ಕರ್ನಾಟಕ

karnataka

ETV Bharat / sukhibhava

ಖರ್ಜೂರ ಪ್ರೋಟಿನ್​ಗಳ ಆಗರ.. ತಿಂದ್ರೆ ಆರೋಗ್ಯಕ್ಕೆ ಹಲವು ಲಾಭ..

ಖರ್ಜೂರ ಹಣ್ಣಿನ ಲಾಭಾದಾಯಕ ಪ್ರಯೋಜನ ಕುರಿತು ಮಾಹಿತಿ ಇಲ್ಲಿದೆ.

Eating dates has many health benefits
Eating dates has many health benefits

By

Published : Mar 27, 2023, 5:31 PM IST

ಹೈದ್ರಾಬಾದ್​: ಪವಿತ್ರ ರಂಜಾನ್​ ತಿಂಗಳು ಆರಂಭವಾಗುತ್ತಿದ್ದಂತೆ ಅವರ ಡಯಟ್​ನಲ್ಲಿ ಖರ್ಜೂರ ಪ್ರಮುಖ ಸ್ಥಾನ ಪಡೆಯುತ್ತದೆ. ಕಟ್ಟು ನಿಟ್ಟಿನ ಉಪವಾಸ ಪಾಲನೆಗೆ ಈ ಖರ್ಜೂರ ಅತ್ಯವಶ್ಯಕವಾಗುತ್ತದೆ. ತಜ್ಞರ ಪ್ರಕಾರ, ಖರ್ಜೂರದ ಹಣ್ಣುಗಳು ದೇಹಕ್ಕೆ ತಕ್ಷಣವೇ ಶಕ್ತಿ ಯನ್ನು ನೀಡುತ್ತದೆ. ಜೊತೆಗೆ ಇದು ಉಪವಾಸದ ವೇಳೆ ಆರೋಗ್ಯ ಕಾಪಾಡುವಲ್ಲಿ ಕೂಡ ಪ್ರಮುಖವಾಗಿದೆ. ಜೀರ್ಣಕ್ರಿಯೆಗೆ ಸಹಕಾರಿಯಾಗುವ ಈ ಖರ್ಜೂರದಲ್ಲಿ ಫೈಬರ್​ ಅಂಶ ಸಾಕಷ್ಟಿದೆ. ಅನೇಕ ಮಂದಿ ಖರ್ಜೂರವನ್ನು ರಾತ್ರಿ ನೆನಸಿ ಬೆಳಗ್ಗೆ ತಿನ್ನುವ ಅಭ್ಯಾಸ ರೂಢಿಸಿಕೊಳ್ಳುತ್ತಾರೆ. ಇದರಿಂದ ಹೆಚ್ಚಿನ ಪೋಷಕಾಂಶ ಲಭ್ಯವಾಗುತ್ತದೆ. ಖರ್ಜೂರ ಹಣ್ಣಿನ ಲಾಭಾದಾಯಕ ಪ್ರಯೋಜನ ಕುರಿತು ಮಾಹಿತಿ ಇಲ್ಲಿದೆ.

