ನವದೆಹಲಿ: ತಿನ್ನದೇ ಇರುವ ಹಾಗೂ ಊಟ ಮಾಡಿದ ಮೇಲೆ ಮಿಕ್ಕಿ ಆಹಾರವನ್ನು ಹೊರ ಹಾಕುವ ಆಹಾರ ಎಂದೇ ವ್ಯಾಖ್ಯಾನಿಸಲಾಗುತ್ತದೆ. ಎಸೆಯಲ್ಪಟ್ಟ ಆಹಾರ ಅಥವಾ ಅದರ ಬಳಕೆಯ ದಿನಾಂಕ ಮೀರಿದ ಆಹಾರವನ್ನು ನಿರುಪಯುಕ್ತ ಎಂದು ಪರಿಗಣಿಸಲ್ಪಡುತ್ತದೆ.
ಆಹಾರ ಉತ್ಪಾದನೆ ಮತ್ತು ಸಂಸ್ಕರಣೆಯ ಸಮಯದಲ್ಲಿ ವಿವಿಧ ರೀತಿಯಲ್ಲಿ ಆಹಾರ ತ್ಯಾಜ್ಯ ಉತ್ಪತ್ತಿ ಆಗುತ್ತದೆ. ವಿಶ್ವಾದ್ಯಂತ ಉತ್ಪಾದನೆಯಾಗುವ ಆಹಾರದ ಮೂರನೇ ಒಂದು ಭಾಗವು ಪ್ರತಿ ವರ್ಷ ವ್ಯರ್ಥವಾಗುತ್ತಿದೆ ಎಂದು ವರದಿಯಾಗಿದೆ. ಹೀಗೆ ವ್ಯರ್ಥವಾಗಿ ಆಹಾರವನ್ನು ಕಡೆಸುವುದನ್ನು ಕಡಿಮೆ ಮಾಡಲು ಆಹಾರ ತಜ್ಞ ನೀಲಮ್ ಚೌಹಾಣ್ ಹಲವು ಟಿಪ್ಸ್ಗಳನ್ನು ನೀಡಿದ್ದಾರೆ.
ಯೋಜನೆ ಮತ್ತು ಖರೀದಿ ಹಾಗೂ ಊಟ: ಸೇವಿಸಬೇಕಾದ ಆಹಾರಗಳ ಆಧಾರದ ಮೇಲೆ ವಾರಕ್ಕೆ ನಿಮ್ಮ ಊಟ ಮತ್ತು ಚಟುವಟಿಕೆಗಳನ್ನು ಹೀಗಿರಬೇಕು ಎಂಬ ಯೋಜನೆ ರೂಪಿಸಿ. ಎರಡು ಹೊತ್ತಿನ ಊಟ ತಯಾರಿಸುವ ಮೂಲಕ ಮಿತವ್ಯಯ ಸಾಧಿಸಿ, ಹೆಚ್ಚು ಮಾಡಿ ಕೆಡಿಸದೇ ಅದನ್ನೇ ಉಪಯೋಗಿಸಿ. ತಣ್ಣನೆಯ ಹಾಗೂ ಮಿಕ್ಕಿದ ಆಹಾರ ಬಳಸುವುದನ್ನು ತಪ್ಪಿಸಿ ಆದಷ್ಟು ತಾಜಾ ಆಹಾರವನ್ನೇ ಬಳಸಿ.
ನಿಮ್ಮ ಫ್ರೀಜರ್ ಮತ್ತು ರೆಫ್ರಿಜರೇಟರ್ ಅನ್ನು ಶಾಪಿಂಗ್‌ಗೆ ಹೋಗುವ ಮುನ್ನ ಒಮ್ಮೆ ಪರಿಶೀಲಿಸಿ. ಈ ಮೂಲಕ ಬುದ್ಧಿವಂತಿಕೆಯಿಂದ ಶಾಪಿಂಗ್ ಮಾಡಿ. ನೀವು ಶಾಪಿಂಗ್‌ಗೆ ಹೋಗುವ ಮೊದಲು ಪಟ್ಟಿಯನ್ನು ಮಾಡಿ. ಅಗತ್ಯವಿರುವುದನ್ನು ಮಾತ್ರ ಖರೀದಿ ಮಾಡಿ ತನ್ನಿ. ನಿಮಗೆ ಅಗತ್ಯವಿಲ್ಲದ ಆಹಾರ ಸಾಮಗ್ರಿಗಳಿಂದ ದೂರ ಇರಿ. ಜಾಹೀರಾತು ನೋಡಿ ಪ್ರಚಾರ ಸಾಮಗ್ರಿಗಳಿಂದ ಆಮಿಷಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಿ.
ಆಹಾರವನ್ನು ತಾಜಾ ಇಟ್ಟುಕೊಳ್ಳಿ: ನಿಮ್ಮ ರೆಫ್ರಿಜರೇಟರ್ ಅನ್ನು 5 ಡಿಗ್ರಿ ಅಥವಾ ಅದಕ್ಕಿಂತ ಕಡಿಮೆ ಉಷ್ಟಾಂಶದೊಂದಿಗೆ ಇರಿಸಿಕೊಳ್ಳಿ. ಪಾರದರ್ಶಕ ಕಂಟೇನರ್‌ಗಳನ್ನು ಮಿಕ್ಕಿ ಆಹಾರವನ್ನು ಕೆಡದಂತೆ ಇಡಲು ಬಳಸಿ. ಹಳೆಯ ಉತ್ಪನ್ನಗಳನ್ನು ಅವು ಕೆಡುವ ಮೊದಲು ಬಳಸಿ. ಹೊಸ ಆಹಾರಗಳನ್ನು ರೆಫ್ರಿಜರೇಟರ್‌ನ ಮುಂಭಾಗದಲ್ಲಿ ಮತ್ತು ಹಳೆಯ ಆಹಾರಗಳನ್ನು ಹಿಂಭಾಗದಲ್ಲಿ ಇರಿಸಿ.