ಕರ್ನಾಟಕ

karnataka

ETV Bharat / sukhibhava

ಶಿಶುವಿನೊಂದಿಗೆ ಸಂಬಂಧ; ಹೊಸ ತಾಯಂದಿರಿಗೆ ಬೇಕಿದೆ ಅರಿವು - ತಾಯಂದಿರು ಮಗುವಿನೊಂದಿಗೆ ಬಲವಾದ ಸಂಬಂಧ

ಅನೇಕ ವೇಳೆ ತಾಯಂದರಲ್ಲಿ ಕಾಡುವ ಪ್ರಸವಪೂರ್ವ ಖಿನ್ನತೆಯಿಂದ ಅವರಲ್ಲಿ ಮಗುವಿನೊಂದಿಗೆ ಬಾಂಧವ್ಯ ಅಭಿವೃದ್ಧಿಗೆ ಅಡ್ಡಿ ಉಂಟಾಗುತ್ತದೆ.

Expectant mothers need education on bonding with their babies
Expectant mothers need education on bonding with their babies

By ETV Bharat Karnataka Team

Published : Oct 11, 2023, 6:07 PM IST

ನೆದರ್ಲ್ಯಾಂಡ್​​: ಮಗುವಿಗೆ ಜನ್ಮ ನೀಡಿದ ಬಳಿಕ ಮೂರನೇ ಒಂದರಷ್ಟು ತಾಯಂದಿರು ಮಗುವಿನೊಂದಿಗೆ ಗಾಢವಾದ ಸಂಬಂಧ ಹೊಂದುವಲ್ಲಿ ವಿಫಲರಾಗುತ್ತಾರೆ. ಇದು ಮಗು ಮತ್ತು ತಾಯಿ ಇಬ್ಬರಿಗೆ ಗಂಭೀರವಾದ ಭಾವನಾತ್ಮಕ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಹೊಸ ಸಂಶೋಧನೆ ತಿಳಿಸಿದೆ. ಪ್ರಸವದ ಬಳಿಕ ಖಿನ್ನತೆ ಅಪಾಯ ಹೊಂದಿರುವ ತಾಯಂದಿರುವ ತಮ್ಮ ಭಾವನೆಗಳ ಭಾವನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಗಮನಿಸಲು ಮತ್ತು ನಿಯಂತ್ರಿಸುವ ಅವಶ್ಯಕತೆಯಿದೆ ಎಂದು ಅಧ್ಯಯನ ತೋರಿಸಿದೆ.

ಬರ್ಸೆಲೊನಾನದಲ್ಲಿ ಎಸಿಎನ್​ಪಿ ಕಾಂಗ್ರೆಸ್​ನಲ್ಲಿ ಈ ಅಧ್ಯಯನವನ್ನು ಸಂಶೋಧಕರು ಮಂಡಿಸಿದ್ದಾರೆ. ಡಾ.ಅನ್ನೇ ಬಜೆರ್ಟುಪ್​ ಹೇಳುವಂತೆ, ಜನರು ಯಾವುದೇ ಸಂದರ್ಭದಲ್ಲಿ ಸಕಾರಾತ್ಮಕ ಅಥವಾ ನಕಾರಾತ್ಮಕವಾಗಿ ನೋಡುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಈ ಹಿಂದಿನ ಅಧ್ಯಯನದಲ್ಲಿ, ಹೊಸ ತಾಯಂದಿರುವ ತಮ್ಮ ಮಗುವಿನ ಭಾವನೆಗಳಿಗೆ ಬಗ್ಗೆ ನಕಾರಾತ್ಮಕ ಭಾವನೆಯ ಸಂಬಂಧ ಹೊಂದಿದ್ದಾರೆ.

ಹೊಸ ತಾಯಂದಿರಲ್ಲಿ ಭಾವನೆ ಗ್ರಹಿಕೆ: ಕೆಲವು ಪ್ರಕರಣದಲ್ಲಿ ಹೊಸ ತಾಯಂದಿರು ಮಗುವನ್ನು ನೋಡಿ ಅವರು ತಾವು ಈ ಬಗ್ಗೆ ಬೇಸರ ಹೊಂದಿದ್ದಾಗಿ ಅಥವಾ ಬೇಸರ ಹೊಂದಿರುವುದಾಗಿ ತಪ್ಪಾಗಿ ಯೋಚಿಸುತ್ತಾರೆ. ಆದರೆ, ವಾಸ್ತವದಲ್ಲಿ ಈ ರೀತಿ ಆಗಿರುವುದಿಲ್ಲ. ಈ ಪರಿಸ್ಥಿತಿಗಳನ್ನು ಭಾವನಾತ್ಮಕವಾಗಿ ನಿರ್ವಹಣೆ ಮಾಡಲು ತಾಯಂದಿರಿಗೆ ಸಾಧ್ಯವಾಗುವುದಿಲ್ಲ. ಈ ಸಂಬಂಧ ನಾವು ನಾಕಾರಾತ್ಮಕ ಯೋಚನೆಯನ್ನು ತಪ್ಪಿಸಲು ಸಹಾಯ ಮಾಡಲು ಅವರಿಗೆ ತರಬೇತಿ ನೀಡಬಹುದೇ ಎಂದು ನೋಡಿದ್ದೇವೆ.

