ಕರ್ನಾಟಕ

karnataka

ETV Bharat / sukhibhava

ನವರಾತ್ರಿ ಉಪವಾಸದಲ್ಲಿ ರುಚಿಕರ, ಆರೋಗ್ಯ ಆಹಾರಗಳನ್ನು ಸುಲಭವಾಗಿ ತಯಾರಿಸಿ.. - ಪ್ರಾರ್ಥನೆಯ ಸಮಯದ ಜೊತೆಗೆ

ನವರಾತ್ರಿ ಸಮಯದಲ್ಲಿ ಬಹುತೇಕರು ಉಪವಾಸ ಆಚರಿಸುತ್ತಾರೆ. ಈ ಉಪವಾಸದ ಸಮಯದಲ್ಲಿ ದೇಹಕ್ಕೆ ಚೈತನ್ಯ ನೀಡುವ ಆಹಾರ ಪದ್ಧತಿಗಳ ಆಯ್ಕೆ ಕೂಡ ಅಗತ್ಯವಾಗಿದೆ.

Easily prepare delicious, healthy foods for Navratri fasting
Easily prepare delicious, healthy foods for Navratri fasting

By ETV Bharat Karnataka Team

Published : Oct 16, 2023, 4:41 PM IST

ನವದೆಹಲಿ: ದುರ್ಗಾ ಪೂಜೆಯು ದುಷ್ಟ ಶಕ್ತಿ ನಿವಾರಣೆ ಮಾಡಿ ಒಳಿತು ಮಾಡುವ ದೇವಿಯ ಆರಾಧನೆ ಸಮಯವಾಗಿದೆ. ಇದು ಪ್ರಾರ್ಥನೆಯ ಸಮಯದ ಜೊತೆಗೆ ರುಚಿಕರವಾದ ಆರೋಗ್ಯಕರ ಆಹಾರ ಸೇವನೆ ಅವಧಿಯಾಗಿದೆ. ನವರಾತ್ರಿ ಸಮಯದಲ್ಲಿ ಬಹುತೇಕರು ಉಪವಾಸ ಆಚರಿಸುತ್ತಾರೆ. ಈ ಉಪವಾಸದ ಸಮಯದಲ್ಲಿ ದೇಹಕ್ಕೆ ಚೈತನ್ಯ ನೀಡುವ ಆಹಾರ ಪದ್ಧತಿಗಳ ಆಯ್ಕೆ ಕೂಡ ಅಗತ್ಯವಾಗಿದೆ. ಈ ಹಿನ್ನೆಲೆ ವೊಲ್ಟ್ಸಾ ಬೆಕೊ, ಹೊಸ ಸಂಪ್ರದಾಯ ಮತ್ತು ಅವಿಷ್ಕಾರದ ಆಹಾರ ಭಕ್ಷ್ಯವೊಂದನ್ನು ತಯಾರಿಸುವ ವಿಧಾನವನ್ನು ಹಂಚಿಕೊಂಡಿದ್ದಾರೆ.

ಸಾಬೂದನ್​ ಕಿಚಡಿ: ಬೇಕಾಗುವ ಸಾಮಗ್ರಿಗಳು: 1 ಕಪ್​ ಸಾಬೂದನ್​, 2 ಮಧ್ಯಮ ಗಾತ್ರದ ಬೇಯಿಸಿದ ಆಲೂಗಡ್ಡೆ, ಅರ್ಧ ಕಪ್​ ಹುರಿದು ಜಜ್ಜಿದ ಕಡಲೇಬೀಜ, 2-3 ಹಸಿರು ಮೆಣಸಿನಕಾಯಿ, 1 ಟೇಬಲ್​ ಸ್ಪೂನ್​ ಜೀರಿಗೆ, 1 ಟೀ ಸ್ಪೂನ್​ ತುಪ್ಪ, ರುಚಿಗೆ ಉಪ್ಪು, ಕತ್ತರಿಸಿದ ಕೊತ್ತಂಬರಿ ಅಲಂಕಾರಕ್ಕೆ

ಮಾಡುವ ವಿಧಾನ: ಸಾಬೂದನ್​ ಅನ್ನು ಚೆನ್ನಾಗಿ ತೊಳೆದು 4-5 ಗಂಟೆ ಚೆನ್ನಾಗಿ ನೆನೆಸಿ, ಒಣಗಿಸಿ, ರಾತ್ರಿಯಿಡಿ ರೆಫ್ರಿಜರೇಟರ್​​ನಲ್ಲಿ ಬಿಡಿ. ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ ಜೀರಿಗೆ ಹಾಕಿ ಬಳಿಕ ಆಲೂಗಡ್ಡೆಯನ್ನು ಚೆನ್ನಾಗಿ ಕಲಸಿ ಮಿಕ್ಸ್​​ ಮಾಡಿ ಅರ್ಧಗಂಟೆ ಬೇಯಿಸಿ, ಬಳಿಕ ಸಾಬೂದನ್​, ಜಜ್ಜಿದ ಕಡಲೇಬೀಜ, ಹಸಿರುವ ಮೆಣಸಿನಕಾಯಿ, ಉಪ್ಪು ಬೆರಸಿ 4-5 ನಿಮಿಷ ಹಾಗೇ ಬಿಸಿ ಮಾಡಿ, ಬಳಿಕ ಕೊತ್ತಂಬರಿ ಸೊಪ್ಪು ಹಾಕಿ ಬಿಸಿಯಾಗಿರುವಾಗಲೇ ಉಣಬಡಿಸಿ

