ಬೆಂಗಳೂರು: ಬಿರು ಬೇಸಿಗೆಯ ನಡುವೆ ಸುರಿಯುವ ಮಳೆ ಮನಸ್ಸಿಗೆ ಮುದ ನೀಡುವ ಜೊತೆಗೆ ಬಾಯಿ ಚಪ್ಪಲವನ್ನು ಹೆಚ್ಚಿಸುತ್ತದೆ. ಬೇಸಿಗೆಯಲ್ಲಿ ತಂಪು ಪಾನೀಯ ಕೇಳುವ ಮನ, ಮಳೆ ಬಂದಾಕ್ಷಣ ಬಿಸಿ ಬಿಸಿ ರುಚಿಕರ ಪಾನೀಯ ಸೇವಿಸುವಂತೆ ಬಯಕೆ ಮೂಡಿಸುತ್ತದೆ. ಬೇಸಿಗೆ ಅವಧಿಯಲ್ಲಿ ಬೀಳುವ ಅಕಾಲಿಕ ಮಳೆಗಳು ಸೋಂಕುಗಳಿಗೂ ಕಾರಣವಾಗುವ ಹಿನ್ನಲೆ ಆರೋಗ್ಯಯುತ ಪಾನೀಯಗಳ ಆಯ್ಕೆ ಉತ್ತಮವಾಗಿರುತ್ತದೆ. ಜೊತೆಗೆ ಎರಡೂ ಹವಾಗುಣಕ್ಕೆ ಹೊಂದಿಕೊಳ್ಳುವಂತೆ ಇರಬೇಕಿದೆ. ಸಂಜೆ ಸುರಿಯುವ ಮಳೆಗೆ ಬಿಸಿ ಬಿಸಿ ಪಾನೀಯಗಳು ಆರೋಗ್ಯದ ಜೊತೆಗೆ ಮನಸ್ಸು ತಣಿಸುತ್ತದೆ. ಅಂತಹ ಕೆಲವು ರುಚಿಕರ ಪಾನೀಯಗಳ ರೆಸಿಪಿ ಇಲ್ಲಿದೆ.
ಕುಲ್ಹದ್ ವಾಲಿ ಚಾಯ್: ಚಾಯ್ ಎಂಬುದು ಬಹುತೇಕರ ನೆಚ್ಚಿನ ಪಾನೀಯ. ಇಂತಹ ಚಾಯ್ ಎನ್ನು ಇಲ್ಲ ಎನ್ನುವುದು ಸಾಧ್ಯವಿಲ್ಲ. ಅದರಲ್ಲೂ ಕುಲ್ಹದ್ ವಾಲಿ ಚಾಯ್ ಅನ್ನು ಒಮ್ಮೆ ಸೇವಿಸಿದರೆ, ಅದನ್ನು ಮತ್ತೆ ಸೇವಿಸದೇ ಇರಲಾರಿರಿ. ಸಂಪ್ರದಾಯಿಯ ಮಣ್ಣಿನ ಕಪ್ನಲ್ಲಿ ನೀಡುವ ಈ ಚಾಯ್ಗಳು ಅನೇಕ ಆರೋಗ್ಯಯುತ ಪ್ರಯೋಜನ ಹೊಂದಿದ್ದು, ಗುಣಮಟ್ಟದ ಅನುಭವ ಅನ್ನು ನೀಡುತ್ತದೆ. ಆಧುನಿಕ ಕಾಲದಲ್ಲಿ ಮಣ್ಣಿನ ಕಪ್ಗಳು ಕಡಿಮೆಯಾದರೂ, ಈ ಟೀ ಜನಪ್ರಿಯತೆ ಮಾತ್ರ ಕುಗ್ಗಿಲ್ಲ. ಅನೇಕ ಕಡೆ ಇದೀಗ ಮಡಕಾ ಚಾ ಎಂದು ಇದು ಜನಪ್ರಿಯಗೊಂಡಿದೆ.
ಹಾಟ್ ಚಾಕೋಲೆಟ್: ಚಾಕೋಲೆಟ್ ಪ್ರಿಯರು ನೀವಾಗಿದ್ದರೆ, ಇದು ನಿಮಗೆ ಉತ್ತಮ ಆಯ್ಕೆ ಆಗಲಿದೆ. ಮಳೆಯಲ್ಲಿ ಬಿಸಿ ಪಾನೀಯದ ಜೊತೆಗೆ ಚಾಕೋಲೆಟ್ ಬೆರೆಸಿ ಕುಡಿಯುವುದರ ಮಜವೇ ಬೇರೆ ಆಗಿರುತ್ತದೆ. ಹಾಲಿನಲ್ಲಿ ಈ ಚಾಕೋಕೆಟ್ ಬೆರಸಿ ಕೂಡಿದರೆ, ನಿಮ್ಮ ನಾಲಿಗೆ ಮತ್ತಷ್ಟು ಬಾಯಿ ಚಪ್ಪರಿಸುವಂತೆ ಮಾಡುತ್ತದೆ. ಜೊತೆಗೆ ಹೊಸ ಉತ್ಸಾಹವೂ ಮೂಡಿಸುತ್ತದೆ.