ಕೇವಲ ದುಬಾರಿ ಆಹಾರದಲ್ಲಿ ಮಾತ್ರ ಅಗತ್ಯವಾದ ಪ್ರೋಟಿನ್, ವಿಟಮಿನ್ ಮತ್ತು ಇತರ ಪೋಷಕಾಂಶಗಳಿವೆ ಇದೆ ಎಂದು ಕೆಲ ತರಕಾರಿ ಬಗ್ಗೆ ಅಸಡ್ಡೆಯನ್ನು ಹೊಂದಿರುತ್ತೇವೆ. ಆದರೆ, ಇದು ತಪ್ಪು. ಪ್ರತಿಯೊಂದು ತರಕಾರಿಗಳು ತನ್ನದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿರುತ್ತದೆ. ಈ ಬಗ್ಗೆ ನಮಗೆ ಮಾಹಿತಿ ಕೊರತೆ ಇರುತ್ತದೆ ಅಷ್ಟೆ. ಅಂತಹದ್ದೆ ಒಂದು ತರಕಾರಿ ನುಗ್ಗೇಕಾಯಿ. ಅನೇಕ ಮಂದಿ ನುಗ್ಗೇಕಾಯಿ ಬಗ್ಗೆ ಅಷ್ಟಾಗಿ ಒಲವನ್ನು ಹೊಂದಿರುವುದಿಲ್ಲ. ಆದರೆ, ಇದು ಪೋಷಕಾಂಶಗಳ ಆಗಾರವಾಗಿದೆ. ಪ್ರತಿಯೊಬ್ಬರಿಗೆ ಲಭವಿಸುವ ಕಡಿಮೆ ವೆಚ್ಚದ ಪೋಷಕಾಂಶ ಭರಿತ ತರಕಾರಿ ಇದಾಗಿದೆ. ಈ ನುಗ್ಗೇಕಾಯಿ ಸೇವನೆಯಿಂದ ಆಗುವ ಪ್ರಯೋಜನಗಳು ಒಂದೆರಡಲ್ಲ. ಉತ್ತಮ ಆರೋಗ್ಯಕ್ಕೆ ಬೇಕಾದ ಸಂಪೂರ್ಣ ಅಂಶ ಇದರಲ್ಲಿ ಲಭ್ಯವಾಗುತ್ತದೆ.
ಮೂಳೆ ಬೆಳವಣಿಗೆಗೆ ಇದು ಸಹಕಾರಿ: ಮಹಿಳೆಯರಲ್ಲಿ ಮೂವತ್ತು ವರ್ಷ ಆಗುತ್ತಿದ್ದಂತೆ ಮೂಳೆಗಳ ಸವೆಯುವಿಕೆ ಆರಂಭವಾಗುತ್ತದೆ. ಅಲ್ಲದೇ, ಬೆಳೆಯುವ ಮಕ್ಕಳ ಮೂಳೆಗಳಗಳನ್ನು ಬಲಗೊಳಸಿಬೇಕು ಎಂದರೆ ನುಗ್ಗೇಕಾಯಿಯನ್ನು ಸೇವಿಸಿ ಎನ್ನುತ್ತಾರೆ ತಜ್ಞರು. ನುಗ್ಗೇಕಾಯಿ ಮಾತ್ರವಲ್ಲದೇ, ನುಗ್ಗೇಸೊಪ್ಪಿನಲ್ಲೂ ಮೂಳೆಗಳ ಆರೋಗ್ಯ ಬಲಪಡಿಸುವ ಕ್ಯಾಲ್ಸಿಯಂ ಅಂಶ ಇದ್ದು, ಇದು ನಿಮ್ಮನ್ನು ಆರೋಗ್ಯದಿಂದ ಇರಿಸಲು ಸಹಾಯ ಮಾಡುತ್ತದೆ.
ಗರ್ಭಿಣಿಯರಿಗೆ ಪ್ರಯೋಜನ: ಕ್ಯಾಲ್ಸಿಯಂ ಮಾತ್ರವಲ್ಲದೇ, ಇದರಲ್ಲಿ ಕಬ್ಬಿಣ ಮತ್ತು ಇತರ ಆರೋಗ್ಯಕರ ಪ್ರೋಟಿನ್ ಮತ್ತು ಮಿನರಲ್ಸ್ ಲಭ್ಯವಾಗಲಿದೆ, ಇದು ಮಹಿಳೆಯರಲ್ಲಿ ಋತುಚಕ್ರದ ಸಮಸ್ಯೆ ನಿವಾರಣೆ ಮಾಡುವುದರ ಜೊತೆಗೆ ರಕ್ತ ಹೀನತೆಗೆ ಪರಿಹಾರ ನೀಡುತ್ತದೆ. ನುಗ್ಗೇಕಾಯಿ ಗರ್ಭಾಶಯದಲ್ಲಿನ ಚೀಲಗಳು ಅಥವಾ ಫೈಬ್ರಾಯ್ಡ್‌ಗಳ ಗಾತ್ರವನ್ನು ಕಡಿಮೆ ಮಾಡುವುದು. ಈ ನುಗ್ಗೇಕಾಯಿಯನ್ನು ವಿಶೇಷವಾಗಿ ಗರ್ಭಿಣಿಯರು ತಮ್ಮ ಆಹಾರದಲ್ಲಿ ಸೇರಿಸುವುದು ಅವಶ್ಯ. ಇದು ಮಗುವಿನ ಜನನ ಸಂಬಂಧ ಉಂಟಾಗುವ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಿ. ಎದೆ ಹಾಲು ಉತ್ಪಾದಿಸುವಲ್ಲಿ ಸಹಾಯ ಮಾಡುತ್ತದೆ.