ರಕರಣಗಳು ಶೇಕಡಾ 62% ರಷ್ಟು ಮತ್ತು ಡೆಂಗ್ಯೂ, ಝಿಕಾ ಮತ್ತು ಚಿಕೂನ್‌ಗುನ್ಯಾ ಪ್ರಕರಣಗಳು ಶೇಕಡಾ 700% ರಷ್ಟು ಹೆಚ್ಚಾಗಿವೆ. ಈ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುಲು ಹಾಗು ಇವುಗಳಿಂದ ರಕ್ಷಣೆಗಾಗಿ ಸಾರ್ವಜನಿಕ ಆರೋಗ್ಯ ಅಗತ್ಯವನ್ನು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ :ಒತ್ತಡದ ಜೀವನದಲ್ಲಿ ಕಾರ್ಟಿಸೋಲ್​ ಪಾತ್ರ ಏನು?: ಒತ್ತಡ ನಿವಾರಿಸುವುದು ಹೇಗೆ?

ABOUT THE AUTHOR

...view details