ಅಹಮದಬಾದ್: ವ್ಯಕ್ತಿಯೊಬ್ಬರ ದೇಹದಿಂದ ಬರೋಬ್ಬರಿ 630 ಕಲ್ಲುಗಳನ್ನು ಅಹಮದಬಾದ್ನ ಖಾಸಗಿ ಆಸ್ಪತ್ರೆ ವೈದ್ಯರು, ಆಧುನಿಕ ತಂತ್ರಜ್ಞಾನ ಬಳಸಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ತೆಗೆದು ಹಾಕಿದ್ದಾರೆ. ಪಿತ್ತಕೋಶ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಪರೀಕ್ಷೆ ನಡೆಸಿದ ವೈದ್ಯರಿಗೆ ವ್ಯಕ್ತಿಯ ದೇಹದಲ್ಲಿ ಕಲ್ಲು ಇರುವುದು ಪತ್ತೆಯಾಗಿದೆ. ಈ ವೇಳೆ, ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಿಗೆ ಬರೋಬ್ಬರಿ 630 ಕಲ್ಲುಗಳನ್ನು ಹೊರತೆಗೆದಿದ್ದು, ಇದೊಂದು ದೊಡ್ಡ ಸಾಧನೆಯೇ ಆಗಿದೆ.
ಏನಿದು ಘಟನೆ: ವ್ಯಕ್ತಿಯೊಬ್ಬ ಸಿಕಲ್ ಸೆಲ್ ಮತ್ತು ಪಿತ್ತ ಕೋಶದ ಸಮಸ್ಯೆಯಿಂದ ಬಳಲುತ್ತಿದ್ದ. ಈ ವ್ಯಕ್ತಿಯಲ್ಲಿ ಜಾಂಡೀಸ್ ಕೂಡ ಪತ್ತೆಯಾಗಿತ್ತು. ಈ ವೇಳೆ ಆತನನ್ನು ತಪಾಸಣೆಗೆ ಒಳಪಡಿಸಿದಾಗ ಪಿತ್ತ ಕೋಶದಲ್ಲಿ ಕಲ್ಲುಗಳಿರುವುದು ಪತ್ತೆಯಾಗಿದೆ. ಇದರಿಂದಾಗಿ ಆತನ ಪಿತ್ತರಸದ ಹರಿವಿಗೆ ಅಡೆತಡೆ ಉಂಟಾಗಿದೆ.
ಈ ವ್ಯಕ್ತಿಯ ದೇಹದಲ್ಲಿ ಕಲ್ಲುಗಳನ್ನು ತೆಗೆಯುವುದಕ್ಕಾಗಿ ವೈದ್ಯರು ಎಂಡೋಸ್ಕೋಪಿಕ್ ರೆಟ್ರೋಗ್ರೇಡ್ ಕೋಲಾಂಜಿಯೋಪಾಂಕ್ರಿಯಾಟೋಗ್ರಫಿ ಚಿಕಿತ್ಸೆಯನ್ನು ಬಳಕೆ ಮಾಡಿ, ಅನುಭವಿ ವೈದ್ಯರ ತಂಡ ಸುಧಾರಿತ ತಂತ್ರಜ್ಞಾನದ ಮೂಲಕ ಈ ಚಿಕಿತ್ಸೆ ನಡೆಸಿದೆ. ಖಾಸಗಿ ಆಸ್ಪತ್ರೆ ವೈದ್ಯರು ಈ ಇಆರ್ಸಿಬಿ ಬಳಿಕ ಲ್ಯಾಪ್ರೋಸ್ಕೋಪಿಕ್ ಕೊಲೆಸೆಕ್ಟೋಮಿ ತಂತ್ರಜ್ಞಾನವನ್ನು ಬಳಕೆ ಮಾಡಿ ಶಸ್ತ್ರಚಿಕಿತ್ಸೆ ನಡೆಸಿ, ಕಲ್ಲುಗಳನ್ನು ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆಯಿಂದ ಪ್ರಯೋಜನ: ಇನ್ನು ಈ ರೋಗಿಗಳ ಹೆಚ್ಚಿನ ಪರೀಕ್ಷೆಗಳನ್ನು ಸೂರತ್‌ನಲ್ಲಿ ನಡೆಸಲಾಗಿದೆ. ಇದರ ವೈದ್ಯಕೀಯ ವೆಚ್ಚವನ್ನು ಚಾರಿಟಬಲ್ ಖಾನ್ಹಿ ಆಸ್ಪತ್ರೆ ಭರಿಸಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಕಾರ್ಯಾಚರಣೆ ಮತ್ತು ಶಸ್ತ್ರಚಿಕಿತ್ಸೆಯ ನಂತರದ ಆರೈಕೆಯನ್ನು ತೆಗೆದುಕೊಳ್ಳಲಾಗಿದೆ. ಹಾಗಾಗಿ ರೋಗಿಗೆ ಯಾವುದೇ ರೀತಿಯ ಹೊರೆಯಾಗದಂತೆ ಅಗತ್ಯ ಆರೈಕೆ ಸಿಗುವಂತೆ ನೋಡಿಕೊಳ್ಳಲಾಗಿದೆ.