ಸೋರೆಕಾಯಿ ಕೋಪ್ತಾ ಕರಿ:1 ಕಪ್​ ಸೋರೆಕಾಯಿತಿ, ಅರ್ದ ಕಪ್​ ನೀರಿನಲ್ಲಿ ಕಲಿಸಿದ ಹಿಟ್ಟು, ಕೆಂಪು ಮೆಣಸಿನ ಕಾಯಿ ಪುಡಿ, ಅರ್ಧ ಟೀಸ್ಪೂನ್​ ಜೀರಿಗೆ, ಉಪ್ಪು,ಕರಿಯಲು ಎಣ್ಣೆ.

ಕರಿ ಮಾಡಲು ಬೇಕಾಗುವ ಸಾಮಗ್ರಿ: ಚೆನ್ನಾಗಿ ಕಲುಕಿದ ಮೊಸರು, ಅರ್ಧ ಕಪ್​ ಟಮೊಟ ರಸ, ಅರ್ಧ ಸ್ಪೂನ್​​ ಶುಂಠಿ ಪೇಸ್ಟ್​​, ಅರ್ಧ ಚಮಚ ಜೀರಿಗೆ ಪುಡಿ, ಅರ್ಧ ಚಮಚ ಕೊತ್ತಂಬರಿ ಬೀಜದ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು ಅಲಂಕಾರಕ್ಕೆ

ಮಾಡುವ ವಿಧಾನ: ಕೊಫ್ತಾಗೆ: ಸೋರೆಕಾಯಿ, ನೀರು ಕಲುಕಿದ ಹಿಟ್ಟು, ಜೀರಿಗೆ ಪುಡಿ, ಕೆಂಪು ಮೆಣಸಿನ ಪುಡಿ, ಉಪ್ಪು ಹಾಕಿ ಅದನ್ನು ಸಣ್ಣ ಉಂಡೆಯಾಗಿ ಮಾಡಿ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೆ ಕರೆಯಿರಿ.

ಕರಿ ಮಾಡಲು ಮೊಸರು, ಟೊಮೆಟೊ ರಸ, ಶುಂಠಿ ಪೇಸ್ಟ್​​, ಹಸಿರು ಮೆಣಸಿನಕಾಯಿ ಪೇಸ್ಟ್​, ಜೀರಿಗೆ ಪುಡಿ, ದನಿಯಾ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಬಿಸಿ ಮಾಡಿ, ಎಣ್ಣೆ ಬಿಡುವವರೆಗೆ ಫ್ರೈ ಮಾಡಿ. ಬಳಿಕ ಕೊಫ್ತಾವನ್ನು ಸೇರಿಸಿ, ಬಿಸಿ ಮಾಡಿ, ಅಂತಿಮವಾಗಿ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಅಲಂಕರಿಸಿ.

ಫ್ರೂಟ್​ ಸಲಾಡ್​ ಜೊತೆಗೆ ಯೊಗರ್ಟ್​​ : - ಬೇಕಾಗುವ ಸಾಮಗ್ರಿ: ಬಾಳೆಹಣ್ಣು, ಸೇಬು, ದಾಳಿಂಬೆ ಸೇರಿದಂತೆ ಬೇಕಾದ ಹಣ್ಣುಗಳನ್ನು ಚೆನ್ನಾಗಿ ಕತ್ತರಿಸಿ, 1 ಕಪ್​ ಗಟ್ಟಿ ಮೊಸರು, 2 ಟಿಸ್ಪೂನ್​ ಜೇನು ತುಪ್ಪ, ಅರ್ಧ ಟೀಸ್ಪೂನ್​ ಏಲಕ್ಕಿ ಪುಡಿ ರೆಡಿ ಮಾಡಿ ಇಟ್ಟುಕೊಳ್ಳಿ.

ಮಾಡುವ ವಿಧಾನ: ಹಣ್ಣುಗಳನ್ನು ಒಂದು ಬಟ್ಟಲಿಗೆ ಹಾಕಿ, ಅದಕ್ಕೆ ಮೊಸರು, ಜೇನುತುಪ್ಪು ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್​​ ಮಾಡಿ. ಇದನ್ನು ರೆಫ್ರಿಜರೇಟರ್​ನಲ್ಲಿಟ್ಟು ಬೇಕಾದಾಗ ಸವಿಯಬಹುದಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ನಿಮಗೆ ಶಕ್ತಿ ಒದಗಿಸುವ ಸುಲಭ ಬೆಳಗಿನ ಆಹಾರಗಳಿವು.. ಹಾಗಾದರೆ ನಿಮ್ಮ ಮೆನುವಿನಲ್ಲಿ ಇವುಗಳಿವೆಯಾ ಚಕ್​ ಮಾಡಿ!

ABOUT THE AUTHOR

...view details