ಮಕ್ಕಳು ಉತ್ತಮ ದಾರಿಯಲ್ಲಿ ಸಾಗಬೇಕು ಎಂಬ ಕಾರಣಕ್ಕೆ ಹಲವು ಬಾರಿ ಪೋಷಕರು ತುಂಬಾ ಕಟ್ಟು ನಿಟ್ಟಾಗುತ್ತಾರೆ. ಈ ವೇಳೆ, ಕೆಲವು ಕಠಿಣ ಶಿಸ್ತನ್ನು ಕೂಡ ಕೈಗೊಳ್ಳುತ್ತಾರೆ. ಈ ಕ್ರಮಗಳು ಅವರ ಮಾನಸಿಕ ಆರೋಗ್ಯದ ಸಮಸ್ಯೆ ಅಪಾಯಕ್ಕೆ ಕಾರಣವಾಗುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಸಂಬಂಧ ಕೆಂಬ್ರಿಡ್ಜ್ ಮತ್ತು ದುಬ್ಲಿನ್ ವಿಶ್ವವಿದ್ಯಾಲಯದ ಈ ಅಧ್ಯಯನ ನಡೆಸಿದ್ದು, 7,500 ಐರಿಶ್ ಮಕ್ಕಳನ್ನು ಈ ಅಧ್ಯಯನಕ್ಕೆ ಒಳಪಡಿಸಿದೆ. 3 ವರ್ಷದಲ್ಲಿ ಪೋಷಕರ ಕಟ್ಟುನಿಟ್ಟಿನ ಕ್ರಮಕ್ಕೆ ಒಳಗಾದ ಮಕ್ಕಳು ತಮ್ಮ ಸಹ ಗೆಳೆಯರಿಗಿಂತ 1.5 1.5 ಪಟ್ಟು ಹೆಚ್ಚಾಗಿ ಮಾನಸಿಕ ಆರೋಗ್ಯಕ್ಕೆ ಒಳಗಾಗುತ್ತಾರೆ. 9ನೇ ವಯಸ್ಸಿಗೆ ಅವರು ಸ್ಥಿತಿ ಅಪಾಯಕಾರಿ ಆಗುತ್ತದೆ.
ಈ ರೀತಿ ಮಾಡಬೇಡಿ: ಕಟ್ಟುನಿಟ್ಟಿನ ಪೋಷಕರು ದೈಹಿಕ ಅಥವಾ ಮಾನಸಿಕ ಪದೇ ಪದೇ ಶಿಸ್ತಿನ ಕ್ರಮಕ್ಕೆ ಮುಂದಾಗುತ್ತಾರೆ. ಉದಾಹರಣೆಗೆ ಮಕ್ಕಳ ಮೇಲೆ ಜೋರಾಗಿ ಕೂಗಾಡುವುದು, ದೈಹಿಕ ಹಲ್ಲೆ, ಮಕ್ಕಳು ದುರ್ವತನೆ ತೋರಿದಾಗ ಅವರನ್ನು ಪ್ರತ್ಯೇಕವಾಗಿರಿಸುವುದು, ಅವರ ಸ್ವಾಭಿಮಾನವನ್ನು ಹಾನಿಗೊಳಿಸುವುದು ಅಥವಾ ಪೋಷಕರ ಮನಸ್ಥಿತಿಗೆ ಅನುಗುಣವಾಗಿ ಮಕ್ಕಳನ್ನು ಶಿಕ್ಷಿಸುವುದು. ಮಕ್ಕಳ ಮಾನಸಿಕ ಆರೋಗ್ಯ ಲಕ್ಷಣವನ್ನು ಅವರ ಮೂರು, ಐದು ಮತ್ತು ಒಂಭತ್ತನೇ ವಯಸ್ಸಿನಲ್ಲಿ ಪರಿಶೀಲನೆ ನಡೆಸಲಾಗಿದೆ. ಮಕ್ಕಳ ಆತಂಕ ಮತ್ತು ಸಾಮಾಜಿಕ ಹಿನ್ನಡೆ ಮತ್ತು ಆಕ್ರಮಣಕಾರಿ ನಡುವಳಿಕೆ ಮತ್ತು ಹೈಪರ್ ಆಕ್ಟೀವ್ ಮೇಲೆ ಅಧ್ಯಯನ ನಡೆಸಲಾಗಿದೆ.
ಶೇ 10ರಷ್ಟು ಮಕ್ಕಳು ದುರ್ಬಲ ಮಾನಸಿಕ ಹೊಂದಿದ್ದು, ಹೆಚ್ಚಿನ ಅಪಾಯ ಹೊಂದಿರುವುದು ಪತ್ತೆಯಾಗಿದೆ. ಪೋಷಕರ ಶಿಸ್ತಿನ ಕ್ರಮಕ್ಕೆ ಒಳಗಾದ ಮಕ್ಕಳು ಗುಂಪುಗಳ ಮಧ್ಯೆ ಬೀಳುತ್ತಾರೆ. ಪ್ರಮುಖವಾಗಿ ಪೋಷಕರ ಶೈಲಿಯು ಮಾನಸಿಕ ಆರೋಗ್ಯದ ಫಲಿತಾಂಶಗಳನ್ನು ಸಂಪೂರ್ಣವಾಗಿ ನಿರ್ಧರಿಸುವುದಿಲ್ಲ ಎಂದು ಅಧ್ಯಯನವು ಸ್ಪಷ್ಟಪಡಿಸುತ್ತದೆ. ಮಕ್ಕಳ ಮಾನಸಿಕ ಆರೋಗ್ಯವು ಲಿಂಗ, ದೈಹಿಕ ಆರೋಗ್ಯ ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿ ಸೇರಿದಂತೆ ಅನೇಕ ಅಪಾಯಕಾರಿ ಅಂಶಗಳಿಂದ ರೂಪುಗೊಂಡಿದೆ.