ಕರ್ನಾಟಕ

karnataka

ETV Bharat / sukhibhava

World Blood Donor Day 2023: ಆರೋಗ್ಯಯುತ ರಕ್ತದಾನದ ಮೂಲಕ ಜೀವ ಉಳಿಸುವಿಕೆಗೆ ಒತ್ತು - ವಿಶ್ವ ಆರೋಗ್ಯ ಸಂಸ್ಥೆ ವರದಿ

ರಕ್ತ ದಾನ ಶ್ರೇಷ್ಠ ದಾನಗಳಲ್ಲಿ ಒಂದಾಗಿದೆ. ಈ ಮೂಲಕ ಮತ್ತೊಬ್ಬ ವ್ಯಕ್ತಿಯ ಜೀವ ಉಳಿಸಬಹುದಾಗಿದೆ. ಈ ಹಿನ್ನೆಲೆ ಈ ಕುರಿತಾಗಿ ಜನರಲ್ಲಿ ಮತ್ತಷ್ಟು ಅರಿವು ಮೂಡಿಸಬೇಕಿದೆ.

emphasis on saving lives through healthy blood donation
emphasis on saving lives through healthy blood donation

By

Published : Jun 13, 2023, 2:19 PM IST

ಬೆಂಗಳೂರು:ಸುರಕ್ಷಿತ ರಕ್ತದಾನದ ಮೂಲಕ ಅನೇಕರ ಜೀವವನ್ನು ಉಳಿಸಬಹುದಾಗಿದೆ. ಜಗತ್ತಿಗೆ ರಕ್ತದ ಅವಶ್ಯಕತೆ ಇದೆ. ಆದರೆ, ಲಭ್ಯತೆ ಇಲ್ಲ. ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳುವಂತೆ, ರಕ್ತದ ಕೊರತೆಯು ಹೆಚ್ಚಾಗಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ ಕಂಡುಬರುತ್ತಿದೆ.

ಈ ಹಿನ್ನೆಲೆ ಸ್ವಯಂ ಪ್ರೇರಿತರು, ಪಾವತಿಸದ ರಕ್ತದಾನಿಗಳಿಂದ ರಕ್ತದವನ್ನು ಸಂಗ್ರಹಿಸಲು ಆರೋಗ್ಯ ಅಧಿಕಾರಿಗಳಯ ಅವಕಾಶ ಮತ್ತು ಬೆಂಬಲವನ್ನು ನೀಡುತ್ತಿದ್ದಾರೆ. ಈ ಮೂಲಕ ರಕ್ತದ ಸಂಗ್ರಹ ಮತ್ತು ವರ್ಗಾವಣೆ ನಡೆಸಲಾಗುವುದು. ಈ ಹಿನ್ನೆಲೆ ರಕ್ತ ದಾನ ಮತ್ತು ರಕ್ತದ ಅವಶ್ಯಕತೆ ಕುರಿತು ಜಾಗೃತಿ ಮೂಡಿಸಲು ಜೂನ್​ 14 ಅನ್ನು ವಿಶ್ವ ರಕ್ತ ದಾನಿಗಳ ದಿನವನ್ನಾಗಿ ಜಾಗತಿಕವಾಗಿ ಆಚರಿಸಲಾಗುವುದು. ಈ ರಕ್ತ ದಾನದ ಮೂಲಕ ಜೀವ ಉಳಿಸಲು ಮುಂದಾಗುವ ಮತ್ತು ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಮುಂದಾಗುವ ಸ್ವಯಂ ಪ್ರೇರಿತರು ಮತ್ತು ಪಾವತಿದಾರರಲ್ಲದ ರೋಗಿಗಳ ಗುರಿಗಳ ಮೇಲೆ ಬೆಳಕು ಚೆಲ್ಲಲಾಗುವುದು.

2005ರಲ್ಲಿ ವಿಶ್ವ ಆರೋಗ್ಯ ಅಸೆಂಬ್ಲಿಯ ಜಾಗತಿಕ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ವಿಶ್ವ ರಕ್ತ ದಾನ ದಿನವನ್ನು ಸ್ಥಾಪನೆ ಮಾಡಲಾಯಿತು. ಪ್ರತಿವರ್ಷ ಈ ದಿನದಂದು ಜಾಗತಿಕವಾಗಿ ಆಚರಣೆ ಮಾಡಲಾಗುವುದು. ಈ ವರ್ಷ ಅಂದರೆ 2023ರಂದು ಅಲ್ಜೀರಿಯಾ ರಾಷ್ಟ್ರೀಯ ರಕ್ತ ವರ್ಗಾವಣೆ ಸೇವೆಯ ವಿಶ್ವ ರಕ್ತ ದಾನಿಗಳ ದಿನವನ್ನು ಆಚರಣೆ ಮಾಡುತ್ತಿದೆ.

