ಸಿಡ್ನಿ: ಆನುವಂಶಿಕವಾಗಿ ಟೈಪ್ 2 ಮಧುಮೇಹದ ಅಪಾಯವನ್ನು ಹೊಂದಿರುವವರು ದೈಹಿಕ ಕ್ರಿಯಾಶೀಲರಾಗಿರುವ ಮೂಲಕ ಇದರ ಅಪಾಯ ಕಡಿಮೆ ಮಾಡಬಹುದು ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ. ಸಿಡ್ನಿ ಯುನಿವರ್ಸಿಟಿ ಈ ಸಂಬಂಧ ಅಧ್ಯಯನ ನಡೆಸಿದೆ. ಮಧ್ಯಮದಿಂದ ತೀವ್ರವಾದ ದೈಹಿಕ ಚಟುವಟಿಕೆ ಮತ್ತು ಟೈಪ್ 2 ಮಧುಮೇಹದ ಅಪಾಯ ಕಡಿಮೆ ಮಾಡುವುದನ್ನು ಪತ್ತೆ ಮಾಡಿದ್ದಾರೆ. ಈ ಅಧ್ಯಯನವನ್ನು ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ ಮೆಡಿಸಿನ್ನಲ್ಲಿ ಪ್ರಕಟಿಸಲಾಗಿದೆ.
ಟೈಪ್ 2 ಮಧುಮೇಹ ತಡೆಗಟ್ಟುವಲ್ಲಿ ಉನ್ನತ ಮಟ್ಟದ ದೈಹಿಕ ಚಟುವಟಿಕೆಗಳನ್ನು ಉತ್ತೇಜಿಸಲಾಗಿದೆ. ಇದು ಲಕ್ಷಾಂತರ ಆಸ್ಟೇಲಿಯನ್ನರ ಮೇಲೆ ಪರಿಣಾಮ ಬೀರಿದೆ ಎಂದು ಸಂಶೋಧಕರು ಅಧ್ಯಯನ ಪ್ರಸ್ತುತ ಪಡಿಸಿದ್ದಾರೆ. ಈ ಅಧ್ಯಯನಕ್ಕಾಗಿ ಯುಕೆ ಬಯೋಬ್ಯಾಂಕ್ನ ಮೂಲಕ 59,325 ವಯಸ್ಕರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಅವರೆಲ್ಲರೂ ತಮ್ಮ ಮಣಿಕಟ್ಟಿಗೆ ಆಕ್ಸೆಲೆರೊಮೀಟರ್ ಅನ್ನು ಧರಿಸಿ ದೈಹಿಕ ಚಟುವಟಿಕೆ ಮಾಡಿದ್ದಾರೆ. ಈ ಮೂಲಕ ಅವರ ಆರೋಗ್ಯವನ್ನು ಏಳು ವರ್ಷಗಳ ಕಾಲ ಈ ಬಗ್ಗೆ ಅಧ್ಯಯನ ನಡೆಸಲಾಗಿದೆ.
ಯುಕೆ ಬಯೋಬ್ಯಾಂಕ್ ದತ್ತಾಂಶಗಳು ಮತ್ತು ಸಂಶೋಧನೆಗಳಲ್ಲಿ ಅರ್ಧ ಮಿಲಿಯನ್ ಯುಕೆ ಭಾಗಿದಾರರ ಅನಾಮಧೇಯ ಆನುವಂಶಿಕ, ಜೀವನಶೈಲಿ ಮತ್ತು ಆರೋಗ್ಯ ಮಾಹಿತಿಯನ್ನು ಹೊಂದಿರುವ ದೊಡ್ಡ ಪ್ರಮಾಣದ ಮಾಹಿತಿ ಹೊಂದಿದೆ. ಇದು ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯದೊಂದಿಗೆ ಸಂಬಂಧಿಸಿದ ಆನುವಂಶಿಕ ಗುರುತುಗಳನ್ನು ಒಳಗೊಂಡಿದೆ. ಹೆಚ್ಚಿನ ಆನುವಂಶಿಕ ಅಪಾಯ ಹೊಂದಿರುವವರಲ್ಲಿ ಕಡಿಮೆ ಆನುವಂಶಿಕತೆ ಹೊಂದಿರುವರಿಗಿಂತ 2.4 ಮಟ್ಟದಲ್ಲಿ ಹೆಚ್ಚಿನ ಟೈಪ್ 2 ಡಯಾಬೀಟಿಸ್ ಅಭಿವೃದ್ಧಿಯಾಗುವ ಸಾಧ್ಯತೆ ಇದೆ
ಸುಧಾರಿತದಿಂದ ತೀವ್ರತೆಯ ಚುಟುವಟಿಕೆಯು ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುವ 74 ಪ್ರತಿಶತ ಕಡಿಮೆ ಅಪಾಯದೊಂದಿಗೆ ಸಂಬಂಧಿಸಿದೆ. ಆನುವಂಶಿಕ ಅಪಾಯ ಸೇರಿದಂತೆ ಇತರ ಅಂಶಗಳನ್ನು ಅಧ್ಯಯನದ ಗಣನೆಗೆ ತೆಗೆದುಕೊಳ್ಳಲಾಗಿದೆ.