ಈ ಅಧ್ಯಯನವನ್ನು ಪೀರ್​ ರಿವ್ಯೂಡ್​​ ಜರ್ನಲ್​​ ನ್ಯೂರೋಸೈನ್ಸ್​​ ಅಪ್ಲೈಡ್​2ನಲ್ಲಿ ಪ್ರಕಟಿಸಲಾಗಿದೆ. ಈ ಪರಿಕಲ್ಪನೆ ಸಾಕ್ಷಿ ಆಧಾರಿತ ವಿಷಯದ ಅಧ್ಯಯನದಲ್ಲಿ ಕೋಪನ್​ ಹೇಗನ್​ನಲ್ಲಿ ಆಸ್ಪತ್ರೆಗೆ ದಾಖಲಾದ 45 ತಾಯಂದಿರನ್ನು ಅಧ್ಯಯನದ ಭಾಗಿಯಾಗಿಸಲಾಗಿದೆ. ಇದರಲ್ಲಿ 23 ಮಂದಿ ಪ್ರಸವ ಪೂರ್ವ ಖಿನ್ನತೆಗೆ ಒಳಗಾಗಿದ್ದು, ತಮ್ಮ ಮಗುವಿನೊಂದಿಗೆ ಸಂಬಂಧವನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ. ಇನ್ನುಳಿದ 22 ಮಂದಿಯಲ್ಲಿ ಯಾವುದೇ ಖಿನ್ನತೆ ಇತಿಹಾಸವನ್ನು ಹೊಂದಿಲ್ಲ. ಅಧ್ಯಯನದ ಆರಂಭದಲ್ಲಿ ಮಗುವಿನ ಭಾವನೆಗಳನ್ನು ನೋಡಿ ಹೇಗೆ ಪ್ರತಿಕ್ರಿಯಿಸಿದರು ಎಂದು ವಿಶ್ಲೇಷಣೆ ನಡೆಸಲಾಗಿದೆ.

ತರಬೇತಿ ಅವಶ್ಯ: ಅಧಿಕ ಅಪಾಯದಲ್ಲಿರುವ ಮಹಿಳೆಯರನ್ನು ಹಲವು ಕಂಪ್ಯೂಟರ್​ ಆಧಾರಿತ ತರಬೇತಿ ಸೆಷನ್​ಗೆ ಒಳಗಾಗಿಸಿದ್ದು, ಅವರಲ್ಲಿ ಭಾವನೆಗಳಿಗೆ ಪ್ರತಿಕ್ರಿಯಿಸಲು ಸಹಾಯ ಮಾಡಿದೆ. ಇದಾದ ಎರಡು ವಾರದ ಬಳಿಕ ಮತ್ತೊಮ್ಮೆ ಮೌಲ್ಯಮಾಪನ ನಡೆಸಲಾಗಿದೆ. ನಮ್ಮ ತರಬೇತಿಯು ಭಾಗಿದಾರರಲ್ಲಿ ಮಗುವಿನ ಮೌಕಿಕ ಭಾವನೆಗಳನ್ನು ಗ್ರಹಿಸುವಲ್ಲಿ ಗಮನಾರ್ಹವಾದ ಬದಲಾವಣೆ ಹೊಂದಿದ್ದಾರೆ. ಉದಾಹರಣೆಗೆ ಈ ಹಿಂದೆ ಅವರು ಮಗು ಅಳುವ ಮುಖದ ಭಾವನೆ ನೋಡಿದಾಗ ನಕಾರಾತ್ಮಕತೆ ಹೊಂದುತ್ತಿದ್ದರು. ತರಬೇತಿ ಬಳಿಕ ಅವರಲ್ಲಿ ಸಕಾರಾತ್ಮಕತೆ ಕಂಡಿದೆ. ನಮ್ಮ ದರ ಮಾಪನದಲ್ಲಿ ಇದು ಸಕಾರಾತ್ಮಕ ಬದಲಾವಣೆ ಗುರುತಿಸಿದ್ದಾರೆ. ಮಗುವಿನ ಸಂತೋಷದ ಭಾವನೆಗಳನ್ನು ಗುರುತಿಸುವಲ್ಲಿ ಸುಧಾರಣೆ ಕಂಡಿದೆ, ಮಗು ಜನಿಸಿದ ಆರು ತಿಂಗಳ ಬಳಿಕ ಖಿನ್ನತೆ ಲಕ್ಷಣ ಕಡಿಮೆ ಆಗಿದೆ. (ಎಎನ್​ಐ)

ಇದನ್ನೂ ಓದಿ: ತಾಯಿಗೆ ಮಾತ್ರವಲ್ಲ.. ತಂದೆಗೂ ಕಾಡುತ್ತಾ ಪ್ರಸವಪೂರ್ವ ಖಿನ್ನತೆ?

ABOUT THE AUTHOR

...view details