ಮೆಹ್ಸಾನ್: ಗುಜರಾತ್ನ ಅಹಮದಾಬಾದ್ನ ಮೆಹ್ಸಾನ್ನಲ್ಲಿ ಜನನವಾದ ಮಗು ಎಲ್ಲರಂತೆ ಸಾಮಾನ್ಯ ಶಿಶುವಾಗಿರಲಿಲ್ಲ. ಸಿಸೇರಿಯನ್ ಮೂಲಕ ಹುಟ್ಟಿದ ಕೂಡಲೇ ಈ ಕೂಸು ಅಳುತ್ತಲ್ಲೂ ಇರಲಿಲ್ಲ. ಜೊತೆಗೆ ದೇಹವೂ ನೀಲಿಯಾಗ ತೊಡಗಿತು. 2.4 ಕೆಜಿ ತೂಕ ಮಗುವ ಆರೋಗ್ಯ ಕ್ಷೀಣಿಸುತ್ತಿದ್ದಂತೆ ಮಗುವಿನ ಈ ಲಕ್ಷಣ ಕಂಡ ಕೂಡಲೇ ವೈದ್ಯರು ಮಗುವನ್ನು ವೆಂಟಿಲೇಟರ್ನಲ್ಲಿಟ್ಟು ಚಿಕಿತ್ಸೆ ಕೊಡಿಸಲು ಮುಂದಾದರು.
ಈ ವೇಳೆ ಮಗುವಿನ ಪ್ರಾಣರಕ್ಷಣೆಗೆ ಪಣತೊಟ್ಟ ವೈದ್ಯರು ತಕ್ಷಣಕ್ಕೆ ಮಗುವನ್ನು ಅಹಮದಬಾದ್ನ ನವಜಾತ ಶಿಶುಗಳ ಆಸ್ಪತ್ರೆಗೆ ದಾಖಲಿಸಿದರು. ಮಗುವಿನ ಈ ಸ್ಥಿತಿಗೆ ಆರಂಭದಲ್ಲಿ ಜನನದ ಸಮಯದಲ್ಲಿ ಉಸಿರುಗಟ್ಟುವಿಕೆ ಕಾರಣವಾಗಿದೆ ಎಂದು ವೈದ್ಯರು ಅಂದಾಜಿಸಿದರು. ಈ ವೇಳೆ, ವೈದ್ಯರಿಗೆ ತಿಳಿದು ಬಂದಿದ್ದು, ಅನಿರೀಕ್ಷಿತ ಸತ್ಯ.
ನವಜಾತ ಶಿಶು ಈ ರೀತಿ ಆಗಲು ಕಾರಣ ಅದರ ರಕ್ತದಲ್ಲಿದ್ದ ನಿಕೋಟಿನ್ ಅಂಶ. ಚಿಕ್ಕ ಮಗುವಿಗೆ ಈ ಮಟ್ಟದ ನಿಕೋಟಿನ್ ಅಂಶ ಪತ್ತೆಯಾಗಲು ಕಾರಣ ಆಕೆಯ ತಾಯಿ ಅತಿಯಾಗಿ ತಂಬಾಕು ಸೇವನೆ ಮಾಡಿದ್ದು ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನಲ್ಲಿ 3000 ದಷ್ಟು ಅಂದರೆ ವಯಸ್ಕರಿಗಿಂತ ಅಪಾಯಕಾರಿ ಮಟ್ಟದಲ್ಲಿ ಕಂಡು ಬಂದಿದೆ.
ಮಗುವಿನ ತಾಯಿ ತಂಬಾಕು ವ್ಯಸನಿಯಾಗಿದ್ದು, ಆಕೆ 15 ವರ್ಷದವಳಿದ್ದಾಗಲೇ ಈ ಚಟಕ್ಕೆ ಬಲಿಯಾಗಿದ್ದರು. ಮಹಿಳೆಯ ಗ್ರಾಮದಲ್ಲಿ ಬಹುತೇಕ ಎಲ್ಲ ಪುರುಷ ಮತ್ತು ಮಹಿಳೆಯರು ತಂಬಾಕು ಸೇವನೆ ಮಾಡುತ್ತಾರೆ. ಈ ತಂಬಾಕಿನ ಚಟ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಮಗುವಿನ ತಾಯಿ ಮಾತ್ರವಲ್ಲದೇ, ತಂದೆ ಕೂಡ ಈ ತಂಬಾಕಿನ ದಾಸಳಾಗಿದ್ದು, ಇದೀಗ ಮಗುವಿನ ಸ್ಥಿತಿ ನೋಡಿ, ಕುಟುಂಬದ ಯೋಗಕ್ಷೇಮದ ದೃಷ್ಟಿಯಿಂದ ತ್ಯಜಿಸಿದ್ದಾರೆ.
