ನ್ಯೂಯಾರ್ಕ್: ಪ್ರತಿಯೊಬ್ಬರ ಕೈ ಬೆರಳಿನ ಅಚ್ಚು ವಿಶಿಷ್ಟ, ಅನನ್ಯತೆಯಿಂದ ಕೂಡಿದೆ ಎಂಬ ನಂಬಿಕೆಯನ್ನು ಸಂಶೋಧನೆಯೊಂದು ಸುಳ್ಳು ಮಾಡಿದೆ. ಈ ಕುರಿತು ಸಂಶೋಧನೆ ನಡೆಸಿರುವ ಕೊಲಂಬಿಯಾ ವಿಶ್ವವಿದ್ಯಾಲಯದ ಇಂಜಿನಿಯರ್ಗಳು ಇದಕ್ಕಾಗಿ ಹೊಸ ಎಐ ನಿರ್ಮಿಸಿದ್ದಾರೆ. ಈ ಕುರಿತು ಅಧ್ಯಯನ ನಡೆಸಿರುವ ತಂಡ ಪ್ರತಿಯೊಬ್ಬರ ಕೈ ಬೆರಳಿನ ಅಚ್ಚು ವಿಭಿನ್ನವಾಗಿಲ್ಲ. ಅವು ಒಂದೊಕ್ಕೊಂದು ಹೋಲುತ್ತದೆ. ನಾವು ಈ ಹಿಂದೆ ತಪ್ಪಾಗಿ ಕೈ ಬೆರಳಿನ ಅಚ್ಚು ಹೋಲಿಕೆ ಮಾಡಿದರಿಂದ ಈ ರೀತಿ ತಪ್ಪು ಕಲ್ಪನೆಯನ್ನು ಹೊಂದಿದ್ದೇವೆ ಎಂದಿದ್ದಾರೆ.
ಇನ್ನು ಈ ಕೈ ಬೆರಳಚ್ಚುಗಳು ಒಬ್ಬರಂತೆ ಮತ್ತೊಬ್ಬರದಿಲ್ಲ. ಪ್ರತಿಯೊಬ್ಬರು ವಿಶಿಷ್ಟವಾದ ಫಿಂಗರ್ಪ್ರಿಂಟ್ ಹೊಂದಿದ್ದು, ಇದನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂಬುದು ಫೋರೆನ್ಸಿನ್ ಸಮುದಾಯದಲ್ಲಿ ಹೆಚ್ಚು ಸ್ವೀಕಾರಾರ್ಹ ಸತ್ಯವಾಗಿದೆ. ಈ ಕುರಿತು ಕೊಲಂಬಿಯಾ ಇಂಜಿನಿಯರಿಂಗ್ ಪದವಿಪೂರ್ವ ಗಾಬೆ ಗುವೊ ನೇತೃತ್ವದ ತಂಡ ಈ ಒಪ್ಪಿತ ಸತ್ಯದ ಕುರಿತು ಪ್ರಶ್ನಿಸಿತು.
ಫೋರೆನ್ಸಿಕ್ ಕುರಿತು ಗುವೊ ಅಮೆರಿಕದ ಸಾರ್ವಜನಿಕ ಸರ್ಕಾರದ ಡಾಟಾಬೇಸ್ನಿಂದ 60 ಸಾವಿರ ಫಿಂಗರ್ಪ್ರಿಂಟ್ ಅನ್ನು ಪತ್ತೆ ಮಾಡಿ, ಅವುಗಳನ್ನು ಆಳ ಕಾಂಟ್ರಾಸ್ಟಿವ್ ನೆಟ್ವರ್ಕ್ ಎಂಬ ಕೃತಕ ಬುದ್ಧಿಮತ್ತೆ ವ್ಯವಸ್ಥೆಗೆ ಜೋಡಿಸಿದರು. ಈ ವೇಳೆ ಕೆಲವು ಬೆರಳಚ್ಚುಗಳು ಹೋಲಿಕೆಯಾಗಿದ್ದು, ಇವು ಬೇರೆ ಬೇರೆ ಜನರಿಗೆ ಸೇರಿದವು ಆಗಿದೆ. ಅದಕ್ಕಾಗಿ ತಂಡವೂ ಅತ್ಯಾಧುನಿಕ ಚೌಕಟ್ಟನ್ನು ಮಾರ್ಪಡಿಸಿದೆ. ಈ ವೇಳೆ ಈ ವಿಶಿಷ್ಟ ಬೆರಳಚ್ಚಿನ ಗುರುತುಗಳು ಒಂದೇ ವ್ಯಕ್ತಿಗೆ ಸೇರಿವೆ.