ಕರ್ನಾಟಕ

karnataka

ETV Bharat / sukhibhava

ಸಾಕಷ್ಟು ನೀರು ಕುಡಿಯುರಿ.. ಇಲ್ಲದಿದ್ದರೆ ಸಮಸ್ಯೆಗಳು ಎದುರಾಗುತ್ತವೆ.. - ನೀರಿನೊಂದಿಗೆ ಆಟ

ನೀರು ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ತಿಳಿದಿದೆ.. ಅತಿ ಹೆಚ್ಚು ನೀರು ಕುಡಿಯುವುದರಿಂದ ದೇಹ ಉಂಟಾಗುವ ಲಾಭಗಳೇ ಅಧಿಕ.. ಆದರೆ ನೀವು ನೀರಿನಿಂದ ದೂರವಿದ್ದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ನೀರು ಕುಡಿಯಲು ಇಲ್ಲಿ ಕೆಲವೊಂದು ಉಪಾಯಗಳಿವೆ..

Drinking enough water  there will be problems  Water is essential for metabolism  ಸಾಕಷ್ಟು ನೀರು ಕುಡಿಯುರಿ  ಇಲ್ಲದಿದ್ದರೆ ಸಮಸ್ಯೆಗಳು ಎದುರಾಗುತ್ತವೆ  ನೀರು ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ತಿಳಿದಿದೆ  ನೀರು ಕುಡಿಯುವುದರಿಂದ ದೇಹ ಉಂಟಾಗುವ ಲಾಭ  ನೀರು ಕುಡಿಯಲು ಇಲ್ಲಿ ಕೆಲವೊಂದು ಉಪಾಯ  ಆಕರ್ಷಿತಕ್ಕೆ ಹೆಚ್ಚು ಒಲವು  ಹಸಿವಾದಾಗ ನೀರು ಸೇವನೆ  ನೀರಿನೊಂದಿಗೆ ಆಟ  ಜೀರ್ಣ ಕ್ರಿಯೆಗೆ ನೀರು ಅತ್ಯಗತ್ಯ
ಸಾಕಷ್ಟು ನೀರು ಕುಡಿಯುರಿ

By

Published : Feb 25, 2023, 2:31 PM IST

ಜೀರ್ಣ ಕ್ರಿಯೆಗೆ ನೀರು ಅತ್ಯಗತ್ಯ. ಸಾಕಷ್ಟು ನೀರು ಕುಡಿಯುವುದರಿಂದ ನಮ್ಮ ಆರೋಗ್ಯ ಸಮಸ್ಯೆಗಳನ್ನು ಅರ್ಧದಷ್ಟು ಕಡಿಮೆ ಮಾಡಬಹುದು!.. ಇದು ಗೊತ್ತಿದ್ದರೂ ನೀರು ಕುಡಿಯಲು ಇಷ್ಟಪಡದವರ ಸಂಖ್ಯೆಯೇ ಹೆಚ್ಚು. ಅದಕ್ಕಾಗಿಯೇ ನೀವು ನಿರ್ಜಲೀಕರಣವನ್ನು ತಪ್ಪಿಸಬಹುದು, ವಿಶೇಷವಾಗಿ ಬೇಸಿಗೆಯಲ್ಲಿ ನೀರನ್ನು ಕುಡಿಯಲು ವಿವಿಧ ಮಾರ್ಗಗಳನ್ನು ಕಂಡು ಹಿಡಿಯುವ ಮೂಲಕ ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದಾಗಿದೆ.

ತಜ್ಞರು ಪ್ರತಿ ದಿನ ನಿರ್ದಿಷ್ಟ ಸಮಯದಲ್ಲಿ ನೀರನ್ನು ಕುಡಿಯಲು ಕಡ್ಡಾಯವಾಗಿ ಸೂಚಿಸುತ್ತಾರೆ.. ಅದು ಯಾವ ಸಮಯ ಎಂಬುದು ತಿಳಿಯೋಣ ಬನ್ನಿ..

⚛ ಬೆಳಗ್ಗೆ ಎದ್ದಾಗ ಎರಡು ಲೋಟ ನೀರು ಕುಡಿಯಬೇಕು. ಇದರಿಂದ ಎಲ್ಲ ಅಂಗಗಳು ಸರಿಯಾಗಿ ಕೆಲಸ ಮಾಡುತ್ತವೆ ಎಂಬುದು ತಜ್ಞರ ಸಲಹೆ..

