ನವದೆಹಲಿ: ಭಾರತದಲ್ಲಿ ಮುಂಬರುವ ವರ್ಷಗಳಲ್ಲಿ ಸಾಂಕ್ರಾಮಿಕವಲ್ಲದ ರೋಗಗಳು ಮತ್ತು ಬಹುಔಷಧ ನಿರೋಧಕ ಬ್ಯಾಕ್ಟೀರಿಯಾಗಳು ಏರಿಕೆಯಾಗಬಹುದು ಎಂದು ಆರೋಗ್ಯ ತಜ್ಞರು ಅಂದಾಜಿಸಿದ್ದಾರೆ.
ದೇಶದಲ್ಲಿ ಮುಂದಿನ ದಿನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥೂಲಕಾಯ, ಅಧಿಕ ರಕ್ತದೊತ್ತಡ, ಹೃದಯಾಘಾತದಂತಹ ರೋಗಗಳ ಸಂಖ್ಯೆ ಹೆಚ್ಚಲಿರುವುದನ್ನು ಕಾಣಬಹುದು ಎಂದು ಮುಂಬೈನ ಸರ್ ಎಚ್ಎನ್ ರಿಲಯನ್ಸ್ ಫೌಂಡೆಷನ್ನ ಇಂಟರ್ನಲ್ ಮೆಡಿಸಿನ್ ನಿರ್ದೇಶಕ ಡಾ.ಪ್ರೀತಿ ಚಾಬ್ರಿಯಾ ತಿಳಿಸಿದ್ದಾರೆ.
ಭಾರತೀಯರ ಆಹಾರದಲ್ಲಿ ಅಧಿಕ ಮಟ್ಟದ ಕಾರ್ಬೋಹೈಡ್ರೇಟ್ ಇರುವುದರಿಂದ ಮಧುಮೇಹದ ಪ್ರಮುಖ ಆರೋಗ್ಯ ಸವಾಲಾಗಿ ಮುಂದುವರೆಯಲಿದೆ. 2030ರಲ್ಲಿ ನಾವು ಜನಸಂಖ್ಯೆಯಲ್ಲಿ ಅಧಿಕ ಪ್ರತಿಶತದಲ್ಲಿ ಸ್ಥೂಲಕಾಯ ಮತ್ತು ಅಧಿಕ ತೂಕ ಸಮಸ್ಯೆ ಹೊಂದಿರುವವರನ್ನು ಕಾಣಬಹುದು. ಇದರ ಹೊತರಾಗಿ 2030ರ ಹೊತ್ತಿಗೆ ಅತಿಯಾಗಿ ಕಾಡುವ ಮತ್ತೊಂದು ಆರೋಗ್ಯ ಸಮಸ್ಯೆ ಎಂದರೆ ಬಹು ಔಷಧ ನಿರೋಧಕ ಬ್ಯಾಕ್ಟೀರಿಯಾಗಳ ಏರಿಕೆ ಎಂದು ವೈದ್ಯರು ಊಹಿಸಿದ್ದಾರೆ.
ಔಷಧ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆ್ಯಂಟಿ ಬಯೋಟಿಕ್ಗಳನ್ನು ಹೊರತರದ ಹೊರತಾಗಿ ಭಾರತ ಔಷಧ ನಿರೋಧಕ ಬ್ಯಾಕ್ಟೀರಿಯಾದ ಬಹುಸೋಂಕು ಸಮಸ್ಯೆ ಅನುಭವಿಸುತ್ತದೆ. ಇದಕ್ಕೆ ಕಾರಣ ಆ್ಯಂಟಿಬಯೋಟಿಕ್ಗಳ ವಿವೇಚನೆ ಇಲ್ಲದ ಬಳಕೆ. ಈ ಬಳಕೆಯನ್ನು ಕಡಿಮೆ ಮಾಡದ ಹೊರತಾಗಿ ಈ ಬ್ಯಾಕ್ಟೀರಿಯಾಗಳ ಸೋಂಕು ಬೆಳೆಯುವುದು ಸಮಸ್ಯೆಯಾಗಲಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಕ್ಷಯ ಮತ್ತು ಎಚ್ಐವಿಯಂತರ ರೋಗಗಳು ಉತ್ತಮ ನಿಯಂತ್ರಣ ಮತ್ತು ಕಡಿಮೆ ಸಂಖ್ಯೆಯಲ್ಲಿ ಆರೋಗ್ಯ ವೆಚ್ಚದ ಮೇಲೆ ಕಡಿಮೆ ಪರಿಣಾಮ ಉಂಟುಮಾಡಲಿದೆ ಎಂದು ಅಂದಾಜಿಸಲಾಗಿದೆ. ಇವುಗಳನ್ನು ಉತ್ತಮವಾಗಿ ನಿಯಂತ್ರಿಸಲಾಗುತ್ತಿದೆ. ಹೆಚ್ಚಿನ ನಿಗಾ ಇಡಲಾಗಿದೆ. ಈ ಹಿನ್ನೆಲೆಯಲ್ಲಿ ಇದು ಕಡಿಮೆ ಕಾಳಜಿ ವಿಷಯವಾಗಿದೆ.
