ದೀರ್ಘಾವಧಿಯ ಕೋವಿಡ್ನಿಂದ ಉಂಟಾದ ಖಿನ್ನತೆ ಮತ್ತು ಮಧುಮೇಹಕ್ಕೆ ನಿಯಮಿತ ವ್ಯಾಯಾಮ ಪರಿಣಾಮಕಾರಿ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. 'ಎಕ್ಸಸೈಸ್ ಆ್ಯಂಡ್ ಸ್ಪೋರ್ಟ್ ಸೈನ್ಸ್ ರಿವೀವ್' ಎಂಬ ಜರ್ನಲ್ನಲ್ಲಿ ಈ ವರದಿ ಪ್ರಕಟಿಸಲಾಗಿದೆ.
ದೀರ್ಘ ಕಾಲದ ಕೋವಿಡ್ ಖಿನ್ನತೆಯನ್ನು ಉಂಟುಮಾಡುತ್ತದೆ ಎಂದು ತಿಳಿದುಬಂದಿದೆ. ಜನರು ಮಧುಮೇಹ ಕೀಟೋಆಸಿಡೋಸಿಸ್ನ್ನು, ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ಆದರೆ, ನಿಯಮಿತ ವ್ಯಾಯಾಮದಿಂದ ಮಧುಮೇಹಕ್ಕೆ ಕಾರಣವಾಗುವ ಗ್ಲೂಕೋಸ್ ಹೆಚ್ಚಳವನ್ನು ನಿಯಂತ್ರಿಸುತ್ತದೆ ಹಾಗೇ ಖಿನ್ನತೆಯ ಬೆಳವಣಿಗೆ ಆಗದಂತೆ ನೋಡಿಕೊಳ್ಳುತ್ತದೆ ಎಂದು ಪೆನ್ನಿಂಗ್ಟನ್ ಬಯೋಮೆಡಿಕಲ್ ಸಂಶೋಧನಾ ಕೇಂದ್ರದ ಸಂಶೋಧನಾ ವಿಜ್ಞಾನಿ ಕ್ಯಾಂಡಿಡಾ ರೆಬೆಲ್ಲೊ ಹೇಳಿದರು.
ಎಷ್ಟು ಜನರು ದೀರ್ಘ ಕಾಲದ ಕೋವಿಡ್ನಿಂದ ಬಳಲುತ್ತಿದ್ದಾರೆ ಎಂಬುದು ಅಸ್ಪಷ್ಟ. ಅಂದಾಜು 15 ಪ್ರತಿಶತದಿಂದ 80 ಪ್ರತಿಶತದಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ. ದೀರ್ಘ ಕಾಲದ ಕೋವಿಡ್ನಿಂದ ಮೆದುಳಿನಲ್ಲಿ ಸ್ನಾಯು ನೋವು ಮತ್ತು ಆಯಾಸದಂತಹ ಲಕ್ಷಣಗಳು ಕಾಣಬಹುದು. ಇದು ಸೋಂಕಿನ ಲಕ್ಷಣ ಆರಂಭವಾದ ನಂತರ ಒಂದು ತಿಂಗಳವರೆಗೂ ಇರುವ ಸಾಧ್ಯತೆ ಇದೆ. ಇದರೊಂದಿಗೆ ಇತರೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.