ನವದೆಹಲಿ: ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ತುಸು ತ್ರಾಸದಾಯಕವೇ. ಅದರಲ್ಲೂ ಆರೋಗ್ಯಕರ ಡಯಟ್ ವಿಚಾರದಲ್ಲಿ ಪೋಷಕಾಂಶಯುಕ್ತ ಆಹಾರದ ಆಯ್ಕೆ ಸವಾಲೇ ಸರಿ. ಇದಕ್ಕೆ ಕಾರಣ ಅಸಮಂಜಸ ಹೊತ್ತಿನಲ್ಲಿ ಕೆಲಸ ಮಾಡುವುದು. ಇದು ಹೃದಯಬಡಿತದ ಮೇಲೆ ಪರಿಣಾಮ ಬೀರುತ್ತದೆ.
ರಾತ್ರಿ ಪಾಳಿಯ ಕೆಲಸಕ್ಕೂ ಮುನ್ನ ಸೂಕ್ತ ಆಹಾರಗಳ ಆಯ್ಕೆ ಅತ್ಯಗತ್ಯ. ಹೆಚ್ಚು ಭಾರವಲ್ಲದ, ಪೋಷಕಾಂಶಯುಕ್ತ ಸರಿಯಾದ ಆಹಾರಗಳು ದೇಹಕ್ಕೆ ಶಕ್ತಿದಾಯಕ ಮತ್ತು ಸಾಮರ್ಥ್ಯ ನೀಡುತ್ತವೆ. ನೀವು ಮಾಡುವ ಕೆಲಸಕ್ಕೆ ಬೆಂಬಲ ಒದಗಿಸುತ್ತವೆ. ಈ ಕೆಳಗಿನ 5 ಆಹಾರಗಳು ರಾತ್ರಿ ಪಾಳಯದ ಡಯಟ್ಗೆ ಸಹಾಯಕಾರಿ ಎನ್ನುತ್ತಾರೆ ಡಾ.ರೋಹಿಣಿ ಪಾಟೀಲ್.
1. ಹಣ್ಣು, ಬೀಜಗಳು: ಬಾದಾಮಿ, ವಾಲ್ನಟ್ ಮತ್ತು ಚಿಯಾ, ಫ್ಲೆಕ್ಸ್ ಬೀಜಗಳು ಪ್ರೊಟೀನ್, ಆರೋಗ್ಯಯುತ ಕೊಬ್ಬು ಮತ್ತು ಫೈಬರ್ ಅಂಶ ಹೊಂದಿವೆ. ಇದು ಸುಸ್ಥಿರ ಶಕ್ತಿಯನ್ನು ಬಿಡುಗಡೆ ಮಾಡಿ, ರಾತ್ರಿ ಪಾಳಿಯಲ್ಲಿ ಹೆಚ್ಚು ಗಮನಹರಿಸಿ, ಕೆಲಸ ಮಾಡಲು ಉತ್ತೇಜಕ. ಇದಕ್ಕೆ ಯಾವುದೇ ರೀತಿಯ ಸಿದ್ಧತೆ ಬೇಕಿಲ್ಲ. ಸಾಂಪ್ರದಾಯಿಕ ಸ್ನಾಕ್ ಆಯ್ಕೆಯ ಅವಕಾಶವನ್ನು ಇದು ನೀಡುತ್ತದೆ.
2. ಕ್ಯಾರೆಟ್, ಸೌತೆಕಾಯಿ: ಸೌತೆಕಾಯಿ ಮತ್ತು ಕ್ಯಾರೆಟ್ ಕಡಿಮೆ ಕ್ಯಾಲೋರಿ ಹೊಂದಿವೆ. ಇವು ನಿಮ್ಮನ್ನು ನಿರ್ಜಲೀಕರಣಕ್ಕೆ ಒಳಗಾಗಿಸುವುದಿಲ್ಲ. ವಿಟಮಿನ್ ಮತ್ತು ಮಿನರಲ್ಸ್‌ನಿಂದ ಸಮೃದ್ಧವಾಗಿವೆ. ನಿಮ್ಮ ತಿನ್ನುವ ಬಯಕೆಗೂ ಕಡಿವಾಣ ಹಾಕುತ್ತದೆ. ಯೋಗರ್ಟ್ ಜೊತೆಗೂ ಇವುಗಳನ್ನು ಸೇವಿಸಬಹುದು. ದೇಹವನ್ನು ಹೈಡ್ರೇಟೆಡ್ ಆಗಿರಿಸುವ ಜೊತೆಗೆ ರಾತ್ರಿ ಪಾಳಿಯಲ್ಲಿ ತಾಜಾತನದಿಂದಿರಿಸಲು ಸಹಾಯಕ.