ಲಂಡನ್: ಕ್ಯಾನ್ಸರ್ ವಿರೋಧಿ ಇಮ್ಯೂನೊಥೆರಪಿ ಅದರಲ್ಲೂ ವಿಶೇಷವಾಗಿ ಸುಧಾರಿತ ಚರ್ಮ ಕಾನ್ಸರ್ನಲ್ಲಿ ವಿರುದ್ಧ ಹೋರಾಡಲು ವಿಟಮಿನ್ ಡಿ ಮಟ್ಟ ಪ್ರಮುಖ ಪಾತ್ರವಹಿಸುತ್ತದೆ ಎಂದು ಅಧ್ಯಯನ ಒಂದು ತಿಳಿಸಿದೆ. ಪೀರ್ ರಿವ್ಯೂಡ್ ಕ್ಯಾನ್ಸರ್ ಜರ್ನಲ್ನಲ್ಲಿ ಈ ಕುರಿತು ವರದಿಯನ್ನು ಪ್ರಕಟಿಸಲಾಗಿದೆ. ಇಮ್ಯೂನೊಥೆರಪಿ ಔಷಧಗಳನ್ನು ಪಡೆಯಲು ಸಾಮಾನ್ಯ ವಿಟಮಿನ್ ಡಿ ಮಟ್ಟ ನಿರ್ವಹಣೆ ಮಾಡುವುದು ಅಗತ್ಯವಾಗಿದೆ ಎಂದು ಆ ವರದಿಯಲ್ಲಿ ಹೇಳಲಾಗಿದೆ.
ವಿಟಮಿನ್ ಡಿ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಕಾಪಾಡುವುದು ಸೇರಿದಂತೆ ದೇಹದ ಮೇಲೆ ಇನ್ನಿತರ ಪರಿಣಾಮವನ್ನು ಬೀರುತ್ತದೆ. ವಿಟಮಿನ್ ಡಿ ಇಮ್ಯೂನೊ ಚೆಕ್ಪಾಯ್ಡ್ ಇನ್ಹಬಿಟರ್ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಿಸಲು ತಂಡವು ಸುಧಾರುತ ಮೆಲನೊಮ ಜೊತೆ 200 ರೋಗಿಗಳ ರಕ್ತಗಳ ಪರೀಕ್ಷೆಯನ್ನು 12 ವಾರಗಳ ಕಾಲ ಇಮ್ಯೂನೊಥೆರಪಿ ಚಿಕಿತ್ಸೆಗಿಂತ ಮುಂಚೆ ಮತ್ತು ನಂತರ ನಡೆಸಲಾಗಿತ್ತು.
ಪ್ರತಿರಕ್ಷಣಾ ಚೆಕ್‌ಪಾಯಿಂಟ್ ಇನ್ಹಿಬಿಟರ್‌ಗಳಿಗೆ ಅನುಕೂಲಕರವಾದ ಪ್ರತಿಕ್ರಿಯೆ ದರವನ್ನು ತಂಡ ಗುರುತಿಸಿದೆ. ಅಧ್ಯಯನ ಗುಂಪಿನಲ್ಲಿನ 56.0 ಪ್ರತಿಶತ ರೋಗಿಗಳಲ್ಲಿ ಸಾಮಾನ್ಯ ಬೇಸ್‌ಲೈನ್ ವಿಟಮಿನ್ ಡಿ ಮಟ್ಟಗಳು ಅಥವಾ ವಿಟಮಿನ್ ಡಿ ಪೂರೈಕೆಯೊಂದಿಗೆ ಪಡೆದ ಸಾಮಾನ್ಯ ಮಟ್ಟಗಳಲ್ಲಿ ಕಂಡು ಬಂದಿದೆ. ಪ್ರಗತಿ ಮುಕ್ತ ಬದುಕುಳಿಯುವಿಕೆ ಚಿಕಿತ್ಸೆಯ ಪ್ರಾರಂಭದಿಂದ ಕ್ಯಾನ್ಸರ್ ಪ್ರಗತಿಯವರೆಗಿನ ಸಮಯ - ಈ ಗುಂಪುಗಳಲ್ಲಿ ಕ್ರಮವಾಗಿ 11.25 ಮತ್ತು 5.75 ತಿಂಗಳುಗಳ ಕಾಲ ಈ ಅಧ್ಯಯನ ನಡೆಸಲಾಗಿದೆ.
ಇದನ್ನು ಓದಿ:ಮುಖದ ಅಂದ ಹಾಳುಗೆಡುವ ನರಹುಲಿಗಳು; ಕಾರಣ, ಪರಿಹಾರ