2023ರಲ್ಲಿ ವಿಶ್ವ ರಕ್ತ ದಾನಿಗಳ ದಿನದ ರಕ್ತ ನೀಡಿ, ಪ್ಲಾಸ್ಮಾ ನೀಡಿ, ಜೀವ ಉಳಿಸಿ, ಆಗಾಗ್ಗೆ ಹಂಚಿಕೊಳ್ಳಿ ಎಂಬ ಘೋಷವಾಕ್ಯದೊಂದಿಗೆ ಆಚರಣೆ ಮಾಡಲಾಗುತ್ತಿದೆ. ಈ ಧ್ಯೇಯವಾಕ್ಯವೂ ರೋಗಿಗಳಿಗೆ ಜೀವನ ಪರ್ಯಂತ ರಕ್ತದ ಬೆಂಬಲ ಮತ್ತು ರಕ್ತ ಅಥವಾ ಪ್ಲಾಸ್ಮಾ ದಾನ ಮಾಡುವುದು ಎಷ್ಟು ಪ್ರಾಮುಖ್ಯತೆ ಎಂಬುದನ್ನು ಒತ್ತಿ ಹೇಳುತ್ತಿದೆ. ಜೊತೆಗೆ ಸುರಕ್ಷಿತ ಮತ್ತು ಸುಸ್ಥಿರ ರಕ್ತ ಪೂರೈಕೆ ಮತ್ತ ರಕ್ತ ಉತ್ಪಾದನೆ ಕುರಿತು ತಿಳಿಸಿದೆ.

ಗರ್ಭಾವಸ್ಥೆ, ಶಿಶು ಜನನ ಸಂದರ್ಭದಲ್ಲಿ ರಕ್ತ ಸ್ರಾವದಿಂದ ಬಳಲುವ ಮಹಿಳೆ, ಅನಿಮಿಯಾದಿಂದ ಬಳಲುವ ಮಗು, ರೋಗಿಗಳು, ಅಸ್ಥಿಮಜ್ಜೆ ಸಮಸ್ಯೆ, ಅನುವಂಶಿಕ ಹಿಮೋಗ್ಲೋಬಿನ್​ ಸಮಸ್ಯೆ, ಪ್ರತಿರಕ್ಷಣಾ ಕೊರತೆ ಪರಿಸ್ಥಿತಿ, ಆಪಘಾತ, ತುರ್ತು ಪರಿಸ್ಥಿತಿ, ವಿಪತ್ತು, ಅಘಾತದ ಮುಂದಾದ ಸಂದರ್ಭದಲ್ಲಿ ರಕ್ತವು ಅತ್ಯವಶ್ಯಕವಾಗಿದ್ದು, ಈ ರಕ್ತದ ಸಂಪನ್ಮೂಲವನ್ನು ಪರಿಣಾಮಕಾರಿ ನಿರ್ವಹಣೆ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಇನ್ನು ವಿಶ್ವ ರಕ್ತ ದಾನದ ದಿನದ 2023 ವಿಶ್ವ ಆರೋಗ್ಯ ಸಂಸ್ಥೆಯ ಧ್ಯೇಯ ಇಂತಿದೆ.

* ವೈಯಕ್ತಿಕ ರಕ್ತದಾನಿಗಳ ಧನ್ಯವಾದ ಮತ್ತು ಸಂಭ್ರಮಾಚರಣೆ ಮಾಡುವುದರ ಜೊತೆಗೆ ಮತ್ತಷ್ಟು ದಾನಿಗಳಿಗೆ ಪ್ರೋತ್ಸಾಹ ನೀಡುವುದು.

* ಆರೋಗ್ಯಯುತ ವ್ಯಕ್ತಿಗಳಿಗೆ ನಿಯಮಿತವಾಗಿ ಸುರಕ್ಷಿತ ಮತ್ತು ಸಾಧ್ಯವಾದ ಮಟ್ಟದಲ್ಲಿ ರಕ್ತದಾನ ಮಾಡುವಂತೆ ಪ್ರೋತ್ಸಾಹ ನೀಡುವುದು. ಈ ಮೂಲಕ ರೋಗಿಗಳ ಜೀವ ಉಳಿಸುವಲ್ಲಿ ರಕ್ತದ ವರ್ಗಾವಣೆ ಮಾಡುವುದು.

* ಎಲ್ಲರಿಗೂ ಸುರಕ್ಷಿತ ರಕ್ತದ ಉತ್ಪನ್ನಗಳಿಗೆ ಸಾರ್ವತ್ರಿಕ ಪ್ರವೇಶವನ್ನು ಒದಗಿಸುವಲ್ಲಿ ಸ್ವಯಂಪ್ರೇರಿತರು, ಪಾವತಿ ಪಡೆದ ಪಡೆಯದ ಸಾಮಾನ್ಯ ರಕ್ತ ಮತ್ತು ಪ್ಲಾಸ್ಮಾ ದಾನಿಗಳ ನಿರ್ಣಾಯಕ ಪಾತ್ರಗಳನ್ನು ಎತ್ತಿ ತೋರಿಸುವುದು

* ರಾಷ್ಟ್ರೀಯ ರಕ್ತದಾನ ಕಾರ್ಯಕ್ರಮಗಳಲ್ಲಿ ಹೂಡಿಕೆ ಮಾಡಲು, ಬಲಪಡಿಸಲು ಮತ್ತು ಉಳಿಸಿಕೊಳ್ಳಲು ಸರ್ಕಾರಗಳು ಮತ್ತು ಅಭಿವೃದ್ಧಿಶೀಲ ಪಾಲುದಾರರಿಂದ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಜಾಗತಿಕ ಬೆಂಬಲವನ್ನು ಸೃಷ್ಟಿಸುವುದು.

ಇದನ್ನೂ ಓದಿ: ಬ್ರೈನ್ ಟ್ಯೂಮರ್ ದಿನ: ರೋಗ ಲಕ್ಷಣ ತಿಳಿದ ತಕ್ಷಣ ವೈದ್ಯರನ್ನು ಸಂಪರ್ಕಿಸಿ

ABOUT THE AUTHOR

...view details