ಕರ್ನಾಟಕ

karnataka

ETV Bharat / sukhibhava

ಮಕ್ಕಳ ಬೆಳವಣಿಗೆಗೆ ರಾಗಿ ಪ್ರಮುಖ ಆಹಾರ : ಅಧ್ಯಯನ

ಪರಿಣಾಮ ಅಕ್ಕಿಯನ್ನು ರಾಗಿಯೊಂದಿಗೆ ಸೇರಿಸಿ ಬಳಸುವುದು ಅಥವಾ ರಾಗಿಯನ್ನೇ ನೇರವಾಗಿ ಬಳಕೆ ಮಾಡಿ ಸೇವಿಸುವ ಮಕ್ಕಳ ಬೆಳವಣಿಗೆಗೆ ಪೂರಕ ಎಂದು ಈ ಅಧ್ಯನದಿಂದ ತಿಳಿದು ಬಂದಿದೆ. ರಾಗಿ ವ್ಯಾಪಕ ಶ್ರೇಣಿಯ ಪೋಷಕಾಂಶಗಳ ಬುಟ್ಟಿಯಾಗಿದೆ. ಈ ಕಾರಣಕ್ಕೆ ಪ್ರಪಂಚದಾದ್ಯಂತ ಹಲವಾರು ಸಂಸ್ಥೆಗಳಲ್ಲಿ ನಾಲ್ಕು ವರ್ಷಗಳವರೆಗೆ ಇದರ ಮೇಲೆ ಅಧ್ಯಯನ ನಡೆಸಲಾಗಿದೆ..

ಮಕ್ಕಳ ಬೆಳವಣಿಗೆಗೆ ರಾಗಿ ಪ್ರಮುಖ ಆಹಾರ
ಮಕ್ಕಳ ಬೆಳವಣಿಗೆಗೆ ರಾಗಿ ಪ್ರಮುಖ ಆಹಾರ

By

Published : Mar 14, 2022, 6:58 PM IST

ರಾಗಿಗಳ ಪೌಷ್ಟಿಕಾಂಶದ ಪ್ರಯೋಜನಗಳನ್ನು ಪರೀಕ್ಷಿಸಿರುವ ಸಂಶೋಧಕರು, ಮಕ್ಕಳು ಮತ್ತು ಹದಿಹರೆಯದವರಲ್ಲಿ ಪ್ರಮಾಣಿತ ಊಟದಲ್ಲಿ ಇದನ್ನು ಬಳಕೆ ಮಾಡಿದರೆ 26-39%ರಷ್ಟು ಪೌಷ್ಟಿಕಾಂಶ ಪಡೆಯಬಹುದು ಎಂದು ಕಂಡು ಹಿಡಿದಿದ್ದಾರೆ. ಅಪೌಷ್ಟಿಕತೆಯನ್ನು ಹೋಗಲಾಡಿಸುವ ಪ್ರಮುಖ ಆಹಾರ ಎಂದರೆ ಅದು ರಾಗಿ ಎಂದು ಫಲಿತಾಂಶಗಳು ಸೂಚಿಸುತ್ತವೆ.

ಈ ಅಧ್ಯಯನದ ವರದಿಯನ್ನು ನ್ಯೂಟ್ರಿಯೆಂಟ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ ಮತ್ತು ಈ ಮೊದಲೇ ಪ್ರಕಟಿಸಿದ ಎಂಟು ಅಧ್ಯಯನಗಳ ವಿಮರ್ಶೆ ಮತ್ತು ಮೆಟಾ-ವಿಶ್ಲೇಷಣೆಯಾಗಿದೆ. ಈ ಅಧ್ಯಯನವನ್ನು ನಾಲ್ಕು ದೇಶಗಳಲ್ಲಿ ಏಳು ಸಂಸ್ಥೆಗಳು ಕೈಗೆತ್ತಿಕೊಂಡಿದ್ದವು. ಇಂಟರ್ನ್ಯಾಷನಲ್ ಕ್ರಾಪ್ಸ್ ರಿಸರ್ಚ್ ಇನ್ಸ್‌ಟಿಟ್ಯೂಟ್‌ನ ಹಿರಿಯ ವಿಜ್ಞಾನಿ-ಪೋಷಣೆಯ ಡಾ. ಎಸ್ ಅನಿತಾ ಅವರು ಇದರ ನೇತೃತ್ವವಹಿಸಿದ್ದರು.