ಇವೇ ಎರಡು ಸವಾಲು: ಭಾರತದ ಭವಿಷ್ಯದ ಆರೋಗ್ಯ ವ್ಯವಸ್ಥೆಯಲ್ಲಿ 2030ರ ಹೊತ್ತಿಗೆ ಎರಡು ಸವಾಲುಗಳಿರಲಿದೆ. ಅದರಲ್ಲಿ ಒಂದು ಸಾಂಕ್ರಾಮಿಕವಲ್ಲದ ರೋಗಗಳು (ಎನ್ಸಿಡಿ) ಅಂದರೆ ಮಧುಮೇಹ, ಹೃದಯ ರೋಗ ಮತ್ತು ಜೀವನಶೈಲಿ ಬದಲಾವಣೆ ಮತ್ತು ನಗರೀಕರಣ. ಇನ್ನು, 2030ರ ಹೊತ್ತಿಗೆ ಮಧುಮೇಹದ ಪ್ರಕರಣಗಳು 62ಮಿಲಿಯನ್ನಿಂದ 79 ಮಿಲಿಯನ್ ಜನರನ್ನು ಕಾಡಲಿದೆ.
ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸಾಕ್ಷಿಯಾಗಿ ಸಾಂಕ್ರಾಮಿಕ ರೋಗಗಳ ಬೆದರಿಕೆ ಮುಂದುವರಿಯಲಿದೆ. ಹೊಸ ಸಾಂಕ್ರಾಮಿಕ ರೋಗಗಳು, ಆ್ಯಂಟಿಬಯೋಟಿಕ್ ರೆಸಿಸ್ಟಂಟ್ ಮತ್ತು ಸಾಮಾಜಿಕ ಅಸಮಾನತೆಗಳು ಪ್ರಮುಖವಾಗಲಿದೆ ಎಂದು ಕೊಚ್ಚಿಯ ಅಮೃತ ಹಾಸ್ಪಿಟಲ್ನ ಅಸೋಸಿಯೇಟ್ ಪ್ರೊ.ಡಾ.ಡಿಪು ಟಿ.ಎಸ್. ತಿಳಿಸಿದ್ದಾರೆ.
ಇದರ ನಿರ್ವಹಣೆಗೆ ಇರುವ ಭಾರತದ ಪ್ರಮುಖ ಎರಡು ಮಾರ್ಗ ಎಂದರೆ ಮೂಲ ಸೌಕರ್ಯವನ್ನು ಬಲಪಡಿಸುವುದು ಮತ್ತು ಆರೋಗ್ಯಯುತ ಜೀವನಶೈಲಿ ಉತ್ತೇಜನವಾಗಿದೆ. ಇದರ ಜೊತೆಗೆ ಎನ್ಸಿಡಿ ಮತ್ತು ಸೋಂಕಿನ ರೋಗದ ಕಾಳಜಿಗೆ ಅಗತ್ಯ ಆರೈಕೆ ಖಚಿತಪಡಿಸುವುದಾಗಿದೆ. ಲಸಿಕೆ ಹೊರತಾಗಿ ಇಮ್ಯೂನೋಥೆರಪಿಯಂತಹ ಹೊಸ ಚಿಕಿತ್ಸಾ ವಿಧಾನಗಳು ಭಾರತದ ಗಮನ ಸೆಳೆದಿದೆ. ಈ ವರ್ಷ ಅಂದರೆ, 2024ರಲ್ಲಿ ಅದರ ಬಳಕೆಯನ್ನು ವ್ಯಾಪಕವಾಗಿ ಅಳವಡಿಸುವ ನಿರೀಕ್ಷೆ ಇದೆ. ಇದು ರೋಗಿಗೆ ಹೊಸ ಭರವಸೆ ನೀಡುತ್ತದೆ ಎಂದು ದೆಹಲಿ-ಎನ್ಸಿಆರ್ನ ರಾಜೀವ್ ಗಾಂಧಿ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಿಇಒ ಡಿಎಸ್ ನೇಗಿ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ:ಕೋವಿಡ್ ಬಳಿಕ ಹೃದಯಾಘಾತ ಪ್ರಕರಣ ಹೆಚ್ಚಳ; ಜಪಾನ್ ಅಧ್ಯಯನ