ಲಕ್ನೋ: ಅರಿವಿಗೆ ಬಾರದಂತೆ ಕುತ್ತಿಗೆ, ತೊಡೆಸಂಧಿ ಸೇರಿದಂತೆ ದೇಹದ ಹಲವೆಡೆ ಕಾಣುವ ನೋವುರಹಿತ ಗಡ್ಡೆಗಳು ಲಿಂಫಾಟಿಕ್ ಕ್ಯಾನ್ಸರ್ಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿ (ಕೆಜಿಎಂಯು) ವೈದ್ಯಕೀಯ ತಜ್ಞರು ಈ ಕುರಿತು ಮಾಹಿತಿ ನೀಡಿದ್ದು, ಪರ್ಯಾಯ ಚಿಕಿತ್ಸೆಯ ಮೊರೆ ಹೋಗಬೇಡಿ ಎಂದು ಸಲಹೆ ನೀಡಿದ್ದಾರೆ.
ಲಿಂಫಾಟಿಕ್ ವ್ಯವಸ್ಥೆ ನಾಳಗಳ ಜಾಲವಾಗಿದ್ದು, ಸೋಂಕು ಮತ್ತು ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಲಿಂಫಾ ಗಡ್ಡೆಗಳು ಸಣ್ಣದಾಗಿದ್ದು, ದೇಹದೆಲ್ಲೆಡೆ ಬೀನ್ ಆಕೃತಿಯ ಗಡ್ಡೆಯ ಟಿಶ್ಯೂಗಳನ್ನು ಕಾಣಬಹುದು. ದೇಹ ಸೋಂಕಿನ ವಿರುದ್ಧ ಹೋರಾಡುವಾಗ ಈ ಲಿಂಫಾಗಳು ಊದಿಕೊಳ್ಳುತ್ತವೆ. ಆದಾಗ್ಯೂ ಲಿಂಫಾ ನೋಡ್ಗಳು ಊತಗೊಂಡು ನೋವಿನ ಲಕ್ಷಣ ತೋರದಿದ್ದರೆ ಅದು ಕ್ಯಾನ್ಸರ್ ಅಪಾಯದ ಚಿಹ್ನೆ.
ಕೆಜಿಎಂಯುನ ಹೆಮಟೋಲಾಜಿ ವಿಭಾಗ ಮಾಜಿ ಮುಖ್ಯಸ್ಥ ಪ್ರೊ.ಎ.ಕೆ.ತ್ರಿಪಾಠಿ ತಿಳಿಸುವಂತೆ, ಈ ಸಮಸ್ಯೆ ಹೊಂದಿರುವ ಶೇ 90ರಷ್ಟು ಮಂದಿಯಲ್ಲಿ 20ರಿಂದ 25 ಮಂದಿ ಈ ಪರಿಸ್ಥಿತಿ ಅಭಿವೃದ್ಧಿ ಕಂಡ ಬಳಿಕ ಆಸ್ಪತ್ರೆಗೆ ಭೇಟಿ ನೀಡುವುದೇ ಹೆಚ್ಚು. ಅದರಲ್ಲೂ ಇವರು ಐದರಿಂದ ಆರು ತಿಂಗಳ ಕಾಲ ಪರ್ಯಾಯ ಚಿಕಿತ್ಸೆ ಮುಗಿಸಿ ಬರುತ್ತಾರೆ ಎಂದರು. ಈ ಸಮಸ್ಯೆ ಹೊಂದಿರುವ ರೋಗಿಗಳಲ್ಲಿ ಉಸಿರಾಟ ಸಮಸ್ಯೆ ಮತ್ತು ದಿಢೀರ್ ತೂಕ ನಷ್ಟ ಉಂಟಾಗುತ್ತದೆ. ಇಂತಹ ರೋಗಿಗಳ ನಿರ್ವಹಣೆ ಸವಾಲಿನ ಕೆಲಸ ಎಂದು ಅವರು ಹೇಳಿದರು.