  • ಖರ್ಜೂರದ ಹಣ್ಣಿನಲ್ಲಿ ಪೊಟಾಶಿಯಂ ಹೇರಳವಾಗಿರುತ್ತದೆ. ಜೊತೆಗೆ ಇದು ಹೃದಯ ಬಡಿತ ಮತ್ತು ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಸಮಸ್ಯೆ ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
  • ಖರ್ಜೂರದ ಹಣ್ಣಿನಲ್ಲಿ ದೇಹಕ್ಕೆ ಬೇಕಾಗುವ ಮಿನರಲ್ಸ್​, ವಿಟಮಿನ್​ ಮತ್ತು ಅಗತ್ಯವಾದ ಪೋಷಕಾಂಶಗಳು ಸಿಗುತ್ತದೆ.
  • ಖರ್ಜೂರದ ಹಣ್ಣಿನಲ್ಲಿ ಕೊಲೆಸ್ಟ್ರಾಲ್​ ಮತ್ತು ಕ್ಯಾಲೋರಿ ಕಡಿಮೆ ಇದ್ದು, ಹೆಚ್ಚಿನ ಪ್ರೊಟೀನ್​ ಇರುತ್ತದೆ. ಇದನ್ನು ತಿನ್ನುವುದರಿಂದ ಬೇಗ ಹಸಿವೆಯಾಗುವುದಿಲ್ಲ. ತೂಕದ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
  • ವಿಟಮಿನ್​ ಎ ಆಂಟಿ ಆ್ಯಕ್ಸಿಡೆಂಟ್​ ರೂಪದಲ್ಲಿ ಖರ್ಜೂರದ ಹಣ್ಣಿನಲ್ಲಿದ್ದು, ಇದು ಕಣ್ಣಿನ ಆರೋಗ್ಯಕ್ಕೆ ಉಪಯುಕ್ತ. ರಿಕೆಟ್ಸ್​ ಮತ್ತಿತ್ತರ ಕಣ್ಣಿನ ಸಮಸ್ಯೆ ನಿವಾರಣೆಗೆ ಖರ್ಜೂರ ಸಹಾಯ ಮಾಡುತ್ತದೆ.
  • ಕ್ಯಾಲ್ಸಿಯಂ, ಮೆಗ್ನಿಶಿಯಂ ಮತ್ತು ತಾಮ್ರದಲ್ಲಿ ಕೂಡ ಯಥೇಚ್ಛವಾಗಿ ಈ ಖರ್ಜೂರ ಹಣ್ಣಿನಲ್ಲಿ ಇರುತ್ತದೆ. ಇದರಲ್ಲಿನ ಕ್ಯಾಲ್ಸಿಯಂ ಹಲ್ಲಿಗೆ ಸಹಾಯ ಮಾಡುತ್ತದೆ. ತಾಮ್ರ ಕೆಂಪು ರಕ್ತ ಕಣದ ಉತ್ಪಾದನೆಗೆ ಸಹಾಯಕವಾಗುತ್ತದೆ. ಮೆಗ್ನಿಶಿಯಂ ಮೂಳೆಗಳ ಆರೋಗ್ಯಕ್ಕೆ ಉಪಯುಕ್ತ ಆಗಿದೆ.
  • ತೂಕ ನಷ್ಟ ನಿರ್ವಹಣೆಯಲ್ಲಿ ಕೂಡ ಇದು ಪ್ರಮುಖ ಕಾರಣವಾಗುತ್ತದೆ. ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವವರು ಡಯಟ್​ನಲ್ಲಿ ಈ ಹಣ್ಣನ್ನು ಸೇರಿಸಬಹುದಾಗಿದೆ
  • ಮಲಬದ್ಧತೆ ನಿವಾರಣೆ ಮಾಡುವುಲ್ಲಿ ಖರ್ಜೂರ ಹಣ್ಣು ಕಾರಣವಾಗಿದೆ. ರಾತ್ರಿ ಇಡೀ ನೆನಸಿ ಈ ಹಣ್ಣನ್ನು ತಿನ್ನುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ.
  • ಖರ್ಜೂರದಲ್ಲಿ ವಿಟಮಿನ್​ ಕೆ ಜೊತೆಗೆ ಬಿ ಕಾಂಪ್ಲೆಕ್ಸ್​ ಇರುತ್ತದೆ ಜೊತೆಗೆ ನಿಯಾಸಿನ್​, ರಿಬೊಫ್ಲಾವಿನ್​ ಪ್ಯಾನ್ತೊತೆನಿಕ್​ ಆಸಿಡ್​, ಪೈರಿಡೊಕ್ಸಿನ್​ ಮುಂತಾದ ಪೋಷಕಾಂಶ ಇರುತ್ತದೆ. ಅಲ್ಲದೇ, ಚಯಾಪಚಯ ಕ್ರಿಯೆಗೆ ಇದು ಸಹಾಕಾರಿಯಾಗೊದೆ.
  • ರಕ್ತದ ಸಕ್ಕರೆ ಮಟ್ಟ ಹೆಚ್ಚಳವಾಗುತ್ತದೆ ಎಂಬ ಕಾರಣಕ್ಕೆ ಜನರು ಖರ್ಜೂರ ತಿನ್ನಲೂ ಹಿಂದೆ ಮುಂದೆ ನೋಡುತ್ತಾರೆ. ಆದರೆ, ಖರ್ಜೂರದಲ್ಲಿರುವ ನೈಸರ್ಗಿಕ ಸಕ್ಕರೆ ಗುಣಗಳು ರಕ್ತದ ಒತ್ತಡವನ್ನು ಹೆಚ್ಚಿಸುವುದಿಲ್ಲ.
  • ಇದರಲ್ಲಿನ ವಿಟಮಿನ್​ ಬಿ 6 ಮೆದುಳನ್ನು ಕ್ರಿಯಾಶೀಲವಾಗಿಡುತ್ತದೆ. ಮೆದುಳನ್ನು ಸಕ್ರಿಯವಾಗಿಡುವಲ್ಲಿ, ನೆನಪಿನ ಶಕ್ತಿ ಹೆಚ್ಚಿಸಲು ಇದು ಸಹಕಾರಿಯಾಗಿದೆ.
  • ಖರ್ಜೂರದಲ್ಲಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮೂತ್ರ ಪಿಂಡ ಕಲ್ಲಿನ​ ಸಮಸ್ಯೆ ಕಡಿಮೆ ಮಾಡುತ್ತದೆ. ಜೊತೆಗೆ ಮೂತ್ರದ ಸೋಂಕು ಸೇರಿದಂತೆ ಇನ್ನಿತರ ಸಮಸ್ಯೆಗೆ ಇದು ಪರಿಹಾರ ನೀಡುತ್ತದೆ.

ABOUT THE AUTHOR

...view details