ಮಗುವಿನ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರು ಹೇಳುವುದೇನು?:ಮಗುವಿನ ಆರೋಗ್ಯ ಸ್ಥಿತಿ ಕುರಿತು ಮಾತನಾಡಿರುವ ವೈದ್ಯರು, ಮಗುವು ಕೋಮಾಗೆ ಜಾರು ಸ್ಥಿತಿಯಲ್ಲಿ ನಮ್ಮ ಆಸ್ಪತ್ರೆಗೆ ತಂದಿತು. ಮೊದಲಿಗೆ ನಾವು ಮಗುವಿಗೆ ಉಸಿರಾಟದ ಸಮಸ್ಯೆ ಆಗಿದೆ ಎಂದು ಭಾವಿಸಿದೆವು. ಆದರೆ ಮಗುವಿನ ಲಕ್ಷಣಗಳು ಆ ರೀತಿ ಕಾಣಲಿಲ್ಲ. ಜೊತೆಗೆ ಯಾವುದೇ ನರ ಹಾನಿ ಸಮಸ್ಯೆಗಳು ಕಂಡುಬಂದಿಲ್ಲ ಎಂದು ಹಿರಿಯ ನವಜಾತ ಶಿಶುತಜ್ಞ ಡಾ ಆಶೀಶ್ ಮೆಹ್ತಾ ತಿಳಿಸಿದ್ದಾರೆ.
ಈ ವೇಳೆ ಮಗುವಿನ ಆರೋಗ್ಯ ಪರಿಶೀಲನೆಗೆ ವೈದ್ಯಕೀಯ ತಂಡ, ಮಗು ಮತ್ತು ತಾಯಿಯ ಇತಿಹಾಸ ಅಭ್ಯಾಸ ನಡೆಸಿದರು. ಈ ವೇಳೆ, ಮಹಿಳೆ ಆಗ್ಗಿದ್ದಾಂಗೆ ತಂಬಾಕನ್ನು ಕಚ್ಛಾ ರೂಪದಲ್ಲಿ ಸೇವಿಸುತ್ತಿದ್ದರು. ಇದರಿಂದ ಮಗು ಕೂಡ ನಿಕೋಟಿನ್ ಅಪಾಯಕ್ಕೆ ಒಳಗಾಗಿದೆ. ಆಕೆ ಗರ್ಭಿಣಿಯಾಗಿದ್ದಾಗಲೂ ಇದು ಯಾವ ರೀತಿ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಅರಿವಿಲ್ಲದೇ, ದಿನಕ್ಕೆ 10 ರಿಂದ 15 ಬಾರಿ ತಂಬಾಕು ಜಗಿಯುತ್ತಿದ್ದರು.
ಗುಜರಾತ್ ಒರಾಲ್ ಕ್ಯಾನ್ಸರ್ ಕೇಂದ್ರವನ್ನು ಹೊಂದಿದ್ದು, ಈ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ 2020ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ, ಶೇ 41ರಷ್ಟು ಪುರುಷರು ಮತ್ತು ಶೇ 8.7ರಷ್ಟು ಮಹಿಳೆಯರು ಗುಜರಾತ್ನಲ್ಲಿ ತಂಬಾಕು ಸೇವನೆ ಮಾಡುತ್ತಿದ್ದಾರೆ.
ಈ ತಂಬಾಕು ಚಟ ಇದೀಗ ಹುಟ್ಟಲಿರುವ ಮಗುವಿನ ಮೇಲೂ ಪರಿಣಾಮ ಬೀರುತ್ತಿದೆ. ಐದು ದಿನದ ತೀವ್ರ ನಿಗಾದ ಚಿಕಿತ್ಸೆ ಬಳಿಕ ಇದೀಗ ಮಗು ಚೇತರಿಕೆ ಕಂಡಿದೆ. ಮಗುವಿಗೆ ಹಾಲುಣಿಸುವ ಹಿನ್ನಲೆ ತಾಯಿಗೆ ಈ ಚಟದಿಂದ ದೂರ ಇರುವಂತೆ ಕೂಡ ಸಲಹೆ ನೀಡಲಾಗಿದೆ ಎಂದು ವೈದ್ಯರು ಶಿಫಾರಸು ಮಾಡಿದ್ದಾರೆ.
ಇದನ್ನೂ ಓದಿ: ಪೋಷಕರು ಮಗುವಿಗೆ ಹೆಚ್ಚು ಗಮನ ನೀಡಬೇಕೇ? ಏನನ್ನುತ್ತದೆ ಅಧ್ಯಯನ?