ಸೈಕ್ಲಿಂಗ್, ವಾಕಿಂಗ್, ಕ್ಲೀನಿಂಗ್ ಮತ್ತು ಕ್ರೀಡೆಗಳಂತಹ ಸಾಮಾನ್ಯ ವ್ಯಾಯಾಮಗಳು ಪಾರ್ಕಿನ್ಸನ್ ರೋಗವನ್ನು ತಡೆಯುವ ಸಾಧ್ಯತೆ ಹೊಂದಿರುತ್ತದೆ ಎಂದು ಅಮೆರಿಕನ್ ಅಕಾಡೆಮಿ ಆಫ್ ನ್ಯೂರಾಲಾಜಿ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನದಲ್ಲಿ ಭಾಗಿಯಾದ ಮಹಿಳಾ ಭಾಗಿದಾರರು ವ್ಯಾಯಾಮ ಮಾಡದವರಿಗೆ ಹೋಲಿಸಿದರೆ, ವ್ಯಾಯಾಮ ಮಾಡಿದವರು ಶೇ 25ರಷ್ಟು ಕಡಿಮೆ ಪಾರ್ಕಿನ್ಸನ್ ರೋಗ ಹೊಂದಿದ್ದಾರೆ. ವ್ಯಾಯಾಮವೂ ಪಾರ್ಕಿನ್ಸನ್ ರೋಗ ಅಭಿವೃದ್ಧಿ ಅಪಾಯ ಕಡಿಮೆ ಮಾಡುತ್ತದೆ ಎಂದು ತೋರಿಸಿದೆ.
ವ್ಯಾಯಾಮವೂ ಕಡಿಮೆ ವೆಚ್ಚದಲ್ಲಿ ದೇಹದ ಆರೋಗ್ಯವನ್ನು ಸುಧಾರಣೆ ಮಾಡುತ್ತದೆ. ಪಾರ್ಕಿನ್ಸನ್ ರೋಗಕ್ಕೆ ಯಾವುದೇ ಉಪಶಮನ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಪಾರ್ಕಿನ್ಸನ್ ಅಪಾಯ ಕಡಿಮೆ ಮಾಡುವಲ್ಲಿ ವ್ಯಾಯಾಮ ಸಂಬಂಧ ಹೊಂದಿದೆಯೇ ಎಂಬುದನ್ನು ಅಧ್ಯಯನ ನಡೆಸಲಾಗಿದೆ ಎಂದು ಲೇಖಕ ಅಲೆಕ್ಸಿಸ್ ಎಲಬಸ್ ತಿಳಿಸಿದ್ದಾರೆ. ತಮ್ಮ ಅಧ್ಯಯನ ಪಾರ್ಕಿನ್ಸನ್ ರೋಗ ನಿಯಂತ್ರಣಕ್ಕೆ ಮಧ್ಯಸ್ಥಿಕೆ ವಹಿಸುವಲ್ಲಿ ಫಲಿತಾಂಶ ಸಾಕ್ಷಿ ನೀಡಿದೆ. ಈ ಅಧ್ಯಯನಕ್ಕೆ 95,354 ಮಹಿಳಾ ಭಾಗಿದಾರರನ್ನು ಒಳಪಡಿಸಲಾಗಿದೆ. 49ವಯಸ್ಸಿನ ಸಾರಸಾರಿ ಮಹಿಳಾ ಶಿಕ್ಷಕರರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಇವರಿಗೆ ಪಾರ್ಕಿನ್ಸನ್ ರೋಗದ ಯಾವುದೇ ಲಕ್ಷಣಗಳು ಇರಲಿಲ್ಲ.
ಅಧ್ಯಯನಕಾರರು 6 ಪ್ರಶ್ನಾವಳಿಗಳು ಮತ್ತು ದೈಹಿಕ ಚಟುವಟಿಕೆಗಳೊಂದಿಗೆ ಸಂಶೋಧನೆ ನಡೆಸಿದ್ದಾರೆ. ಅವರು ಎಷ್ಟು ದೂರ ನಡೆದರು, ದಿನಕ್ಕೆ ಎಷ್ಟು ಮೆಟ್ಟಿಲು ಹತ್ತಿದರು, ಗೃಹ ಚಟುವಟಿಕೆಯಲ್ಲಿ ಎಷ್ಟು ಕಾಲ ಕಳೆದರು ಮತ್ತು ಗಾರ್ಡನಿಂಗ್, ಕ್ರೀಡೆಯಂತಹ ಸುಧಾರಿತ ಚಟುವಟಿಕೆಯಲ್ಲಿ ಭಾಗಿಯಾದರು ಎಂದು ಅಧ್ಯಯನ ನಡೆಸಲಾಗಿದೆ. 24 ಸಾವಿರ ಮಂದಿಯ ನಾಲ್ಕು ಗುಂಪುಗಳನ್ನು ಮಾಡಿ ಅವರನ್ನು ಅಧ್ಯಯನ ನಡೆಸಲಾಗಿದೆ.