ತನ್ನ ಒಡ ಹುಟ್ಟಿದವಳಿಗೆ ಆಸರೆಯಾಗಿ, ಯಾವುದೇ ಕಷ್ಟ ಬಂದರೂ ಜೊತೆಯಾಗಿ, ಅವಳ ಕನಸುಗಳನ್ನ ಸಾಕಾರಗೊಳಿಸುವುದಾಗಿ, ಯಾವುದೇ ಕಷ್ಟ ಎದುರಾದರೂ ನಿನ್ನೊಂದಿಗೆ ನಾ ನಿಲ್ಲುವೆ ಎಂಬ ಭರವಸೆಯನ್ನು ಸಹೋದರ ನೀಡುತ್ತಾನೆ. ಆ ದಿನ ಅಕ್ಕ-ತಂಗಿಯರು ಪ್ರೀತಿ ಪಾತ್ರನಾದ ಅಣ್ಣ-ತಮ್ಮನಿಗೆ ರಾಖಿ ಕಟ್ಟಿ, ಅವರ ಸುಖಕರವಾದ ಆರೋಗ್ಯಕ್ಕಾಗಿ ಬೇಡಿಕೊಳ್ಳುತ್ತಾರೆ. ಆದರೆ, ಕೋವಿಡ್ ಇರುವ ಈ ಸಮಯದಲ್ಲಿ ಅಂತರ ಕಾಯ್ದುಕೊಂಡು ಹಬ್ಬ ಆಚರಣೆ ಮಾಡುವುದು ಉತ್ತಮ.
ಪ್ರತಿ ವರ್ಷದಂತೆ ಮಾರುಕಟ್ಟೆಗಳು ವೈವಿಧ್ಯಮಯ, ವರ್ಣರಂಜಿತ ರಾಖಿಗಳಿಂದ ತುಂಬಿವೆ. ಆದರೆ, ಕೋವಿಡ್ ಹಿನ್ನೆಲೆ ಈ ಬಾರಿ ಹೆಚ್ಚು ಆನ್‌ಲೈನ್ ಶಾಪಿಂಗ್‌ಗೆ ಉತ್ತೇಜನ ನೀಡಲಾಗಿದೆ. ಸಹೋದರಿಯರು ಈ ವರ್ಷ ಇತ್ತೀಚಿನ ಮತ್ತು ಟ್ರೆಂಡಿ ರಾಖಿಗಳನ್ನು ಪರಿಶೀಲಿಸುತ್ತಿದ್ದಾರೆ.
ರಾಖಿ ಹಬ್ಬದ ಹಿನ್ನೆಲೆ ಈ ವರ್ಷ ಆನ್‌ಲೈನ್ ಮತ್ತು ಆಫ್ಲೈನ್ನಲ್ಲಿ ವಿವಿಧ ಬಗೆಯ ರಾಖಿಗಳು, ಸಿಹಿ ತಿಂಡಿ-ತಿಸಿನಿಗಳು, ಉಡುಗೊರೆಗಳ ಖರೀದಿ ಜೋರಾಗಿದೆ. ಸಹೋದರ- ಸಹೋದರಿಯರು ತಮ್ಮ ಪ್ರೀತಿ ಪಾತ್ರರಾದವರಿಗೆ ರಾಖಿಗಳು ಮತ್ತು ಉಡುಗೊರೆಗಳನ್ನು ಖರೀದಿಸುವಲ್ಲಿ ನಿರತರಾಗಿದ್ದಾರೆ.
ಮಾರುಕಟ್ಟೆಯಲ್ಲಿ ಕೊರೊನಾ ಮಾದರಿಯ ಕಣ್ಣಿನ ಆಕಾರದ (ದುಷ್ಟ ಕಣ್ಣಿನ) ಹಾಗೂ ರುದ್ರಾಕ್ಷಿಯ ರಾಖಿಗಳು ಟ್ರೆಂಡ್ನಲ್ಲಿವೆ. ನೀವು ಇದನ್ನು ಕೋವಿಡ್ ಸುರಕ್ಷತಾ ಕ್ರಮ ಅಥವಾ ಸಹೋದರರನ್ನು ದುಷ್ಟ ರೋಗಗಳಿಂದ ದೂರವಿಡುವ ಪ್ರಯತ್ನ ಎಂದು ಕರೆಯಬಹುದಾಗಿದೆ.
ದುಷ್ಟ ಕಣ್ಣು ಎಂದರೇನು?:ಫೆಂಗ್ ಚುಯಿಯ ಪ್ರಕಾರ ದುಷ್ಟ ಕಣ್ಣನ್ನು ಸುರಕ್ಷತೆ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ನಕಾರಾತ್ಮಕತೆ ಮತ್ತು ನಕಾರಾತ್ಮಕ ಶಕ್ತಿಯನ್ನು ದೂರವಿರಿಸುತ್ತದೆ. ಸಾಮಾನ್ಯವಾಗಿ ಇದನ್ನು ಅಲ್ಟ್ರಾಮರೀನ್ ನೀಲಿ ಗಾಜಿನ ಮಣಿಗಳಿಂದ ಕಣ್ಣು ಮತ್ತು ಕಣ್ಣೀರಿನ ಡ್ರಾಪ್ ಆಕಾರದ ರೇಖೆಯೊಂದಿಗೆ ಮಾಡಲಾಗುತ್ತದೆ. ಅನೇಕರು ದುಷ್ಟ ಕಣ್ಣಿನಿಂದ ಮಾಡಿದ ಕಡಗಗಳು, ನೆಕ್ಲೇಸ್, ಉಂಗುರಗಳು ಮತ್ತು ಬ್ರೂಚ್‌ಗಳನ್ನು ಸಹ ತೊಡುತ್ತಾರೆ. ಸುರಕ್ಷತೆಯ ಗುಣಮಟ್ಟದಿಂದಾಗಿ ಈ ವರ್ಷ ಮಾರುಕಟ್ಟೆಯಲ್ಲಿ ಈ ಬಗೆಯ ರಾಖಿಗಳಿಗೆ ಬೇಡಿಕೆ ಇದೆ.
