ಮನುಷ್ಯನ ಭವಿಷ್ಯಗಳು ನಿಂತಿರುವುದು ನಂಬಿಕೆ ಮೇಲೆ. ಈ ನಂಬಿಕೆಗಳೇ ಇತರೆ ಜೀವಿಗಳಿಗಿಂತ ಸೃಷ್ಟಿ, ರೂಪಾಂತರಗಳ ಶಕ್ತಿಯನ್ನು ಹೊಂದಿರುತ್ತವೆ. ಈ ನಂಬಿಕೆಗಳೇ ಮನುಷ್ಯನನ್ನು ಆಶಾಜೀವಿಯಾಗಿಸಲು ಸಾಧ್ಯ. ಆಶಾವಾದ ಎಂಬುದು ಮನುಷ್ಯನ ಯಶಸ್ಸಿನ ಗುಟ್ಟು ಎಂದರೆ ತಪ್ಪಾಗಲಾರದು. ಎಷ್ಟೇ ಕೆಳಗೆ ಬಿದ್ದರೂ ಆತ ಆಂತರಿಕ ಅನುಭವಗಳಿಂದ ಆತನಲ್ಲಿ ಹೊಸ ವಿಶ್ವಾಸ ಬೆಳೆಸುತ್ತದೆ. ಮನುಷ್ಯ ಅಂದುಕೊಳ್ಳುವ ಆಸೆ, ಅವಶ್ಯಕತೆ, ಚಿಂತನೆ, ಮಾತು ಮತ್ತು ಉದ್ದೇಶಗಳನ್ನು ನಾವು ಈ ನಂಬಿಕೆ ಅಥವಾ ಆಶಾವಾದ ಎನ್ನಬಹುದು. ಈ ಆಶಾವಾದದ ಬೆಳಕನ್ನೇ ಸಕಾರಾತ್ಮತೆಯಂದು ಸಾಮಾನ್ಯವಾಗಿ ಕರೆಯುತ್ತೇವೆ.
ಪ್ರತಿಯೊಂದರಲ್ಲೂ ಯಶಸ್ಸು: ಸಕಾರಾತ್ಮಕ ಜನರು ತಮ್ಮ ಸುತ್ತಮುತ್ತಲಿನ ವಸ್ತುಗಳನ್ನು ತಮ್ಮಂತೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಕಾರಣ, ಪ್ರತಿಯೊಂದು ವಿಷಯದಲ್ಲಿ ಅವರು ಸದಾ ಧನಾತ್ಮಕತೆಯನ್ನು ಕಾಣುತ್ತಾರೆ. ಸದಾ ಒಳ್ಳೆಯ ವಿಷಯಗಳನ್ನು ಮಾತ್ರ ನೋಡುವ ಇವರ ಅನುಭವದ ಉದ್ದೇಶದಿಂದಲೇ ಎಲ್ಲಾ ಪರಿಸ್ಥಿತಿಗಳನ್ನು ಅವರು ಸರಳವಾಗಿ ಕಾಣುತ್ತಾರೆ. ಈ ಸಕಾರಾತ್ಮಕತೆಯೇ ಅವರನ್ನು ಆಶಾವಾದಿಗಳು, ನಂಬಿಕೆವುಳ್ಳವರನ್ನಾಗಿ ಮಾಡುತ್ತದೆ.
ಧನಾತ್ಮಕ ಆಲೋಚನೆ ಹೊಂದಿರುವ ಜನರು ಹೆಚ್ಚಾಗಿ ಒಳ್ಳೆಯದನ್ನೇ ನೋಡುವುದರಿಂದ ಅವರಿಗೆ ಕಿರಿಕಿರಿ ಆಗುವ ಅನುಭವ ಕಡಿಮೆ ಇರುತ್ತದೆ. ಯಾವುದೇ ಸಂದರ್ಭ ಇರಲಿ, ಸನ್ನಿವೇಶವಿರಲಿ ಅವರು ಅದಕ್ಕೆ ಅನುಗುಣವಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಈ ಸಕಾರಾತ್ಮಕತೆ ಮೂಲ ಮಟ್ಟದಲ್ಲೇ ಬರುತ್ತದೆ, ಇದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಆಶಾವಾದವನ್ನು ಕಾಣಬಹುದು, ಇದರ ಉತ್ತಂಗದ ಮಟ್ಟದಲ್ಲಿ ನಂಬಿಕೆ ಅಥವಾ ಮಹಾ ಪ್ರಜ್ಞೆ ಹೊಂದಿರುತ್ತೇವೆ. ಯಾವಾಗ ಜನರು ಸಕಾರಾತ್ಮಕ ಚಿಂತನೆಯಲ್ಲಿ ಜೀವನ ಕಳೆಯುತ್ತಾರೋ ಆಗ ಅವರು ಜೀವನವನ್ನು ಯಶಸ್ಸು, ದೂರದೃಷ್ಟಿಗೆ ಬದಲಾಯಿಸುತ್ತಾರೆ.
ನಕಾರಾತ್ಮಕತೆ ಪರಿಣಾಮ: ಅನುಮಾನಗಳು, ಆತಂಕಗಳು, ಅಭದ್ರತೆಗಳು ಮತ್ತು ಭಯಗಳು ವ್ಯಕ್ತಿಯ ಆಲೋಚನೆಗಳನ್ನು ದುರ್ಬಲಗೊಳಿಸುತ್ತವೆ. ಇಂತಹ ಆಲೋಚನೆಗಳಿಂದ ದೇಹದಲ್ಲಿ ಆಮ್ಲಜನಕದ ಹರಿವು, ಸೆಲ್ಯೂಲರ್ ಪುನರ್ ಉತ್ಪಾದನೆಯನ್ನು ನಿರ್ಬಂಧಿಸುತ್ತದೆ. ಅಲ್ಲದೇ, ಇದು ಜೀರ್ಣ ಕ್ರಿಯೆ ಮೇಲೆ ಕೂಡ ಪರಿಣಾಮ ಬೀರುತ್ತದೆ. ನಕಾರಾತ್ಮಕ ಚಿಂತನೆಗಳು ಹಾರ್ಮೋನ್ ಬೆಳವಣಿಗೆ ಹಾಗೂ ನರಗಳ ವ್ಯವಸ್ಥೆಯನ್ನು ಬೆಂಬಲಿಸುವುದಿಲ್ಲ. ದೈಹಿಕವಾಗಿ, ಭೌತಿಕ ವ್ಯವಸ್ಥೆಗೆ ಇದು ತೊಂದರೆ ನೀಡುತ್ತದೆ. ನಮ್ಮ ಜೀವರಸಾಯನಶಾಸ್ತ್ರ, ನಮ್ಮ ಜೈವಿಕ ವಿದ್ಯುತ್ ಮತ್ತು ನಮ್ಮ ಬಯೋಮೆಕಾನಿಕ್ಸ್ ಇದರಿಂದ ಹಾನಿಗೊಳ್ಳುತ್ತದೆ