ಕರ್ನಾಟಕ

karnataka

Type 2 diabetes: ಮಧುಮೇಹಿಗಳ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುವಲ್ಲಿ ವ್ಯಾಯಾಮ ಪರಿಣಾಮಕಾರಿ

By

Published : Jul 4, 2023, 3:57 PM IST

ಅಧ್ಯಯನದಲ್ಲಿ ಟೈಪ್​ 2 ಡಯಾಬೀಟಿಸ್​ ಹೊಂದಿರುವವರ ರಕ್ತದ ಗ್ಲುಕೋಸ್​ ಮಟ್ಟ ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ ಎಂಬ ಸಮಗ್ರ ಸಾರಾಂಶವನ್ನು ಅಧ್ಯಯನ ನೀಡುತ್ತದೆ

Exercise is effective in controlling blood sugar levels in type 2 diabetics
Exercise is effective in controlling blood sugar levels in type 2 diabetics

ಟೈಪ್​ 2 ಡಯಾಬೀಟಿಸ್​ ಹೊಂದಿರುವವರಲ್ಲಿ ರಕ್ತದ ಸಕ್ಕರೆ ಮಟ್ಟ ನಿಯಂತ್ರಣ ಮಾಡುವಲ್ಲಿ ವ್ಯಾಯಾಮವೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಅಧ್ಯಯನವನ್ನು ಅಮೆರಿಕನ್​ ಜರ್ನಲ್​ ಆಫ್​ ಮೆಡಿಸಿನ್​ ಒಪನ್​ನಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನದಲ್ಲಿ ಟೈಪ್​ 2 ಡಯಾಬಿಟಿಸ್​ ಹೊಂದಿರುವವರ ರಕ್ತದ ಗ್ಲುಕೋಸ್​ ಮಟ್ಟ ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ ಎಂಬ ಸಮಗ್ರ ಸಾರಾಂಶವನ್ನು ಅಧ್ಯಯನ ನೀಡುತ್ತದೆ.

ಇದರಲ್ಲಿ ಸವಾಲು ಕೂಡ ಇದ್ದು ಅಂದೆಂದರೆ, ಹೆಚ್ಚಿನವರು ಅಲ್ಲದಿದ್ದರೂ, ಬಹುತೇಕರಿಗೆ ವ್ಯಾಯಾಮವು ಅವರಿಗೆ ಒಳ್ಳೆಯದು ತಿಳಿದಿದೆ. ಆದರೆ ವ್ಯಾಯಾಮದ ಉತ್ತಮ ವಿಧಾನ ತಿಳಿದಿಲ್ಲ ಎಂದು ಅಧ್ಯಯನದ ಲೇಖಕರ ಸ್ಟೆವೆನ್​ ಮಲಿನ್​ ತಿಳಿಸಿದ್ದಾರೆ. ನಾವು ಈ ವಿಷಯದ ಮೇಲೆ ಪ್ರಮುಖ ಅಂಶದ ಮೇಲೆ ಗುರಿ ಹೊಂದಿದ್ದು, ಏರೋಬಿಲ್​ ವರ್ಸಸ್​ ವೇಟ್​ಲಿಫ್ಟಿಂಗ್​​ ಹೇಗೆ ಪರಿಣಾಮ ಬೀರುತ್ತದೆ. ವ್ಯಾಯಾಮಕ್ಕೆ ಸೂಕ್ತವಾದ ಸಮಯ, ಊಟಕ್ಕೆ ಮೊದಲು ಅಥವಾ ನಂತರ ವ್ಯಾಯಾಮ ಮಾಡಬೇಕಾ ಎಂಬ ಕುರಿತು ಅಧ್ಯಯನ ನಡೆಸಲಾಗಿದೆ.

ಏರೋಬಿಕ್​ ವ್ಯಾಯಾಮ:ಸೈಕಲಿಂಗ್​​, ಸ್ವಿಮ್ಮಿಂಗ್​, ವಾಕಿಂಗ್​ನಂತಹ ದೈಹಿಕ ಚಟುವಟಿಕೆಗಳು ಹೃದಯ ಬಡಿತವನ್ನು ಹೆಚ್ಚಿಸುತ್ತವೆ. ಹಾಗೇ ದೇಹ ರಕ್ತದ ಗ್ಲುಕೋಸ್​ ಮಟ್ಟದ ನಿರ್ವಹಣೆಗೆ ಆಮ್ಲಜನಕದ ಸಹಾಯವನ್ನು ಪಡೆಯುತ್ತದೆ.

ವೇಟ್​ಲಿಫ್ಟಿಂಗ್​​ ವ್ಯಾಯಾಮ: ಡಂಬಲ್ಸ್​​, ಪ್ರತಿರೋಧ ಬ್ಯಾಂಡ್​​ನಂತಹ ಸ್ನಾಯುಗಳ ಬಳಕೆಯ ವ್ಯಾಯಾಮಗಳು ಇನ್ಸುಲಿನ್​ ಸೆನ್ಸಿಟಿವ್​ ಪ್ರಯೋಜನವನ್ನು ಹೊಂದಿದೆ.