ರುದ್ರಾಕ್ಷಿಯ ಅನುಕೂಲಗಳು :ಒಬ್ಬ ವ್ಯಕ್ತಿಯ ಬಳಿ ರುದ್ರಾಕ್ಷಿ ಇದ್ದರೆ ಯಾವುದೇ ನಕಾರಾತ್ಮಕ ಶಕ್ತಿಗಳು ಅವರ ಬಳಿ ಸುಳಿಯುವುದಿಲ್ಲ. ಒಂದು ರೀತಿಯ ರಕ್ಷಣಾ ಭಾವನೆ ಇರುತ್ತದೆ. ಯಾವುದೇ ಕೆಟ್ಟ ದೃಷ್ಟಿಯಿಂದ ದೂರವಿಡಲು ಇದು ಸಹಕಾರಿಯಾಗುತ್ತದೆ. ಇದು ಜೊತೆಗಿದ್ದರೆ ಉತ್ತಮ ಆಲೋಚನೆಗಳು ಮತ್ತು ಉತ್ತಮ ಆರೋಗ್ಯವನ್ನೂ ತರುತ್ತದೆ ಎಂಬ ನಂಬಿಕೆ ಇದೆ. ಕೋವಿಡ್ ಸಮಯದಲ್ಲಿ ಜನರು ಪರಸ್ಪರರ ಸುರಕ್ಷತೆಯ ಬಗ್ಗೆ ಹೆಚ್ಚು ಚಿಂತಿಸುತ್ತಾರೆ. ಹಾಗಾಗಿ, ಮಾರುಕಟ್ಟೆಯಲ್ಲಿ ರುದ್ರಾಕ್ಷಿಯಿರುವ ರಾಖಿಗಳು ಹೆಚ್ಚು ಖರೀದಿಯಾಗುತ್ತಿವೆ.
ಕೋವಿಡ್ ಸಮಯದಲ್ಲ ಆನ್‌ಲೈನ್ ಶಾಪಿಂಗ್ ಉತ್ತಮ :ಕೊರೊನಾ ಆರಂಭವಾದಗಿನಿಂದ ಒಬ್ಬರನ್ನೊಬ್ಬರು ಪರಸ್ಪರ ಭೇಟಿ ಮಾಡಲು ಹಿಂದೆ ಮುಂದೆ ನೋಡುವಂತಹ ಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ವಿವಿಧ ಆನ್‌ಲೈನ್ ವೆಬ್ಸೈಟ್ಗಳು ತಮ್ಮ ಸಹೋದರರಿಗೆ ರಾಖಿ ಸೇರಿದಂತೆ ಸಿಹಿ ತಿಂಡಿಗಳನ್ನು ರವಾನಿಸಲು ಆಸಕ್ತಿದಾಯಕ ರಿಯಾಯಿತಿ ಮತ್ತು ಆಯ್ಕೆಗಳನ್ನು ನೀಡುತ್ತಿವೆ. ಈ ಮೂಲಕ ಅಂತರ ಕಾಯ್ದುಕೊಂಡು ಹಬ್ಬ ಆಚರಿಸಬಹುದಾಗಿದೆ.
ಕೋವಿಡ್ ನಿಯಮ ಪಾಲನೆ ಕಡ್ಡಾಯ :ಕೊರೊನಾ ಇನ್ನೂ ಕಡೆಮೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ರಾಖಿ ಖರೀದಿಗಾಗಿ ಹೊರಗಡೆ ಶಾಪಿಂಗ್ ಹೋಗುವಾಗ, ಯಾವುದೇ ಸ್ಥಳಕ್ಕೆ ಪ್ರಯಾಣಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಮಾಡಿ ಕೋವಿಡ್ ನಿಯಮಗಳನ್ನು ಪಾಲಿಸಿ. ಈ ಮೂಲಕ ನಿಮ್ಮ ಮತ್ತು ನಿಮ್ಮವರ ಆರೋಗ್ಯ ಕಾಪಾಡಿ. ಈ ಬಾರಿಯ ರಾಖಿ ಹಬ್ಬವು ನಿಮಗೆ ಮತ್ತು ಇತರರಿಗೂ ಆನಂದದಾಯಕವಾಗಿರಲಿ, ಕೋವಿಡ್ ಸುರಕ್ಷತೆಯೊಂದಿಗೆ ಹಬ್ಬ ಆಚರಿಸಿ.