ಕೆಲಸದ ಹೊರೆ, ಆನ್‌ಲೈನ್ ತರಗತಿಗಳಿಂದ ಪ್ರತಿಯೊಬ್ಬರೂ ಒತ್ತಡದಲ್ಲಿದ್ದಾರೆ. ಹೀಗಾಗಿ ನಮ್ಮ ಕಣ್ಣುಗಳು ಆರೋಗ್ಯಕರ ಮತ್ತು ಸುಂದರವಾಗಿರಲು ಕೆಲವು ವ್ಯಾಯಾಮಗಳು ಇಲ್ಲಿವೆ, ನೀವೂ ಇವುಗಳನ್ನು ನಿಮ್ಮ ಕಚೇರಿ ಕುರ್ಚಿಯ ಮೇಲೆ ಕುಳಿತುಕೊಂಡು ಸಹ ಮಾಡಬಹುದು. ಒತ್ತಡದಿಂದ ಮತ್ತು ಅತಿಯಾಗಿ ಕೆಲಸ ಮಾಡುತ್ತಿರುವ ಕಣ್ಣುಗಳಿಗೆ ವಿಶ್ರಾಂತಿ ಒದಗಿಸುವ ವ್ಯಾಯಾಮಗಳು ಇಲ್ಲಿವೆ.
ಹತ್ತಿರದ ಮತ್ತು ದೂರದ ವಸ್ತುಗಳ ಮೇಲೆ ನೋಟವನ್ನು ಕೇಂದ್ರೀಕರಿಸಿ:
- ಆರಾಮದಾಯಕವಾದ ಕುರ್ಚಿ ಅಥವಾ ಸ್ಥಳದಲ್ಲಿ ಕುಳಿತುಕೊಳ್ಳಿ ಮತ್ತು ನಿಮ್ಮ ಹೆಬ್ಬೆರಳನ್ನು ನಿಮ್ಮ ಕಣ್ಣುಗಳಿಂದ 10 ಇಂಚು ದೂರದಲ್ಲಿ ಇರಿಸಿ.
- ನಂತರ ನಿಮ್ಮ ಹೆಬ್ಬೆರಳಿನ ಮೇಲೆ 10 ಸೆಕೆಂಡುಗಳ ಕಾಲ ನಿಮ್ಮ ಗಮನ ಕೇದ್ರೀಕರಿಸಿ.
- ಈಗ 15 ಸೆಕೆಂಡುಗಳ ಕಾಲ ದೂರದಲ್ಲಿ ಕಾಣುವ ವಸ್ತುವಿನ ಮೇಲೆ ಗಮನಹರಿಸಿ
- ನಂತರ ಮತ್ತೆ ನಿಮ್ಮ ಕಣ್ಣುಗಳ ದೃಷ್ಟಿಯನ್ನು ನಿಮ್ಮ ಹೆಬ್ಬೆರಳಿನ ಮೇಲೆ ಹರಿಸಿ
- ಈ ವ್ಯಾಯಾಮವನ್ನು ದಿನದಲ್ಲಿ ಕನಿಷ್ಠ ಐದು ಬಾರಿ ಮಾಡಿ.
20-20 ನಿಯಮ:
ಕಂಪ್ಯೂಟರ್ ಅಥವಾ ಮೊಬೈಲ್ನಲ್ಲಿನ ನಿರಂತರ ಕೆಲಸದಿಂದಾಗಿ ನಿಮ್ಮ ಕಣ್ಣುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಈ ವ್ಯಾಯಾಮವು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಈ ವ್ಯಾಯಾಮಕ್ಕಾಗಿ, ಪ್ರತಿ 20 ನಿಮಿಷಗಳ ನಂತರ ನಿಮ್ಮ ಕಂಪ್ಯೂಟರ್ ಪರದೆಯಿಂದ 20 ಸೆಕೆಂಡುಗಳ ದೂರದಲ್ಲಿರುವ ಯಾವುದೇ ವಸ್ತುವನ್ನು ನೋಡಬೇಕು. ಪ್ರತೀ 20 ನಿಮಿಷಕ್ಕೊಮ್ಮೆ ಸ್ಕ್ರೀನ್ ಮೇಲಿಂದ ನಿಮ್ಮ ದೃಷ್ಟಿಯನ್ನು ಬೇರೆಡೆ ತಿರುಗಿಸಬೇಕು. ಇದಕ್ಕಾಗಿ ನೀವು ನಿಮ್ಮ ಮೊಬೈಲ್ ಅಥವಾ ಟೈಮರ್ ಅನ್ನು ಸೆಟ್ ಮಾಡಿಕೊಳ್ಳಬಹುದು.
ಈ ವ್ಯಾಯಾಮವು ಕಣ್ಣಿನ ಸ್ನಾಯುಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ ಮತ್ತು ಕಣ್ಣಿನ ಒತ್ತಡವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.
Infinity ಚಿಹ್ನೆಯ ರೀತಿ ಕಣ್ಣನ್ನು ತಿರುಗಿಸಿ:
ಒಂದು ಸ್ಥಳದಲ್ಲಿ ಕುಳಿತುಕೊಳ್ಳಿ ನಿಮ್ಮ ಎಡ ಹೆಬ್ಬೆರಳನ್ನು ನಿಮ್ಮ ಮುಖದಿಂದ ದೂರವಿರಿಸಿ ಮತ್ತು ಅದರ ಮೇಲೆ ನೋಟ ಕೇಂದ್ರೀಕರಿಸಿ.ಈಗ ನಿಮ್ಮ ಹೆಬ್ಬೆರಳನ್ನು ಅನಂತ ಚಿಹ್ನೆಯ( infinity symbol) ರೂಪದಲ್ಲಿ ಸರಿಸಿ, ಈ ಚಲನೆಯ ಸಮಯದಲ್ಲಿ ನಿಮ್ಮ ಕಣ್ಣುಗಳ ದೃಷ್ಟಿಯನ್ನು ನಿಮ್ಮ ಹೆಬ್ಬೆರಳಿನ ಮೇಲೆ ಕೇಂದ್ರೀಕರಿಸಬೇಕು.ಮತ್ತು ಹೆಬ್ಬೆರಳನ್ನ ನೋಡುತ್ತಾ ನಿಮ್ಮ ಕಣ್ಣುಗಳಿಂದ ಅನಂತ ಚಿಹ್ನೆಯನ್ನು ರೂಪಿಸಬೇಕು. ಈ ವ್ಯಾಯಾಮವನ್ನು 5 ಬಾರಿ ಪ್ರದಕ್ಷಿಣಾಕಾರವಾಗಿ( clockwise direction ) ಮತ್ತು 5 ಬಾರಿ ವಿರೋಧ ಪ್ರದಕ್ಷಿಣಾಕಾರವಾಗಿ( anti-clockwise direction) ಮಾಡಿ.