ಕರ್ನಾಟಕ

karnataka

ETV Bharat / sukhibhava

ಮಗುವಿನ ನಡವಳಿಕೆಯಲ್ಲಾಗುವ ಬದಲಾವಣೆ ಗಮನಿಸಿ: ಪೋಷಕರಿಗೆ ತಜ್ಞರ ಕಿವಿಮಾತು

ಮಗು ಶಾಲೆಯಿಂದ ಮನೆಗೆ ಮರಳಿದಾಕ್ಷಣ ಅದರ ಜೊತೆ ಕುಳಿತು ಮಾತನಾಡುವ ಅಭ್ಯಾಸ ರೂಢಿಸಿಕೊಳ್ಳುವುದು ಅವಶ್ಯಕ ಎಂದು ಪೋಷಕರಿಗೆ ತಜ್ಞರು ಸಲಹೆ ನೀಡಿದ್ದಾರೆ.

By ETV Bharat Karnataka Team

Published : Oct 12, 2023, 5:38 PM IST

experts says Parents observe your childs behaviour build communication with them
experts says Parents observe your childs behaviour build communication with them

ಬೆಂಗಳೂರು: ಲಕ್ನೋದಲ್ಲಿ 12 ವರ್ಷದ ಬಾಲಕಿಯನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಆಟೋ ಚಾಲಕ​ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆಯ ಬಗ್ಗೆ ಸಮಾಜದಲ್ಲಿ ಮತ್ತೊಮ್ಮೆ ಆತಂಕ ಮೂಡಿದೆ. ಅಪ್ರಾಪ್ತ ಮಗು ವಾರಗಳ ಕಾಲ ಈ ದೌರ್ಜನ್ಯಕ್ಕೊಳಗಾಗಿದ್ದು, ಘಟನೆ ತಕ್ಷಣ ಬೆಳಕಿಗೆ ಬಂದಿರಲಿಲ್ಲ. ಈ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು, ವೈದ್ಯರು ಸೇರಿದಂತೆ ತಜ್ಞರು ಮಕ್ಕಳ ನಡವಳಿಕೆಯಲ್ಲಾಗುವ ಬದಲಾವಣೆಗಳನ್ನು ಪೋಷಕರು ಹತ್ತಿರದಿಂದ ಗಮನಿಸುವಂತೆ ಮನವಿ ಮಾಡಿದ್ದಾರೆ.

ಕಿಂಗ್​ ಜಾರ್ಜ್​​ ಮೆಡಿಕಲ್​ ಯುನಿವರ್ಸಿಟಿಯ ಮನೋವಿಜ್ಞಾನದ ಹಿರಿಯ ವೈದ್ಯ ಡಾ.ಆದರ್ಶ್​​ ತ್ರಿಪಾಠಿ ಮಾತನಾಡಿದ್ದು, ಮಗುವಿಗೆ ಪ್ರತಿ ಎರಡು ತಿಂಗಳಿಗೊಮ್ಮೆ ಗುಡ್​ ಟಚ್​ ಮತ್ತು ಬ್ಯಾಡ್​ ಟಚ್​ (ಒಳ್ಳೆಯ ಮತ್ತು ಕೆಟ್ಟ ಆಂಗಿಕ ಚಲನೆ) ಬಗ್ಗೆ ತಿಳಿಸುವಂತೆ ಸೂಚಿಸಿದ್ದಾರೆ. ಇದರಿಂದ ಪ್ರಮುಖವಾಗಿ ಎರಡು ಲಾಭವಿದೆ. ಪದೇ ಪದೇ ಇದನ್ನು ಮಗುವಿಗೆ ಕೇಳುವುದರಿಂದ ಅದು ನೆನಪಿನಲ್ಲಿಳಿದು, ಸದಾ ಎಚ್ಚರದಿಂದ ಇರುತ್ತದೆ. ಎರಡನೇ ಅಂಶವೇನೆಂದರೆ ಈ ಬಗ್ಗೆ ಅವರು ನಿಮ್ಮ ಬಳಿಕ ಮುಕ್ತವಾಗಿ ಮಾತನಾಡಲು ಸಹಾಯ ಮಾಡುತ್ತದೆ. ಮಕ್ಕಳು ತಮ್ಮ ಮಾತುಗಳನ್ನು ಯಾವುದೇ ಅಂಜಿಕೆ ಇಲ್ಲದೇ ನಿರ್ಭೀತಿಯಿಂದ ಮಾಹಿತಿ ಹಂಚಿಕೊಳ್ಳುತ್ತಾರೆ.

