ಆಸ್ಟೇಲಿಯಾದ ಮಹಿಳೆಯೊಬ್ಬರ ಮೆದುಳಿನಿಂದ 8 ಸೆಂ.ಮೀ ಉದ್ದದ ಜೀವಂತ ಹುಳುವನ್ನು ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದಿರುವ ಘಟನೆ ನಡೆದಿದ್ದು, ಪ್ರಪಂಚದಲ್ಲೇ ಈ ರೀತಿಯ ಪ್ರಕರಣ ಇದೇ ಮೊದಲಾಗಿದೆ. ಅಚ್ಚರಿ ಅಂಶ ಎಂದರೆ, ಶಸ್ತ್ರ ಚಿಕಿತ್ಸೆ ಬಳಿಕವೂ 8 ಸೆಂಟಿ ಮೀಟರ್ ಉದ್ದದ ಈ ಹುಳು ಜೀವಂತವಾಗಿದ್ದು, ಇದರ ಕುರಿತು ತಿಳಿಯಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
64 ವರ್ಷದ ಮಹಿಳೆ ಮರೆಗುಳಿತ ಮತ್ತು ಖಿನ್ನತೆ ಸಮಸ್ಯೆಯನ್ನು ಅನುಭವಿಸುತ್ತಿರುವುದಾಗಿ ವೈದ್ಯರ ಸಂಪರ್ಕಿಸಿದ್ದಾರೆ. ಇದೇ ವೇಳೆ ಆಕೆ ಹೊಟ್ಟೆ ನೋವು, ಅತಿಸಾರ, ಕೆಮ್ಮು ಮತ್ತು ರಾತ್ರಿ ಬೆವರುವಿಕೆ ಸಮಸ್ಯೆ ಅನ್ನು ಅನುಭವಿಸುತ್ತಿದ್ದರು. ಈ ಸಮಸ್ಯೆಯಿಂದ 2021ರ ಜನವರಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
2022ರಲ್ಲಿ ಅವರ ಈ ಲಕ್ಷಣಗಳು ಖಿನ್ನತೆ ಮತ್ತು ಮರೆವು ಹೆಚ್ಚಾಯಿತು. ಇದರಿಂದ ಆಕೆಯನ್ನು ಇಲ್ಲಿನ ಕ್ಯಾನ್ಬೆರ್ರಾ ಆಸ್ಪತ್ರೆಗೆ ದಾಖಲಿಸಲಾಯಿತು. ಇಲ್ಲಿ ಅವರು ಎಂಆರ್ಐ ಸ್ಕ್ಯಾನ್ಗೆ ಒಳಪಡಿಸಲಾಯಿತು. ಈ ವೇಳೆ ಮಿದುಳಿನ ಬಲ ಬದಿಯಲ್ಲಿ ಜೀವಂತ ಹುಳುಗಳು ಪತ್ತೆಯಾಯಿತು. ಇದು ವೈದ್ಯರನ್ನೇ ಅಚ್ಚರಿ ಗೊಳಿಸಿತು. ತಕ್ಷಣಕ್ಕೆ ಕ್ಯಾನ್ಬೆರ್ರಾ ಆಸ್ಪತ್ರೆಯ ವೈದ್ಯರ ತಂಡ ಇದು ಯಾವ ರೀತಿಯ ಹುಳು ಅದನ್ನು ಹೇಗೆ ತೆಗೆಯಬೇಕು ಎಂಬುದನ್ನು ತಿಳಿಯಲು ತಕ್ಷಣಕ್ಕೆ ತಂಡ ರಚಿಸಿತು.
ನರ ವಿಜ್ಞಾನಿಗಳು, ರಿಂಗ್ಲಿಂಗ್ ವಾರ್ಮ್ (ಸುಳಿಯುವ ಹುಳು) ಎಂದು ಆಲೋಚಿಸಿದಾಗಿ ಸೋಂಕಿನ ರೋಗ ವೈದ್ಯರಾದ ಡಾ ಸಂಜಯ್ ಸೆನನಯಕೆ ತಿಳಿಸಿದರು. ನ್ಯೂರೋಸರ್ಜನ್ಗಳು ನಿಯಮಿತವಾಗಿ ಮೆದುಳಿನ ಸೋಂಕಿನ ಪ್ರಕರಣವನ್ನು ಎದುರಿಸುತ್ತಾರೆ. ಆದರೆ ಈ ರೀತಿಯ ಪ್ರಕರಣಗಳು ಜೀವಮಾನದಲ್ಲಿ ಒಂದಾಗಿದ್ದು, ಯಾರೂ ಕೂಡ ಈ ರೀತಿ ನಿರೀಕ್ಷೆ ಮಾಡಿರುವುದಿಲ್ಲ ಎಂದಿದ್ದಾರೆ.