ಅಧ್ಯಯನದ ಪ್ರಕಾರ ರಾಗಿಗಳಲ್ಲಿ ನೈಸರ್ಗಿಕವಾಗಿ ಹೆಚ್ಚಿನ ಪೋಷಕಾಂಶದ ಅಂಶ ಕಂಡುಬಂದಿದೆ. ವಿಶೇಷವಾಗಿ ಪ್ರೋಟೀನ್, ಸಲ್ಫರ್ ಹೊಂದಿರುವ ಅಮೈನೋ ಆಮ್ಲಗಳು ಮತ್ತು ಕ್ಯಾಲ್ಸಿಯಂ ಗುಣ ಹೊಂದಿದೆ ಎಂದು ಡಾ. ಅನಿತಾ ಹೇಳಿದ್ದಾರೆ.

ಶಿಶುಗಳು, ಶಾಲಾಪೂರ್ವ ಮತ್ತು ಶಾಲೆಗೆ ಹೋಗುವ ಮಕ್ಕಳು ಹಾಗೂ ಹದಿಹರೆಯದವರು ಈ ಅಧ್ಯಯನದ ಭಾಗವಾಗಿದ್ದರು. ಈ ಅಧ್ಯಯನದಲ್ಲಿ ಕೆಲವು ವಿಭಾಗಗನ್ನು ಮಾಡಲಾಗಿದ್ದು, ರಾಗಿ, ಸೋರ್ಗಮ್(ಜೋಳ) ಮತ್ತು ರಾಗಿ ಮಿಶ್ರಣದ ವಿಧಾನವನ್ನು ಬಳಕೆ ಮಾಡಲಾಗಿತ್ತು.

ರಾಗಿ ಆಧಾರಿತ ಊಟವನ್ನು ತಿನ್ನುವ ಮಕ್ಕಳಲ್ಲಿ ಸಾಮಾನ್ಯ ಅಕ್ಕಿ ಆಧಾರಿತ ಮಕ್ಕಳಿಗೆ ಹೋಲಿಸಿದರೆ ಸರಾಸರಿ ಎತ್ತರದಲ್ಲಿ 28.2%, ತೂಕದಲ್ಲಿ 26%, ತೋಳಿನ ಮಧ್ಯದ ಸುತ್ತಳತೆಯಲ್ಲಿ 39% ಮತ್ತು ಎದೆಯ ಸುತ್ತಳತೆಯಲ್ಲಿ 37%ನಷ್ಟು ಹೆಚ್ಚಳವನ್ನು ಗಮನಿಸಲಾಗಿದೆ.

ಇದನ್ನೂ ಓದಿ: ರಷ್ಯಾ ಮತ್ತು ಉಕ್ರೇನ್​ ನಡುವೆ ಮತ್ತೊಂದು ಸುತ್ತಿನ ಮಾತುಕತೆ

3 ತಿಂಗಳಿಂದ 4.5 ವರ್ಷಗಳವರೆಗೆ ರಾಗಿ ಸೇವನೆ ಮಾಡಿದ ಮಕ್ಕಳನ್ನು ಅಧ್ಯಯನ ಮಾಡಲಾಗಿ, ರಾಗಿಯಿಂದ ಇದರಿಂದ ಪೌಷ್ಟಿಕಾಂಶಗಳನ್ನು ಅಭಿವೃದ್ಧಿಪಡಿಸಬಹುದು ಮತ್ತು ರಾಗಿಗಳನ್ನು ಬಳಸಿ ಊಟದಲ್ಲಿ ವೈವಿಧ್ಯತೆಯನ್ನು ಅನುಸರಿಸಬಹುದು ಮತ್ತು ಇದರಿಂದಾಗಿ ಶಾಲೆಯಲ್ಲಿ ಆಹಾರ ಮತ್ತು ತಾಯಿ ಮತ್ತು ಮಗುವಿನ ಉಪಕ್ರಮ ಸೇರಿದಂತೆ ಪೌಷ್ಟಿಕಾಂಶದ ವಿಷಯವನ್ನು ಸುಧಾರಿಸಬಹುದು ಎಂದು ICRISATನ ನಿರ್ದೇಶಕರಾದ ಡಾ. ಜಾಕ್ವೆಲಿನ್ ಹ್ಯೂಸ್ ತಿಳಿಸಿದ್ದಾರೆ.

ಭಾರತದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ಎನ್‌ಐಎನ್) ನಿರ್ದೇಶಕಿ ಹಾಗೂ ಈ ಅಧ್ಯಯನದ ಲೇಖಕಿ ಡಾ. ಹೇಮಲತಾ ತಮ್ಮ ಅನಿಸಿಕೆ ಹಂಚಿಕೊಂಡಿದ್ದು, ರಾಗಿ ಆಧಾರಿತ ಊಟವನ್ನು ಅನುಷ್ಠಾನಕ್ಕೆ ತರಲು ಸಾಂಸ್ಕೃತಿಕವಾಗಿ ಸೂಕ್ಷ್ಮ ಮತ್ತು ರುಚಿಕರವಾದ ಪಾಕವಿಧಾನಗಳನ್ನು ಬಳಸಿಕೊಂಡು ವಿವಿಧ ವಯೋಮಾನದವರಿಗೆ ಮೆನುಗಳನ್ನು ವಿನ್ಯಾಸಗೊಳಿಸುವ ಅಗತ್ಯವಿದೆ ಎಂದಿದ್ದಾರೆ.

ಭಾರತದಲ್ಲಿ ಕೈಗೊಂಡ ಅಧ್ಯಯನದ ಪ್ರಕಾರ, ಪ್ರಮಾಣಿತ ಅಕ್ಕಿ ಆಧಾರಿತ ಊಟವನ್ನು ಆಹಾರ, ತರಕಾರಿಗಳು, ಹಣ್ಣುಗಳು ಸೇರಿಂದಂತೆ ಇತರೆ ಆಹಾರಗಳಿಗೆ ಹೋಲಿಕೆ ಮಾಡಿ ಅದರಿಂದ ದೇಹಕ್ಕೆ ಸಿಗುವ ಅಂಶಗಳನ್ನು ಕಂಡುಕೊಳ್ಳಲಾಗಿದೆ. ಇತರೆ ಆಹಾರಗಳಿಗೆ ಹೋಲಿಕೆ ಮಾಡಿದಾಗ ತಿಳಿದು ಬಂದಿದ್ದೇ ಈ ಎಲ್ಲಾ ಆಹಾರಗಳಿಗಿಂತ ರಾಗಿ ಒಂದು ಕೈಮೇಲೆ ಇದೆ ಎಂದು.

ಪರಿಣಾಮ ಅಕ್ಕಿಯನ್ನು ರಾಗಿಯೊಂದಿಗೆ ಸೇರಿಸಿ ಬಳಸುವುದು ಅಥವಾ ರಾಗಿಯನ್ನೇ ನೇರವಾಗಿ ಬಳಕೆ ಮಾಡಿ ಸೇವಿಸುವ ಮಕ್ಕಳ ಬೆಳವಣಿಗೆಗೆ ಪೂರಕ ಎಂದು ಈ ಅಧ್ಯನದಿಂದ ತಿಳಿದು ಬಂದಿದೆ. ರಾಗಿ ವ್ಯಾಪಕ ಶ್ರೇಣಿಯ ಪೋಷಕಾಂಶಗಳ ಬುಟ್ಟಿಯಾಗಿದೆ. ಈ ಕಾರಣಕ್ಕೆ ಪ್ರಪಂಚದಾದ್ಯಂತ ಹಲವಾರು ಸಂಸ್ಥೆಗಳಲ್ಲಿ ನಾಲ್ಕು ವರ್ಷಗಳವರೆಗೆ ಇದರ ಮೇಲೆ ಅಧ್ಯಯನ ನಡೆಸಲಾಗಿದೆ.

ಮತ್ತೊಬ್ಬ ಅಧ್ಯಯನದ ಲೇಖಕ ಪ್ರೊಫೆಸರ್ ಇಯಾನ್ ಗಿವೆನ್ಸ್ ಗಮನಿಸಿದಂತೆ, ಮಕ್ಕಳ ಅಪೌಷ್ಟಿಕತೆಯನ್ನು ನಿಭಾಯಿಸಲು ಸಹಾಯ ಮಾಡುವುದಲ್ಲದೆ, ಟೈಪ್ 2 ಮಧುಮೇಹವನ್ನು ನಿರ್ವಹಿಸುವಲ್ಲಿ ಪ್ರಮುಖ ಕೆಲಸ ಮಾಡುತ್ತದೆ. ರಕ್ತಹೀನತೆಯನ್ನು ನಿವಾರಿಸುತ್ತದೆ. ಹಾಗೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಬೊಜ್ಜು ಮತ್ತು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.

ABOUT THE AUTHOR

...view details