ನ್ಯೂಯಾರ್ಕ್:ಪ್ರತಿನಿತ್ಯ ಆಲ್ಕೋಹಾಲ್ ಸೇವನೆ ಮಾಡುವುದರಿಂದ ಕೂಡ ರಕ್ತದೊತ್ತಡದ ಮಟ್ಟ ಹೆಚ್ಚಲಿದೆ ಎಂದು ಅಧ್ಯಯನ ತಿಳಿಸಿದೆ. ಈ ಕುರಿತು ಸೆವೆನ್ ಇಂಟರ್ನ್ಯಾಷನಲ್ ರಿಸರ್ಚ್ ಅಧ್ಯಯನ ಪ್ರಕಟಿಸಿದೆ. ಅಧಿಕ ರಕ್ತದೊತ್ತಡ ಹೊಂದಿರದ ವಯಸ್ಕರಲ್ಲೂ ವಯಸ್ಕರು ನಿತ್ಯ ಮದ್ಯ ಸೇವನೆ ವರ್ಷಗಳು ಉರುಳಿದಂತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧ್ಯಯನಗಳು ತೋರಿಸಿವೆ.
ಕಡಿಮೆ ಮದ್ಯ ಸೇವನೆಯಿಂದ ಕಡಿಮೆ ಅಪಾಯ: ಕಡಿಮೆ ಮತ್ತು ಹೆಚ್ಚಿನ ಆಲ್ಕೋಹಾಲ್ ಸೇವನೆಯೊಂದಿಗೆ ಭಾಗವಹಿಸುವವರಲ್ಲಿ ರಕ್ತದೊತ್ತಡದ ಅಳತೆಗಳಲ್ಲಿ ನಿರಂತರ ಹೆಚ್ಚಳವನ್ನು ಮೊದಲ ಬಾರಿಗೆ ವಿಶ್ಲೇಷಣೆ ಖಚಿತಪಡಿಸಿದೆ. ಕಡಿಮೆ ಮಟ್ಟದ ಆಲ್ಕೋಹಾಲ್ ಸೇವನೆ ಕೂಡ ರಕ್ತದೊತ್ತಡದ ಮಟ್ಟವನ್ನು ಹೆಚ್ಚಿಸುವುದು ಪತ್ತೆಯಾಗಿದೆ. ಇದು ಕೂಡ ಹೃದಯ ರಕ್ತನಾಳದ ಅಪಾಯವನ್ನು ಹೆಚ್ಚಾಗುವಂತೆ ಮಾಡುತ್ತದೆ.
ಆಲ್ಕೋಹಾಲ್ ಸೇವಿಸದವರಿಗೆ ಹೋಲಿಸಿದರೆ ಕಡಿಮೆ ಮಟ್ಟದ ಆಲ್ಕೋಹಾಲ್ ಸೇವಿಸಿದ ವಯಸ್ಕರಲ್ಲಿ ಯಾವುದೇ ಪ್ರಯೋಜನಕಾರಿ ಪರಿಣಾಮ ಕಂಡು ಬಂದಿಲ್ಲ ಎಂದು ಅಧ್ಯಯನಕಾರರು ಮ್ಯಾಕ್ರೋ ವಿನಸೆಟಿ ತಿಳಿಸಿದ್ದಾರೆ. ಅಚ್ಚರಿ ಅಂಶ ಎಂದರೆ ಕಡಿಮೆ ಮಟ್ಟದ ಆಲ್ಕೋಹಾಲ್ ಸೇವನೆ ಮಾಡುವವರಲ್ಲೂ ಕೂಡ ಕಾಲಾನಂತರದಲ್ಲಿ ಅಧಿಕ ರಕ್ತದೊತ್ತಡದ ಬದಲಾವಣೆ ಕಂಡು ಬಂದಿದೆ. ಅಧಿಕ ಮಟ್ಟದ ಆಲ್ಕೋಹಾಲ್ ಸೇವನೆ ಮಾಡುವರಲ್ಲಿ ಅಧಿಕ ಮಟ್ಟದ ರಕ್ತದೊತ್ತಡ ಕಂಡು ಬಂದಿದೆ ಎಂದು ವಿನ್ಸೆಟಿ ತಿಳಿಸಿದ್ದಾರೆ.
ಆಲ್ಕೋಹಾಲ್ ಸೇವನೆಗೆ ಸುರಕ್ಷಿತ ಮಟ್ಟ ಇಲ್ಲ: ಈ ವರ್ಷದ ಆರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೂಡ ಎಷ್ಟು ಪ್ರಮಾಣದ ಆಲ್ಕೋಹಾಲ್ ಸೇವನೆಯು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಇದಕ್ಕೆ ಸುರಕ್ಷಿತ ಪ್ರಮಾಣ ಇಲ್ಲ ಎಂದು ತಿಳಿಸಿತ್ತು.