ದೀರ್ಘಾ ಕುಳಿತುಕೊಳ್ಳುವುದನ್ನು ತಪ್ಪಿಸಿ, ನಡೆದಾಡುವುದು ಕೂಡ ರಕ್ತದ ಗ್ಲುಕೋಸ್​ ಮತ್ತು ಇನ್ಸುಲಿನ್​ ಮಟ್ಟ ನಿಯಂತ್ರಣಕ್ಕೆ ಪ್ರಯೋಜನ ನೀಡುತ್ತದೆ. ದಿನದ ಅಂತ್ಯದಲ್ಲಿ ವ್ಯಾಯಾಮದಂತಹ ಚಟುವಟಿಕೆ ನಡೆಸುವುದು ಕೂಡ ರಕ್ತದ ಸಕ್ಕರೆ ಮಟ್ಟ ನಿರ್ವಹಣೆ ಮತ್ತು ಇನ್ಸುಲಿನ್​ ಸೆನ್ಸಿಟಿವಿಟಿಗೆ ಸಹಾಯಕ ಮಾಡುತ್ತದೆ.

ಏರೋಬಿಕ್ಸ್​ ಮತ್ತು ವೇಟ್​ಲಿಫ್ಟಿಂಗ್​ ಸಂಯೋಜನೆ ಬದಲು ಒಂದನ್ನು ಮಾಡುವುದು ಉತ್ತಮ. ಮಧ್ಯಾಹ್ನದ ಬಳಿಕದ ವ್ಯಾಯಾಮಕ್ಕಿಂತ ಬೆಳಗಿನ ವ್ಯಾಯಾಮ ಗ್ಲುಕೋಸ್​ ನಿಯಂತ್ರವನ್ನು ಮಾಡುತ್ತದೆ. ಊಟದ ಬಳಿಕದ ವ್ಯಾಯಾಮಕ್ಕಿಂತ ಊಟಕ್ಕಿಂತ ಮುಂಚಿನ ವ್ಯಾಯಾಮ ಉತ್ತಮ. ವ್ಯಾಯಾಮದ ಪ್ರಯೋಜನ ಪಡೆಯಲು ತೂಕ ನಷ್ಟವಾಗಬೇಕಿಲ್ಲ. ಕಾರಣ ವ್ಯಾಯಾಮ ದೇಹದ ಫ್ಯಾಟ್​ ಕಡಿಮೆ ಮಾಡಿ ಸ್ನಾಯುವನ್ನು ಬಲಗೊಳಿಸುತ್ತದೆ.

ಅಮೆರಿಕದ 37 ಮಿಲಿಯನ್​ಗೂ ಹೆಚ್ಚು ಜನರು ಡಯಾಬೀಟಿಸ್​ ಹೊಂದಿದ್ದು, ಶೇ 90ರಿಂದ 95ರಷ್ಟು ಮಂದಿ ಟೈಪ್​ 2 ಡಯಾಬಿಟಿಸ್ ಹೊಂದಿದ್ದಾರೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ತಿಳಿಸಿದೆ. ಟೈಪ್​ 2 ಮಧುಮೇಹ ಇನ್ಸುಲಿನ್​ ಪ್ರತಿರೋಧ ಹೊಂದಿರುತ್ತದೆ. ಅಂದರೆ, ಅದರ ಕೋಶಗಳು ಇನ್ಸುಲಿನ್​ಜೊತೆ ಸಾಮಾನ್ಯವಾಗಿ ಪ್ರತಿಕ್ರಿಯೆ ಮಾಡುವುದಿಲ್ಲ. ಹಾರ್ಮೋನ್​ಗಳು ರಕ್ತದಲ್ಲಿನ ಸಕ್ಕರೆ ಅಥವಾ ಗ್ಲುಕೋಸ್​​ ಮಟ್ಟ ನಿಯಂತ್ರಿಸುತ್ತದೆ. ಅತಿಯಾದ ರಕ್ತದ ಸಕ್ಕರೆಯೂ ದೇಹವನ್ನು ಹಾನಿ ಮಾಡುವ ಜೊತೆಗೆಗೆ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.

ಇನ್ಸುಲಿನ್​ ಪ್ರತಿರೋಧ ಹಾನಿಕಾರಕವಾದರೆ, ಇನ್ಸುಲಿನ್​ ಸೆನ್ಸಿಟಿವಿಟಿ ಪ್ರಯೋಜನಕಾರಿ ಎಂದು ವಿಜ್ಞಾನಿಗಳು ನಂಬಿದ್ದಾರೆ. ಅಧಿಕ ಇನ್ಸುಲಿನ್​ ಸೆನ್ಸಿಟಿವಿಟಿ ರಕ್ತದ ಗ್ಲುಕೋಸ್​​ ಬಳಕೆ ಮಾಡುವಂಎ ಕೋಶಗಳಿಗೆ ಅವಕಾಶ ನೀಡಿ ರಕ್ತದ ಸಕ್ಕರೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಇದು ಅಮೇರಿಕನ್ ಕಾಲೇಜ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನಿಂದ ಬೆಂಬಲಿತವಾಗಿದೆ ಮತ್ತು ಸಂಶೋಧನೆಯಿಂದ ಹೆಚ್ಚಾಗಿ ಹೊರಹೊಮ್ಮುತ್ತಿದೆ. ವ್ಯಾಯಾಮವನ್ನು ಮೊದಲ ಸಾಲಿನ ಚಿಕಿತ್ಸೆ ಎಂದು ಪರಿಗಣಿಸಬಹುದು ಎಂದು ಲೇಖಕರು ತಿಳಿಸಿದ್ದಾರೆ.

ಇದನ್ನೂ ಓದಿ: ಒಂಟಿತನವೂ ಮಧುಮೇಹಿಗಳಲ್ಲಿ ಹೃದ್ರೋಗದ ಅಪಾಯ ಹೆಚ್ಚಿಸುವ ಸಾಧ್ಯತೆ; ಅಧ್ಯಯನ

ABOUT THE AUTHOR

...view details