ನ್ಯೂ ಯಾರ್ಕ್: ಸಾರ್ಸ್ ಕೋವ್- 2ವಿನ ದೀರ್ಘ ಕಾಲದ ಅಪಾಯದ ಕುರಿತು ಈಗಾಗಲೇ ಅನೇಕ ಸಂಶೋಧನೆಗಳು ನಡೆದಿದೆ. ಇದರಲ್ಲಿ ಈ ಸೋಂಕು ಹುಟ್ಟುವ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಹೊಸ ಅಧ್ಯಯನ ನಡೆಸಲಾಗಿದೆ. ಅದರಲ್ಲಿ ಗರ್ಭಾವಸ್ಥೆಯಲ್ಲಿ ಸಾರ್ಸ್-ಕೋವ್-2 ಸೋಂಕು ಹೊಂದಿರುವ ತಾಯಂದಿರಿಗೆ ಜನಿಸುವ ಗಂಡು ಮಕ್ಕಳಲ್ಲಿ ನರಗಳ ಬೆಳವಣಿಗೆಯಲ್ಲಿ ಸಮಸ್ಯೆಗಳು ಕಾಣುತ್ತವೆ. ಮಗು ಜನಿಸಿದ 12 ತಿಂಗಳೊಳಗೆ ಆ ಗಂಡು ಮಕ್ಕಳಲ್ಲಿ ಅಟಿಸಂ ಸ್ಪಕ್ಟ್ರಂ ಸಮಸ್ಯೆಗಳು ಕಾಣುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ. ಈ ಕುರಿತು ಜಾಮಾ ನೆಟ್ವರ್ಕ್ ಓಪನ್ನಲ್ಲಿ ಪ್ಟಕಸಿಲಾಗಿದೆ. ಕೋವಿಸ್ ಸಾಕಾರಾತ್ಮಕತೆಯ ಸೋಂಕ ಗಂಡು ಮಕ್ಕಳು ಹುಟ್ಟಿದ 12 ತಿಂಗಳಲ್ಲಿ ನರಗಳ ಅಭಿವೃದ್ಧಿ ಮೇಲೆ ಪರಿಣಾಮ ಬೀರುವುದರೊಂದಿಗೆ ಸಂಬಂಧ ಹೊಂದಿದೆ ಎಂಬುದು ಅಧ್ಯಯನ ತೋರಿಸಿದೆ.
ಹೆಣ್ಣು ಮಕ್ಕಳ ಮೇಲೆ ಯಾವುದೇ ಪರಿಣಾಮ ಇಲ್ಲ: ಮಗು ಹುಟ್ಟಿದ 18 ತಿಂಗಳಿದ್ದಾಗ ಈ ಪರಿಣಾಮ ಹೆಚ್ಚು ಸಾಧಾರಣವಾಗಿರುತ್ತದೆ. ತಾಯಿ ಗರ್ಭಾವಸ್ಥೆಯಲ್ಲಿ ಸಾರ್ಸ್ -ಕೋವ್- 2 ಸೋಂಕು ಹೊಂದಿರುವುದು ಮಕ್ಕಳ ನರಗಳ ಮೇಲೆ ಈ ವಯಸ್ಸಿನಲ್ಲಿ ಶೇ 42ರಷ್ಟು ಪರಿಣಾಮ ಬೀರುತ್ತದೆ. ಆದರೆ, ಈ ಅಪಾಯವನ್ನು ಹೆಣ್ಣುಮಕ್ಕಳಲ್ಲಿ ಕಂಡು ಬಂದಿಲ್ಲ. ಗರ್ಭಾವಸ್ಥೆಯಲ್ಲಿ ಸೋಂಕಿಗೆ ತುತ್ತಾಗಿರುವ ತಾಯಂದಿರಿಗೆ ಜನಿಸಿದ ಮಕ್ಕಳ ನರಗಳ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ ಎಂದು ಅಮೆರಿಕದ ಮೆಸಚ್ಯೂಸೆಟ್ ಜನರಲ್ ಹಾಸ್ಪಿಟಲ್ ಸಂಶೋಧಕರು ತಿಳಿಸಿದ್ದಾರೆ.
ನರಗಳ ಬೆಳವಣಿಗೆ ಅಪಾಯ ತಾಯಂದಿರ ಸಾರ್ಸ್-ಕೋವ್-2 ಸೋಂಕಿನೊಂದಿಗೆ ಗಂಡು ಮಕ್ಕಳಲ್ಲಿ ಹೆಚ್ಚಿದೆ. ಪ್ರಸವ ಪೂರ್ವದಲ್ಲಿ ಪ್ರತಿಕೂಲ ಒಡ್ಡುವಿಕೆಗೆ ಗಂಡು ಮಕ್ಕಳು ಒಳಗಾಗುತ್ತಾರೆ ಎಂದು ಅಸೋಸಿಯೇಟ್ ಪ್ರೊಫೆಸರ್ ಆಂಡ್ರೆ ಎಡ್ಲೊ ತೊಳಿಸಿದ್ದಾರೆ.