⚛ ಟಿಫಿನ್ ಅಥವಾ ಊಟದಂತಹ ಯಾವುದೇ ಆಹಾರಕ್ಕೆ ಅರ್ಧ ಗಂಟೆ ಮೊದಲು ಒಂದು ಲೋಟ ನೀರು ಕುಡಯಬೇಕು. ಈ ಕಾರಣದಿಂದಾಗಿ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ವೈದ್ಯರ ಮಾತಾಗಿದೆ..

⚛ಸ್ನಾನ ಮಾಡುವ ಮೊದಲು ಒಂದು ಲೋಟ ನೀರು ಕುಡಿಯಿರಿ. ಇದರಿಂದ ಅಧಿಕ ರಕ್ತದೊತ್ತಡವನ್ನು ತಡೆಯಬಹುದಾಗಿದೆ ಎಂದು ಡಾಕ್ಟರ್​ ಹೇಳುತ್ತಾರೆ..

⚛ ರಾತ್ರಿ ಮಲಗುವ ಅರ್ಧ ಗಂಟೆ ಮೊದಲು ಒಂದು ಲೋಟ ನೀರು ಕುಡಿಯುವುದರಿಂದ ಹೃದಯಾಘಾತದ ಸಾಧ್ಯತೆ ಕಡಿಮೆಯಾಗುತ್ತದೆ ಎಂಬುದು ವೈದ್ಯರ ಸಲಹೆ ಆಗಿದೆ..

ಆಕರ್ಷಿತಕ್ಕೆ ಹೆಚ್ಚು ಒಲವು..:ಯಾವುದಾದರೂ ಸುಂದರ ಮತ್ತು ಕಣ್ಣಿಗೆ ಆಹ್ಲಾದಕರವಾಗಿದ್ದರೆ, ಆ ಕೆಲಸ ಮಾಡಲು ಇಷ್ಟವಾಗುತ್ತದೆ. ಸಾಮಾನ್ಯವಾಗಿ ಜಿಮ್‌ಗೆ ಹೋಗಲು ಇಷ್ಟಪಡದವರೂ ಸಹ ಮುದ್ದಾದ ಟ್ರ್ಯಾಕ್‌ಸೂಟ್ ಖರೀದಿಸಿದರೆ ಅದನ್ನು ಧರಿಸಲು ಬಯಸುತ್ತಾರೆ. ಅಲ್ಲದೇ, ಚೆನ್ನಾಗಿ ಜೋಡಿಸಲಾದ ಡೆಸ್ಕ್ ಕೆಲಸದಲ್ಲಿ ಉತ್ಸಾಹವನ್ನು ಹೆಚ್ಚಿಸುತ್ತದೆ. ಅದೇ ತತ್ವವು ನೀರಿಗೆ ಅನ್ವಯಿಸುತ್ತದೆ. ಆದ್ದರಿಂದ ನೀವು ಇಷ್ಟಪಡುವ ಸುಂದರವಾದ ವರ್ಣರಂಜಿತ ಅಥವಾ ಆಕಾರದ ಬಾಟಲಿಯನ್ನು ಖರೀದಿಸಿ. ಅದರಲ್ಲಿ ನೀರು ತುಂಬಿಸಿ.. ನಿಮ್ಮ ಮುಂದೆ ಇಟ್ಟಿಕೊಳ್ಳಿ.. ಇದು ನೀರು ಕುಡಿಯುವ ಸಾಧ್ಯತೆಯನ್ನು ಸುಧಾರಿಸುತ್ತದೆ. ಅದನ್ನು ನೋಡಿದಾಗಲೆಲ್ಲ ನೀರು ಕುಡಿಯುವುದು ನೆನಪಾಗುತ್ತದೆ..