ಈ ವಿಷಯಗಳನ್ನು ಚರ್ಚೆ ಮಾಡುವುದರಿಂದ ಮಗುವಿನ ಮೇಲೆ ಯಾವುದೇ ರೀತಿ ಅಹಿತಕರ ಘಟನೆಗಳಾದಾಗ ಹಂಚಿಕೊಳ್ಳುವ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಮೂಡುತ್ತದೆ. ಮಗು ಶಾಲೆ/ ಕಾಲೇಜಿನಿಂದ ಮರಳಿದ ತಕ್ಷಣ ನಡೆಯುವ ಇಂಥ ಮಾತುಕತೆಯ ಮೂಲಕ ಮನೆಯಿಂದ ಹೊರಗೆ ಏನಾದರೂ ಘಟನೆ ನಡೆಯಿತೇ ಎಂದು ತಿಳಿಯಲು ನೆರವಾಗುತ್ತದೆ.

ವ್ಯತ್ಯಾಸ ಗುರುತಿಸಿ: ಮಕ್ಕಳು ಶಾಲೆಯಿಂದ ಮರಳಿದ ತಕ್ಷಣ ನಿಮ್ಮ ಮಕ್ಕಳ ಜೊತೆಗೆ ಮಾತುಕತೆ ನಡೆಸುವ ಅಭ್ಯಾಸವನ್ನು ಅಭಿವೃದ್ಧಿಪಡಿಸಬೇಕು. ಮಕ್ಕಳಿಗೆ ಶಾಲೆಯಲ್ಲಿ ಏನಾಯಿತು?. ಹೋಗುವಾಗ ಮತ್ತು ಬರುವಾಗ ನಡೆದ ಘಟನೆಗಳೇನು ಎಂಬ ಕುರಿತು ಸಣ್ಣ ಮಾತುಕತೆ ನಡೆಸಬೇಕು. ಈ ವೇಳೆ ಮಕ್ಕಳ ಮಾತುಕತೆಯಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಿದೆಯೇ ಎಂಬುದನ್ನು ಗಮನಿಸಿ ಎನ್ನುತ್ತಾರೆ ಡಾ.ದೇವಶಿಶ್​ ಶುಕ್ಲಾ.

ಅಷ್ಟೇ ಅಲ್ಲದೇ, ಮಗು ಮನೆಗೆ ಬರುವ ಸಮಯದಲ್ಲಿನ ಬದಲಾವಣೆ ಬಗ್ಗೆ ಲಕ್ಷ್ಯ ನೀಡುವುದು ಅತೀ ಅಗತ್ಯ. ಸಾಮಾನ್ಯವಾಗಿ ಮನೆಗೆ ಬರುವ ಸಮಯಕ್ಕಿಂತ ತಡವಾಗಿ ಬಂದಾಗ ಈ ಬಗ್ಗೆ ಪೋಷಕರು ಎಚ್ಚರವಹಿಸುವುದು ಅಗತ್ಯ ಎನ್ನುತ್ತಾರೆ ಡಾ.ಶೈಲ ಕುಮಾರ್​. (ಐಎಎನ್​ಎಸ್​)

ಇದನ್ನೂ ಓದಿ: ಶೇ 80ರಷ್ಟು ಭಾರತೀಯರು ಮಾನಸಿಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುವುದಿಲ್ಲ: ವೈದ್ಯರು

ABOUT THE AUTHOR

...view details