ನೀರಿಗೆ ರುಚಿ ಸೇರಿಸಿ..: ‘ನೀರಿಗೆ ರುಚಿಯಿಲ್ಲ, ಕುಡಿಯಲು ಮನಸ್ಸಿಲ್ಲ’ ಎಂದು ಅನೇಕರಿಗೆ ಅನಿಸುವುದು ಸಹಜ. ಈ ಸಂದರ್ಭದಲ್ಲಿ ನೀರಿಗೆ ರುಚಿಕರವಾಗಿ ಮತ್ತು ಕುಡಿಯಲು ಸುಲಭವಾಗುವಂತೆ ನೀವು ಕೆಲವು ರುಚಿಗಳನ್ನು ಸೇರಿಸಲು ಪ್ರಯತ್ನಿಸಬಹುದು. ಆದರೆ, ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಕೃತಕ ರುಚಿಗಳನ್ನು ಸೇರಿಸುವ ಅಗತ್ಯವಿಲ್ಲ. ಮನೆಯಲ್ಲಿ ಲಭ್ಯವಿರುವ ಹಣ್ಣುಗಳೊಂದಿಗೆ ನೀರನ್ನು ರುಚಿ ಮಾಡಬಹುದು. ಇದಕ್ಕಾಗಿ ಪುದೀನಾ ಎಲೆಗಳು, ಕಲ್ಲಂಗಡಿ ಚೂರುಗಳು, ಸ್ಟ್ರಾಬೆರಿ, ಕೀರಾ ಇವುಗಳಲ್ಲಿ ಯಾವುದಾದರೂ ಒಂದನ್ನು ಆರಿಸಿ ಅದರ ತುಂಡುಗಳನ್ನು ನೀರಿನಲ್ಲಿ ಹಾಕಿ ಫ್ರಿಡ್ಜ್ ನಲ್ಲಿಟ್ಟರೆ ಒಳ್ಳೆಯದು. ಹಣ್ಣುಗಳಲ್ಲಿನ ಪೋಷಕಾಂಶಗಳ ಜೊತೆಗೆ, ಅವುಗಳ ಸುವಾಸನೆಯು ನೀರಿನಲ್ಲಿ ಹೀರಲ್ಪಡುತ್ತದೆ.. ಹೀಗೆ ಮಾಡುವುದರಿಂದ ನೀರು ಹೆಚ್ಚು ಸೇವಿಸಲು ಇಷ್ಟವಾಗುತ್ತದೆ..

ಹಸಿವಾದಾಗ ನೀರು ಸೇವನೆ..: ಕೆಲವೊಮ್ಮೆ ನಮ್ಮ ದೇಹವು ಬಾಯಾರಿಕೆಯನ್ನು ಹಸಿವು ಎಂದು ಭಾವಿಸುತ್ತದೆ. ಅದಕ್ಕಾಗಿಯೇ ನಮಗೆ ಬಾಯಾರಿಕೆಯಾದಾಗಲೆಲ್ಲ ಹಸಿವು ಮತ್ತು ಹೆಚ್ಚು ತಿನ್ನುತ್ತೇವೆ. ಇದರಿಂದಾಗಿ ಅನಗತ್ಯ ಕ್ಯಾಲೋರಿಗಳು ದೇಹವನ್ನು ಪ್ರವೇಶಿಸಿ ನಮ್ಮನ್ನು ದಪ್ಪವಾಗಿಸುತ್ತದೆ.. ಆದ್ದರಿಂದ ನಿಮಗೆ ಹಸಿವಾದಾಗ ಸ್ವಲ್ಪ ನೀರು ಕುಡಿಯಿರಿ. ನಂತರ ಹತ್ತು ನಿಮಿಷ ಕಾಯಿರಿ. ಹಸಿವು ಕಡಿಮೆಯಾದರೂ ಪರವಾಗಿಲ್ಲ. ಇಲ್ಲದಿದ್ದರೆ, ಯಾವುದೇ ಆರೋಗ್ಯಕರ ಆಹಾರವನ್ನು ಸೇವಿಸಿ. ಹೀಗೆ ಮಾಡುವುದರಿಂದ ತೂಕ ಹೆಚ್ಚಾಗುವುದನ್ನು ತಪ್ಪಿಸಬಹುದಾಗಿದೆ..

ನೀರಿನೊಂದಿಗೆ ಆಟ..: ಕುಡಿಯುವ ನೀರು ಒಂದು ಕೆಲಸ ಎಂದು ಪರಿಗಣಿಸಿದರೆ, ವರ್ಷಗಟ್ಟಲೆ ನೀರಸವಾಗಬಹುದು. ಅದಕ್ಕಾಗಿಯೇ ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ಉತ್ತಮ ಅಭ್ಯಾಸ. ಒಂದು ಸಣ್ಣ ಕೆಲಸವನ್ನು ಮುಗಿಸಿ.. ಸ್ವಲ್ಪ ನೀರು ಕುಡಿಯಿರಿ. ಅಂತೆಯೇ, ನೀರನ್ನು ಕುಡಿಯಲು ಜನರಿಗೆ ನೆನಪಿಸಲು ವಿವಿಧ ರೀತಿಯ ಅಪ್ಲಿಕೇಶನ್‌ಗಳನ್ನು ಬಳಸಬಹುದಾಗಿದೆ.. ಹೀಗೆ ನೀರನ್ನು ಕುಡಿದು ಹೆಚ್ಚು ಆರೋಗ್ಯವಂತರಾಗಿ..

ಓದಿ:ಹೃದ್ರೋಗಿಗಳಿಗೆ ಲಸಿಕೆ ಮಾದರಿ ಚಿಕಿತ್ಸೆ.. ಏನಿದರ ವಿಶೇಷತೆ?

ABOUT THE AUTHOR

...view details